ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ಕೈಗೊಳ್ಳಿ: ಸಿದ್ದರಾಮಯ್ಯಗೆ ಶಾಸಕ ಯತ್ನಾಳ್‌ ಬೆಂಬಲ!

By Kannadaprabha NewsFirst Published Oct 4, 2023, 7:37 PM IST
Highlights

ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಲಿಂಗಾಯತ- ಕುರುಬ ಇದು ಮೂರ್ಖತನದ ಹೇಳಿಕೆ. ಯಾವ ಡಿಕೆಶಿಗೂ, ಶಾಮನೂರುಗೂ ಅಂಜಬೇಡಿ, ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ಕೈಗೊಳ್ಳಿ ಎಂದು ಹೇಳಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದಂತಿದೆ. 

ಯಾದಗಿರಿ (ಅ.04): ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಲಿಂಗಾಯತ- ಕುರುಬ ಇದು ಮೂರ್ಖತನದ ಹೇಳಿಕೆ. ಯಾವ ಡಿಕೆಶಿಗೂ, ಶಾಮನೂರುಗೂ ಅಂಜಬೇಡಿ, ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ಕೈಗೊಳ್ಳಿ ಎಂದು ಹೇಳಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದಂತಿದೆ. 

ಹಿಂದೂ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಮಂಗಳವಾರ ಸಂಜೆ ಜಿಲ್ಲೆಯ ಶಹಾಪುರಕ್ಕೆ ಆಗಮಿಸಿದ್ದ ಯತ್ನಾಳ್‌, ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಹೇಳಿಕೆ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾವು ಜಾತಿ ಮೇಲೆ ಮಾತನಾಡುವುದಿಲ್ಲ, ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ, ಯಾರು ಸಮರ್ಥ ಆಡಳಿತಕೊಡುತ್ತಾರೆಯೋ ಅವರೇ ಮುಖ್ಯಮಂತ್ರಿ ಆಗಬೇಕು. 

Latest Videos

ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡಂತಾಗಿದೆ: ಶಾಸಕ ಬಸನಗೌಡ ಯತ್ನಾಳ್ ಆರೋಪ

ರಾಜ್ಯದ ಜನ 135 ಶಾಸಕರ ಬೆಂಬಲವನ್ನು ಸಿದ್ದರಾಮಯ್ಯನವರಿಗೆ ನೀಡಿ, ಆಶೀರ್ವಾದ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯನವರಿಗೆ ಆಡಳಿತ ಮಾಡಲು ಕಾಂಗ್ರೆಸ್ ನವರೇ ಬಿಡುತ್ತಿಲ್ಲ ಎಂದ ಅವರು, ಒಬ್ಬೊಬ್ಬ ಶಾಸಕರು ತಮ್ಮ ಅಸಮಾಧಾನವನ್ನು ಸ್ಫೋಟ ಮಾಡ್ತಿದ್ದಾರೆ, ಈಗಾಗಿ ಆಡಳಿತ ಮಾಡಲು ಅವರಿಗೆ ಆಗುತ್ತಿಲ್ಲ ಎಂದ ಅವರು, ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.

ಕೃಷ್ಣೆಗೆ ಬಾಗಿನ ಅರ್ಪಿಸಿದ ಸಿಎಂಗೆ ಕಾವೇರಿ ಕೂಗು ಕೇಳಲ್ವೆ?: ತಮಿಳುನಾಡಿಗೆ ನೀರು ಹರಿಸಿ ಕರ್ನಾಟಕದ ರೈತರ ಬಗ್ಗೆ ಕಾಳಜಿ ಮಾಡದೆ ಕೃಷ್ಣೆಗೆ ಬಾಗಿನ ಅರ್ಪಿಸಲು ಬಂದಿರುವ ತಮ್ಮನ್ನು ನಾಡಿನ ಜನತೆ ಕ್ಷಮಿಸುವರೇ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಅವರನ್ನು ಪ್ರಶ್ನಿಸಿದ್ದಾರೆ. 

ದೇಶದಲ್ಲಿ ಏನೇ ಕೆಟ್ಟದಾದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ: ಸಚಿವ ಸಂತೋಷ್ ಲಾಡ್‌

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ‘ಕೃಷ್ಣೆಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳಿಗೆ ಕಾವೇರಿಯ ಕೂಗು ಕೇಳಲಿಲ್ಲವೇ? ಎಂದು ಟೀಕಿಸಿದ್ದಾರೆ. ಸಚಿವರಿಗೆ ಹೊಸದಾಗಿ ಕಾರು ಖರೀದಿಸಲು ಸರ್ಕಾರ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ‘ರಾಜ್ಯದಲ್ಲಿ ಬರದ ಛಾಯೆ ಇರಬೇಕಾದರೆ ಈ ರೀತಿಯಾದ ದುಂದು ವೆಚ್ಚ ಮಾಡುವ ಅವಶ್ಯಕತೆ ಇದೆಯಾ? ಆರ್ಥಿಕ ಶಿಸ್ತು, ಆರ್ಥಿಕ ನೀತಿಗಳ ಹರಿಕಾರ, 13 ಬಜೆಟ್‌ ಮಂಡಿಸಿದ ಮೊಟ್ಟಮೊದಲ ಮುಖ್ಯಮಂತ್ರಿಗಳು ಎಂದೆಲ್ಲ ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು 4-ಜಿ ವಿನಾಯಿತಿ ಪಡೆದುಕೊಂಡು ತೆರಿಗೆದಾರರ ಹಣದಲ್ಲಿ ಕಾರು ಖರೀದಿ ಮಾಡುತ್ತಿರುವುದು ಖಂಡನೀಯ’ ಎಂದಿದ್ದಾರೆ.

click me!