ಬಹುಪತ್ನಿತ್ವ ಕಡಿವಾಣಕ್ಕೆ ಏಕನಾಗರಿಕ ಸಂಹಿತೆ ಜಾರಿ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Jun 24, 2023, 11:40 AM IST

ಹಿಂದೂಗಳಿಗೆ ಓರ್ವ ಪತ್ನಿ ಮಾತ್ರ. ಆದರೆ, ಅದೇ ಮುಸ್ಲಿಮರಿಗೆ 5 ಪತ್ನಿಯರು. ಇಂಥ ಅಸಮಾನತೆ, ಬಹುಪತ್ನಿತ್ವ ಪದ್ಧತಿಗೆ ಕಡಿವಾಣ ಹಾಕಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು. 


ಕೊಪ್ಪಳ (ಜೂ.24): ಹಿಂದೂಗಳಿಗೆ ಓರ್ವ ಪತ್ನಿ ಮಾತ್ರ. ಆದರೆ, ಅದೇ ಮುಸ್ಲಿಮರಿಗೆ 5 ಪತ್ನಿಯರು. ಇಂಥ ಅಸಮಾನತೆ, ಬಹುಪತ್ನಿತ್ವ ಪದ್ಧತಿಗೆ ಕಡಿವಾಣ ಹಾಕಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದ ಶಿವಶಾಂತ ಮಂಗಲ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಭಾರತೀಯರೆಲ್ಲರೂ ಸಮಾನರು. ಜಾತಿ, ಧರ್ಮ ಮೀರಿಯೂ ಭಾರತೀಯರಾಗಿ ಏಕತೆಯಿಂದ ಇರಬೇಕು. ಇದಕ್ಕಾಗಿಯೇ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದ್ದು, ಇದನ್ನು ಕೇಂದ್ರ ಸರ್ಕಾರ ಶೀಘ್ರ ಜಾರಿ ಮಾಡಲಿದೆ. ಆಗ ಎಲ್ಲರೂ ಸಮಾನರಾಗಲಿದ್ದಾರೆ ಎಂದರು.

ಸುಳ್ಳಿಗೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ. ಇವರು ನೀಡಿರುವ ಗ್ಯಾರಂಟಿಯೆಲ್ಲ ಸುಳ್ಳಾಗಲಿವೆ. ಈಗಾಗಲೇ ಗ್ಯಾರಂಟಿ ಜಾರಿ ಮಾಡಲು ಹೆಣಗಾಡುತ್ತಿದ್ದಾರೆ. ಆದರೂ ಆಗುತ್ತಿಲ್ಲ. ಇನ್ನಿಲ್ಲದ ಷರತ್ತು ವಿಧಿಸಿ, ಗ್ಯಾರಂಟಿ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಜು. 4ರೊಳಗಾಗಿ ಗ್ಯಾರಂಟಿ ಕೊಡದಿದ್ದರೆ ವಿಧಾನಸಭೆ ಒಳಗೂ ಮತ್ತು ಹೊರಗೂ ಹೋರಾಟ ಮಾಡುತ್ತೇವೆ. ಹುಲಿಗೆಮ್ಮದೇವಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

