ನನಗೆ 100 ದಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸುವೆ: ವಿ.ಸೋಮಣ್ಣ

By Kannadaprabha News  |  First Published Jun 24, 2023, 5:24 AM IST

ನನಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಡಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಬಹಿರಂಗವಾಗಿಯೇ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. 


ಬೆಂಗಳೂರು (ಜೂ.24): ನನಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಡಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಬಹಿರಂಗವಾಗಿಯೇ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಈ ಸಂಬಂಧ ಪಕ್ಷದ ಬಹುತೇಕ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಪತ್ರವನ್ನೂ ಬರೆದಿದ್ದೇನೆ ಎಂದರು.

ನಾನು 24/7 ಕೆಲಸ ಮಾಡುವ ಮನುಷ್ಯ. ಆದರೆ, ಕಳೆದ ಒಂದೂವರೆ ತಿಂಗಳಿಂದ ನಾನು ಸುಮ್ಮನೆ ಕುಳಿತಿದ್ದೇನೆ. ನನಗೊಂದು ಅವಕಾಶ ಕೊಡಿ. ಮೊದಲಿಗೆ ನೂರು ದಿನ ಅವಕಾಶ ಕೊಟ್ಟು ನೋಡಿ. ನನ್ನ 45 ವರ್ಷಗಳ ರಾಜಕೀಯ ಅನುಭವವನ್ನು ಆಧರಿಸಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಜತೆಗೆ ಪಕ್ಷದ ಸಂಘಟನೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು, ಎಲ್ಲೆಲ್ಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆಯೋ ಅಲ್ಲಿ ವಿಶೇಷ ಗಮನಹರಿಸಿ ಸಂಘಟನೆ ಬಲಪಡಿಸುತ್ತೇನೆ ಎಂದು ಹೇಳಿದರು.

Tap to resize

Latest Videos

ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಹೊರಡಿ: ಅಧಿಕಾರಿಗಳಿಗೆ ಶಾಸಕ ಇಕ್ಬಾಲ್‌ ತರಾಟೆ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಈ ವಿಚಾರವನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಪಕ್ಷದ ವರಿಷ್ಠರೂ ಗಂಭೀರವಾಗಿ ತೆಗೆದುಕೊಂಡು ಒಂದು ಅವಕಾಶ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಪಕ್ಷದ ಇತರ ಎಲ್ಲ ಹಿರಿಯ ನಾಯಕರನ್ನು ಭೇಟಿ ಮಾಡಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಮನವಿ ಮಾಡಿದ್ದೇನೆ. ಕೊಟ್ಟರೆ ಆ ಸ್ಥಾನದಿಂದ ಎಷ್ಟುಗಾಂಭೀರ್ಯವಾಗಿ ಪಕ್ಷವನ್ನು ಮುನ್ನಡೆಸಬೇಕೋ ಅಷ್ಟು ಮುನ್ನಡೆಸುತ್ತೇನೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಮ್ಮ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ನಾಯಕರು. ಚುನಾವಣೆ ಬಳಿಕ ಇದುವರೆಗೂ ಅವರಿಂದ ಒಂದೇ ಒಂದು ಕರೆ ಬಂದಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ. ಚುನಾವಣೆ ವೇಳೆ ನಾನು ಪಕ್ಷದ ವರಿಷ್ಠರ ಆದೇಶವನ್ನು ತಲೆ ಮೇಲೆ ಇಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದೆ. ಬೇರೆ ಏನನ್ನೂ ಯೋಚನೆ ಮಾಡಲಿಲ್ಲ ಎಂದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷೆ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ನಾನು ತೆಗೆದುಕೊಂಡಿರುವ ರಿಸ್‌್ಕ ಇತರ ಯಾವುದೇ ಆಕಾಂಕ್ಷಿಗಳು ತೆಗೆದುಕೊಂಡಿಲ್ಲ. ನಾನು ಏನೇ ತೆಗೆದುಕೊಂಡರೂ ಚಾಲೆಂಜ್‌ ಆಗಿ ತೆಗೆದುಕೊಳ್ಳುತ್ತೇನೆ. ದೇವದುರ್ಗ, ಕೊಪ್ಪಳ, ಚಿಂಚೋಳಿ, ಬಸವಕಲ್ಯಾಣ, ಸಿಂಧಗಿ, ಚನ್ನಪಟ್ಟಣ ಹೀಗೆ ಹಲವು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾನು ಪಕ್ಷದ ಗೆಲುವಿಗೆ ಕಾರಣನಾಗಿದ್ದೇನೆ. ಪಕ್ಷದ ಬೇರೆ ಯಾರೂ ನನ್ನಷ್ಟುಚಾಲೆಂಜ್‌ ಸ್ವೀಕರಿಸಿ ಕೆಲಸ ಮಾಡಿಲ್ಲ. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ನಾನು ಇತರರಿಗಿಂತ ಹಿರಿಯನಾಗಿದ್ದೇನೆ ಎಂದು ಪ್ರತಿಪಾದಿಸಿದರು.

ವಿದ್ಯುತ್‌ ಬಿಲ್‌ ದರ ಹೆಚ್ಚಳ: ಡಿಕೆಶಿ ಸ್ವ ಕ್ಷೇತ್ರ​ದಲ್ಲಿ ಬೆಸ್ಕಾಂ ಕಚೇ​ರಿಗೆ ಮುತ್ತಿಗೆ

ರಾಜಕೀಯ ವಿದ್ಯಮಾನಗಳನ್ನು ಗುರುತಿಸಿ ವ್ಯತ್ಯಾಸಗಳನ್ನು ಸರಿ ಮಾಡುವಂಥ ಒಬ್ಬ ಯಶಸ್ವಿ ಅಧ್ಯಕ್ಷನನ್ನು ಪಕ್ಷ ಕೊಡಲಿದೆ. ಅಧಿವೇಶನಕ್ಕೂ ಮೊದಲೇ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲಾಗುವುದು. ಆದರೆ ಕೇಳಿದವರಿಗೆಲ್ಲ ಪಕ್ಷದ ಅಧ್ಯಕ್ಷ ಸ್ಥಾನಕೊಡಲು ಆಗಲ್ಲ.
- ಡಿ.ವಿ.ಸದಾನಂದಗೌಡ, ಸಂಸದ-ಮಾಜಿ ಕೇಂದ್ರ ಸಚಿವ

click me!