
ಗಾಜಿಯಾಬಾದ್ (ಮಾ.23): ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಗಾಜಿಯಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ‘ಒಬ್ಬ ಸೈನಿಕನಾಗಿ ನನ್ನ ಇಡೀ ಜೀವನವನ್ನು ಈ ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ಕಳೆದ 10 ವರ್ಷಗಳಿಂದ ಗಾಜಿಯಾಬಾದ್ ಅನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವ ಕನಸನ್ನು ನನಸು ಮಾಡಲು ಅವಿರತವಾಗಿ ಶ್ರಮಿಸಿದ್ದೇನೆ. ಈ ವೇಳೆ ನಾನು ಕಠಿಣ, ಆದರೆ ಚಿಂತನಶೀಲ ನಿರ್ಧಾರವನ್ನು ಮಾಡಿದ್ದೇನೆ. 2024ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈ ನಿರ್ಧಾರ ನನಗೆ ಸುಲಭವಲ್ಲ, ಆದರೂ ಮುಂದೆ, ನಾನು ದೇಶಕ್ಕಾಗಿ ಮತ್ತು ಎಲ್ಲಾ ನಾಗರಿಕರಿಗೆ ನನ್ನ ಸೇವೆಯನ್ನು ಹೊಸ ರೂಪದಲ್ಲಿ ಮುಂದುವರಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಗಾಜಿಯಾಬಾದ್‌ನ ಶಾಸಕ ಅತುಲ್ ಗರ್ಗ್ ಅವರಿಗೆ ಬಿಜೆಪಿ ಲೋಕಾ ಟಿಕೆಟ್ ನೀಡಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಆಂಧ್ರ ಸಿಎಂ ರೇವಂತ್ ರೆಡ್ಡಿ ಆಪ್ತರ ಫೋನ್ ಕದ್ದಾಲಿಕೆ: ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಅರೆಸ್ಟ್!
ಉ.ಪ್ರ.: 25 ಸ್ಥಾನಗಳಿಗೆ ಬಿಎಸ್‌ಪಿ ಅಭ್ಯರ್ಥಿ ಘೋಷಣೆ
ಲಕ್ನೋ: ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 25 ಸ್ಥಾನಗಳಿಗೆ ಮಾಯಾವತಿ ಅವರ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
ಸಹಾರನ್‌ಪುರದಿಂದ ಮಜೀದ್ ಅಲಿ, ಕೈರಾನಾದಿಂದ ಶ್ರೀಪಾಲ್ ಸಿಂಗ್, ಮುಜಫ್ಫರ್ ನಗರದಿಂದ ದಾರಾ ಸಿಂಗ್ ಪ್ರಜಾಪತಿ, ಬಿಜ್ನೋರ್‌ನಿಂದ ವಿಜಯೇಂದ್ರ ಸಿಂಗ್, ನಗೀನಾದಿಂದ ಸುರೇಂದ್ರ ಪಾಲ್ ಸಿಂಗ್, ಮೊರಾದಾಬಾದ್‌ದಿಂದ ಮೊಹಮ್ಮದ್ ಇರ್ಫಾನ್ ಸೈಫಿರನ್ನು ಕಣಕ್ಕಿಳಿಸಿದೆ.
ರಾಂಪುರದಿಂದ ಜಿಶಾನ್ ಖಾನ್, ಸಂಭಲ್‌ನಿಂದ ಶೌಲತ್ ಅಲಿ, ಅಮ್ರೋಹಾದಿಂದ ಮೊಜಾಹಿದ್ ಹುಸೇನ್, ಮೇರಠ್‌ನಿಂದ ದೇವವ್ರತ್ ತ್ಯಾಗಿ, ಬಾಗ್‌ಪತ್‌ನಿಂದ ಪ್ರವೀಣ್ ಬನ್ಸಲ್ ಅವರಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ಕೊಡದ್ದಕ್ಕೆ ತಮಿಳುನಾಡು ಸಂಸದ ಗಣೇಶಮೂರ್ತಿ ಆತ್ಮಹತ್ಯೆ ಯತ್ನ, ಪರಿಸ್ಥಿತಿ ಚಿಂತಾಜನಕ
ಜೆಡಿಯು 16 ಅಭ್ಯರ್ಥಿಗಳಿಗೆ ಘೋಷಣೆ: 2 ಪಕ್ಷಾಂತರಿಗಳಿಗೆ ಮಣೆ
ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಜೆಡಿಯು, 16 ಲೋಕಸಭೆ ಅಭ್ಯರ್ಥಿಗಳನ್ನು ಭಾನುವಾರ ಘೋಷಣೆ ಮಾಡಿದೆ. ಇಬ್ಬರು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ ಹಾಗೂ ಇಬ್ಬರು ಪಕ್ಷಾಂತರಿಗಳಿಗೆ ಟಿಕೆಟ್ ನೀಡಲಾಗಿದೆ ಎಂಬುದು ವಿಶೇಷ.
ಸೀತಾಮಢಿ ಹಾಗೂ ಶೋಹರ್ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸೀತಾಮಢಿಯಲ್ಲಿ ವಿಧಾನ ಪರಿಷತ್ ಸಭಾಪತಿ ದೇವೇಶ್ ಚಂದ್ರ ಠಾಕೂರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇನ್ನು ರಾಷ್ಟ್ರೀಯ ಲೋಕ ಮೋರ್ಚಾ ತೊರೆದು ಪತಿ ರಮೇಶ್ ಸಿಂಗ್ ಅವರೊಂದಿಗೆ ಪಕ್ಷಕ್ಕೆ ಸೇರಿದ್ದ ವಿಜಯಲಕ್ಷ್ಮಿ ಕುಶ್ವಾಹ ಅವರಿಗೆ ಪಕ್ಷಾಂತರ ಮಾಡಿದ ಒಂದೇ ದಿನದ್ಲಿ ಸಿವಾನ್ ಕ್ಷೇತ್ರದ ಟಿಕೆಟ್ ಕೊಡಲಾಗಿದೆ. ಇನ್ನು ಶೋಹರ್‌ನಲ್ಲಿ ಆರ್‌ಜೆಡಿ ತೊರೆದು ಜೆಡಿಯು ಸೇರಿದ್ದ ಲವ್ಲಿ ಆನಂದ್‌ಗೆ ಟಿಕೆಟ್ ಘೋಷಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಇದ್ದು ಜೆಡಿಯುಗೆ 16 ಸ್ಥಾನಗಳ ಹಂಚಿಕೆ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.