Badami Constituency: ಅಂದು ಚಿಮ್ಮನಕಟ್ಟಿ, ಇಂದು ಕಾರ್ಯಕರ್ತರ ಅಸಮಾಧಾನ

By Suvarna NewsFirst Published Dec 21, 2021, 9:12 PM IST
Highlights

* ಬಾದಾಮಿ ಕಾಂಗ್ರೆಸ್‌ ಕ್ಷೇತ್ರದಲ್ಲಿ ಭುಗಿಲೆದ್ದ ಅಸಮಾಧಾನ
* ಚಿಮ್ಮನಕಟ್ಟಿ,- ಸಿದ್ದರಾಮಯ್ಯ ಬಣ ಉಗಮ
* ಅಸಮಾಧಾನ ಹೊರಹಾಕಿದ ಚಿಮ್ಮನಕಟ್ಟಿ ಅಭಿಮಾನಿಗಳು

ಬಾಗಲಕೋಟೆ, (ಡಿ.21): ಮೊನ್ನೇ ಕಾಂಗ್ರೆಸ್ ನಾಯಕ ಬಿ.ಬಿ ಚಿಮ್ಮನಕಟ್ಟಿ(Chimmanakatti) ಅವರು  ಸಿದ್ದರಾಮಯ್ಯ(Siddaramaiah ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ರೆ, ಇದೀಗ ಚಿಮ್ಮನಕಟ್ಟಿ ಅಭಿಮಾನಿಗಳು ಅಸಮಧಾನ ಹೊರಹಾಕಿದ್ದಾರೆ. 

ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಸುಮಾರು 45 ವರ್ಷದಿಂದ ಕಾರ್ಯಕರ್ತರ ಜೊತೆಗೂಡಿಸಿಕೊಂಡು ಪಕ್ಷವನ್ನು ಕಟ್ಟಿ ಬೆಳೆಸುವ ಜೊತೆಗೆ ಒಂದೂ ಕಪ್ಪು ಚುಕ್ಕಿ ಇಲ್ಲದೆ ಕಾಪಾಡಿಕೊಂಡು ಬಂದಿದ್ದಾರೆ. ಕಾರಣ ಬಿ.ಬಿ. ಚಿಮ್ಮನಕಟ್ಟಿ ಯವರಿಗೆ ಅನ್ಯಾಯ ವಾಗಿದ್ದೆ ನೀಜವಾದ್ರೆ ಬಾದಾಮಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶ ಗ್ಯಾರಂಟಿ ಎಂದು ಮುಖಂಡ ಶ್ರೀಕಾಂತಗೌಡ ಗೌಡರ ಅಸಮಾಧಾನ ಹೊರಹಾಕಿದರು.

Karnataka Congress Politics: ಬಾದಾಮಿ ಬಿಟ್ಟು ಕೊಡಲ್ವಂತೆ ಚಿಮ್ಮನಕಟ್ಟಿ: ಸಿದ್ದು ಎಲ್ಲಿಂದ ಸ್ಪರ್ಧೆ?

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದಿಢೀರ್ ಬದಲಾವನೆಗೆ ಅಸಮಾಧಾನಗೊಂಡ ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಾರ್ಯಕರ್ತರ ಮಾತು ಕೇಳಿಕೊಂಡು ಬಿಬಿಸಿ ಯವರನ್ನೂ ಕಡೆಗಣಿಸಿ ಪಕ್ಷದ ಹುದ್ದೆಗಳನ್ನು ಬದಲಾಯಿಸಿ ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದಾರೆ ಎಂದರು.

ಜಿಲ್ಲೆಯ ಕೆ ಎಂ ಎಫ್ ನಿರ್ದೇಶಕ ಈರನಗೌಡ ಕರಿಗೌಡ್ರ ಮಾತನಾಡಿ, ಕ್ಷೇತ್ರ ತ್ಯಾಗ ಮಾಡಿದ ಬಿ.ಬಿ. ಚಿಮ್ಮನಕಟ್ಟಿಯವರನ್ನೇ ನಿರ್ಲಕ್ಷ್ಯ ಮಾಡುತ್ತಿರುವುದು ಯಾವ ನ್ಯಾಯ. ಸಿದ್ಧರಾಮಯ್ಯನವರಿಗೆ ಬಿ.ಬಿ. ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ ಮಾಡಿದ್ದೇ ತಪ್ಪಾ. ಶಾಸಕರು ಪಕ್ಷದಲ್ಲಿ ನಡೆದ ಕಾರ್ಯವೈಖರಿ ತಿಳಿಯದೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮನೆ ಹಾಕುತ್ತಿರುವುದು ಸರಿಯಲ್ಲ. ಕೈ ಪಕ್ಷದಲ್ಲಿ ಕಾಣದ ಕೈಗಳು ಇಲ್ಲ ಸಲ್ಲದ ಚಾಡಿ ವಿಷಯಗಳನ್ನ ಹೇಳಿ ಬಿ.ಬಿ.ಸಿ ಹಾಗೂ ಸಿದ್ಧರಾಮಯ್ಯ ನಡುವೆ ಒಡಕು ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. 

ಬಾದಾಮಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಇಬ್ಬಾಗ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕಾರಣ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಅಸಮಾಧಾನಗೊಂಡ ನಾಯಕರನ್ನು ಒಂದುಗೂಡಿಸಿ ಪಕ್ಷಗಳ ಒಡಕು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಶ್ರೀಕಾಂತ್ ಅಡಪಟ್ಟಿ ಮಾತನಾಡಿ, ನಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯನವರು ಆಯ್ಕೆಯಾದ ಮೇಲೆ ಪಕ್ಷ ಇಬ್ಭಾಗವಾಗಿದೆ. ಸಿದ್ದು ಪರ ಕೆಲ ಮುಖಂಡರಿದ್ದರೆ, ಬಿ.ಬಿ.ಸಿ ಪರ ಕೆಲವರಿದ್ದಾರೆ. ಇವರ ನಡುವೆ ಕಾರ್ಯಕರ್ತರು ಏನು ಮಾಡಬೇಕು. ಪಕ್ಷದ ಮುಖಂಡರನ್ನೂ ಕಡೆಗಣಿಸಿ ಪಕ್ಷದ ಚಟುವಟಿಕೆ ನಡೆಸಲಾಗುತ್ತಿದೆ ಕಾರಣ ಶಾಸಕರು, ನಾಯಕರು ಗಮನ ಹರಿಸಿ ಕಾರ್ಯಕರ್ತರನ್ನ ಒಂದುಗೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

click me!