undefined

ರಸ್ತೆಯಲ್ಲಿ ಹಾಡಹಗಲೇ ಎಣ್ಣೆಪಾರ್ಟಿ: ಮೂವರು ಪೊಲೀಸರು ಅಮಾನತು

ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಇರಲು ಸಾಧ್ಯವೇ ಇಲ್ಲ. ಒಳಗೊಳಗೆ ಸಿಎಂ ಫೈಟ್‌ ನಡೆದಿದೆ. ಇನ್ನು ಕೆಲಕಾಲದ ನಂತರ ಇದು ಸ್ಫೋಟಗೊಳ್ಳುತ್ತದೆ ಎಂದರು. ಚುನಾವಣೆ ಸೋಲಿಗೆ ನಾವು ಹೆದರುವುದಿಲ್ಲ. ಹಿಂದೆಲ್ಲ ಲೋಕಸಭೆ, ವಿಧಾನ ಸಭೆ ಚುನಾವಣೆಯಲ್ಲಿ ಕೇವಲ ಇಬ್ಬರು ಗೆದ್ದಿದ್ದರೂ ಎದೆಗುಂದಿಲ್ಲ.ಯಾವುದೋ ಚುನಾವಣೆಯಲ್ಲಿ ಸೋತಾಗ ಹೆದರುತ್ತೇವೇನು? ಯಾವುದೋ ಗ್ಯಾರಂಟಿ ತೋರಿಸಿ ಗೆದ್ದಿಲ್ಲ. ಕಾಂಗ್ರೆಸ್ಸಿನವರಿಗೆ ಅಧಿಕಾರ ಸಿಕ್ಕಿದೆ ಎಂದು ಕುಣಿಯಬಹುದು. ಆದರೆ ಜನ ಲೋಕಸಭೆಯಲ್ಲಿ ಸೋಲಿಸಲು ಸೆಡ್ಡು ಹೊಡೆದು ತಯಾರಿಯಾಗಿದ್ದಾರೆ ಎಂದರು.

ನಿರುದ್ಯೋಗಿ ಯುವಕರಿಗೆ .3000, ಮಹಿಳೆಯರಿಗೆ .2000 ಎಂದು ನಾವು ಸುಳ್ಳು ಹೇಳಿಲ್ಲ. ನರೇಂದ್ರ ಮೋದಿ ಈಗಾಗಲೇ ಐದು ಕೆಜಿ ಅಕ್ಕಿ ನೀಡುತ್ತಿದ್ದಾರೆ. ಆದರೂ ನರೇಂದ್ರ ಮೋದಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದರು. ಕಾಶಿ ವಿಶ್ವನಾಥ ದೇವಸ್ಥಾನವನ್ನು ಇವತ್ತಲ್ಲ ನಾಳೆ ವಾಪಸ್‌ ಕಟ್ಟುತ್ತೇವೆ. ಕಾಶಿಯಲ್ಲಿ ಶಿವಲಿಂಗ, ಬಸವಣ್ಣನನ್ನು ಬೇರೆ ಮಾಡಲಾಗಿದೆ. ಯಾವ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ. ಅಲ್ಲಿಯ ಮಸೀದಿ ಒಡೆದು ದೇವಸ್ಥಾನ ಕಟ್ಟುತ್ತೇವೆ ಎಂದು ಹೇಳಿದರು.

ಬಸ್‌ಗಳಲ್ಲಿ ಸ್ತ್ರೀಯರ ‘ಶಕ್ತಿ ಪ್ರದರ್ಶನ’: ವೃದ್ಧೆಗೆ ಕಪಾಳಮೋಕ್ಷ ಮಾಡಿದ ಲೇಡಿ ಕಂಡಕ್ಟರ್

ಸಂಸದ ಸಂಗಣ್ಣ ಕರಡಿ ಮಾತನಾಡಿ, ನರೇಂದ್ರ ಮೋದಿ ಸರ್ಕಾರದ 9 ವರ್ಷದ ಸಾಧನೆ ಕಾರ್ಯಕರ್ತರು ಅರಿತು ಜನರಿಗೆ ತಿಳಿಸಬೇಕು ಎಂದರು. ಶಾಸಕ ದೊಡ್ಡನಗೌಡ ಪಾಟೀಲ, ಮಂಜುಳಾ ಕರಡಿ ಮಾತನಾಡಿದರು. ಎಂಎಲ್‌ಸಿ ಹೇಮಲತಾ ನಾಯಕ, ವಿರೂಪಾಕ್ಷಪ್ಪ ಸಿಂಗನಾಳ, ಮಾಜಿ ಸಚಿವ ಹಾಲಪ್ಪ ಆಚಾರ, ಗಿರಿಗೌಡ, ಪರಣ್ಣ ಮುನವಳ್ಳಿ, ಕೆ.ಶರಣಪ್ಪ, ಶಿವಲೀಲಾ ದಳವಾಯಿ,ಬಸವರಾಜ ಹಳ್ಳೂರು, ಉಮೇಶ ಸಜ್ಜನ, ಪ್ರದೀಪ ಹಿಟ್ನಾಳ, ಸುನೀಲ ಹೆಸರೂರು, ಮರಿಬಸಪ್ಪ ಇದ್ದರು.

click me!