ಯಾರ ಹಂಗಿನಲ್ಲೂ ಇಲ್ಲ, ಸ್ವಾಭಿಮಾನಿಯಾಗಿರುವೆ: ಉಚ್ಚಾಟಿಸಿದರೂ ತೊಂದರೆಯಿಲ್ಲ ಎಂದ ವಿನಯ್ ಕುಮಾರ್

Published : Aug 14, 2024, 06:49 PM IST
ಯಾರ ಹಂಗಿನಲ್ಲೂ ಇಲ್ಲ, ಸ್ವಾಭಿಮಾನಿಯಾಗಿರುವೆ: ಉಚ್ಚಾಟಿಸಿದರೂ ತೊಂದರೆಯಿಲ್ಲ ಎಂದ ವಿನಯ್ ಕುಮಾರ್

ಸಾರಾಂಶ

ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಅಹಿಂದ ವರ್ಗಗಳ ಪ್ರತಿನಿಧಿಯಾಗಿ ಧ್ವನಿ ಎತ್ತಿದ್ದೇನೆ. ಶೋಷಿತ ವರ್ಗಗಳ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಪದಚ್ಯುತಿಗೆ ನಡೆಸುತ್ತಿರುವ ಕುತಂತ್ರಗಳ ಬಗ್ಗೆ ಮಾತನಾಡಿದ್ದೇನೆ.   

ರಿಪೋರ್ಟರ್: ವರದರಾಜ್

ದಾವಣಗೆರೆ (ಆ.14): ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಅಹಿಂದ ವರ್ಗಗಳ ಪ್ರತಿನಿಧಿಯಾಗಿ ಧ್ವನಿ ಎತ್ತಿದ್ದೇನೆ. ಶೋಷಿತ ವರ್ಗಗಳ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಪದಚ್ಯುತಿಗೆ ನಡೆಸುತ್ತಿರುವ ಕುತಂತ್ರಗಳ ಬಗ್ಗೆ ಮಾತನಾಡಿದ್ದೇನೆ. ಇದು ಮಹಾಪರಾಧವೆಂಬಂತೆ ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಹೇಳಿರುವುದು ಸರಿಯಲ್ಲ ಎಂದು ಸ್ವಾಭಿಮಾನಿ ಬಳಗದ ಜಿ.ಬಿ ವಿನಯಕುಮಾರ್ ಕಾಂಗ್ರೆಸ್ ಮುಖಂಡರು ಟಾಂಗ್ ನೀಡಿದ್ದಾರೆ. ದಾವಣಗೆರೆಯಲ್ಲಿ  ಮಾತನಾಡಿದ ಅವರು ಅಹಿಂದ  ವರ್ಗಗಳ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ, ಅದೇ ವರ್ಗಗಳನ್ನು ಪ್ರತಿನಿಧಿಸುತ್ತಿರುವ ನನ್ನ ವಿರುದ್ಧ ಸುದ್ದಿಗೋಷ್ಟಿಯಲ್ಲಿ "ಏಕವಚನ" ಪ್ರಯೋಗಿಸಿರುವುದು ಶೋಷಿತ ವರ್ಗಗಳ ದುರಾದೃಷ್ಟ. 

ವಿನಯ್‌ ಕುಮಾರ್  ಜಾತಿ, ಜಾತಿಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ ಎಂಬ ಮಾತುಗಳನ್ನಾಡಿರುವ ಜಿಲ್ಲಾಧ್ಯಕ್ಷರು, ಲೋಕಸಭಾ ಚುನಾವಣೆಯ ಎರಡು ದಿನಗಳ ಮುಂಚಿತವಾಗಿ ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುರುಬ ಸಮುದಾಯದ ಸಭೆಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿ, ಈ ನಾಡಿನ ಮುಖ್ಯಮಂತ್ರಿಗಳಿಂದ 'ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್‌ ಒಂದೇ ಒಂದು ಓಟ್" ಹಾಕಬಾರದೆಂದು ಹೇಳಿಸಿದ್ದವರು ಯಾರು ? ಹೊನ್ನಾಳಿಯಲ್ಲಿ ನಡೆದ ಸಭೆಯಲ್ಲಿ "ಒಬ್ಬ ಕುರುಬ ಜಾತಿಯ ವ್ಯಕ್ತಿ" ಸ್ಪರ್ಧೆ ಮಾಡಿದ್ದಾನೆ ಅಂತ ಓಟ್ ಹಾಕ್ತಿರಾ ಎಂದು ಹೇಳಿಸಿದವರು ಯಾರು ? ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಯಾಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದರು.

ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶೇ.50ರಷ್ಟು ಅನುದಾನ: ಸಚಿವ ಪ್ರಿಯಾಂಕ್ ಖರ್ಗೆ

2024ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದು "ಪಕ್ಷೇತರ'ನಾಗಿ, ನಾನು ಗೆಲ್ಲುವಂತಹ ವಾತಾವರಣವಿದ್ದಾಗ, ನನಗೆ ಟಿಕೆಟ್ ತಪ್ಪಿಸಲು ಹಾಗೂ ನನ್ನ ಮೇಲೆ ಜನರಿಗೆ ತಪ್ಪು ಅಭಿಪ್ರಾಯ ಮೂಡಿಸಲು ಸ್ವಾಮಿಜೀಗಳು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವಂತೆ ಮಾಡಿ, ಯಾವುದೇ ಮಾತುಕತೆಗೂ ಅವಕಾಶ ನೀಡದ ಸನ್ನಿವೇಶವನ್ನು ಸೃಷ್ಟಿಸಿದರು ಎಂದು ಆರೋಪಿಸಿದರು. ಅಹಿಂದ ವರ್ಗದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಿಗೆ ಹೊನ್ನಾಳಿ ವಿಧಾನಸಭೆ ಟಿಕೆಟ್, ಲೋಕಸಭಾ ಟಿಕೆಟ್ ಕೊಡಬೇಕಿತ್ತು.ಜಿಲ್ಲೆಯಲ್ಲಿ ಕಾಂಗ್ರೇಸ್ ಶಾಸಕರುಗಳು ಇಲ್ಲದೇ ಇದ್ದಾಗ, ಗೆಲ್ಲುವ ವಾತಾವರಣ ಇಲ್ಲದೇ ಇರುವಾಗ ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದ್ದಾರೆ. 2024ರಲ್ಲಿ ಗೆಲ್ಲುವ ವಾತಾವರಣವಿದ್ದಾಗ, ಟಿಕೆಟ್ ತಪ್ಪಿಸಲಾಗುತ್ತದೆ ಎಂದರು.

ಅಹಿಂದ ವರ್ಗಗಳ ಮುಖ್ಯಮಂತ್ರಿಗೆ ಅನ್ಯಾಯವಾಗುತ್ತಿದೆ ಎನ್ನುವಾಗ ನಾನು ಧ್ವನಿ ಎತ್ತಿದ್ದೇನೆ ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿ ಅಹಿಂದ ವರ್ಗಗಳ ನಾಯಕರುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವಾಗಲೂ ಧ್ವನಿ ಎತ್ತುತ್ತೇನೆ. ಶೋಷಿತರ ಶಕ್ತಿಯನ್ನು ಮನದಟ್ಟು ಮಾಡಲು ರಾಜ್ಯಾದ್ಯಂತ "ಶೋಷಿತರ ಅಹಿಂದ ವರ್ಗಗಳ ಜಾಗೃತಿ ಮತ್ತು ಸಂಘಟನೆ" ಮಾಡುತ್ತಿದ್ದೇನೆ. ಧ್ವನಿಯಿಲ್ಲದವರ ಧ್ವನಿಯಾಗಿ ಅವರ ಹಕ್ಕುಗಳನ್ನು ಪಡೆಯಲು ಅವರೊಂದಿಗಿರುತ್ತೇನೆ ಎಂದರು.

ಸ್ವಾಭಿಮಾನಿ ಮತ್ತು ಸ್ವಾವಲಂಭಿ ನಾನು ಎಂದ ವಿನಯ್ ಕುಮಾರ್: ಜಿ. ಬಿ. ವಿನಯಕುಮಾರ್ ಯಾರ ಹಂಗಿನಲ್ಲೂ ಇಲ್ಲ ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿ ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದೇನೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ "ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ" "ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ನನಗಾದ ಅನ್ಯಾಯ, ಎದುರಿಸಿದ "ಕುತಂತ್ರಗಳು" ಬೇರೆ ಯಾರೂ ಅನುಭವಿಸಬಾರದೆಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಅಹಿಂದ ವರ್ಗಗಳ ಜಾಗೃತಿಗಾಗಿ 'ರಾಜ್ಯಮಟ್ಟದ ಅಹಿಂದ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.

ತುಂಗಭದ್ರಾ ಅಣೆಕಟ್ಟು ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ: ಸಚಿವ ಚಲುವರಾಯಸ್ವಾಮಿ

ನನ್ನ ತವರು ದಾವಣಗೆರೆ ಜಿಲ್ಲೆ "ಕಕ್ಕರಗೊಳ್ಳ": ನನ್ನದು ಕಕ್ಕರಗೊಳ್ಳ ಗ್ರಾಮ, ನಾನು ಚುನಾವಣೆಗಾಗಿ ವಲಸೆ ಬಂದಿಲ್ಲ. ಸಾಧನೆಗಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಒಂದು ಕುಟುಂಬದ ಪರವಾಗಿ ಮಾತನಾಡುತ್ತಿದ್ದಾರೆ. ವಿನಯ್ ಕುಮಾರ್ ಸಮಸ್ತ ಶೋಷಿತ ವರ್ಗಗಳ ಪರವಾಗಿ ಮಾತನಾಡುತ್ತಿದ್ದಾನೆ. ಈ ಸತ್ಯವನ್ನು ಜನರು ಅರಿತುಕೊಂಡಿದ್ದಾರೆ.ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ  ಅಭದ್ರತೆ ಕಾಡುತ್ತಿದೆ. ನಾನು ಬೆಳೆಯುವುದನ್ನು ಹತ್ತಿಕ್ಕಲು ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ.ಸದ್ಯದ ವಾತಾವರಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾನು ಸಕ್ರಿಯನಾಗಿಲ್ಲ ಎಂದ ಮೇಲೆ ಉಚ್ಚಾಟನೆಯ ಪ್ರಶ್ನೆಯೇ ಇಲ್ಲ..ಯಾವ ಪಕ್ಷದಲ್ಲೂ ನಾನು ಗುರುತಿಸಿಕೊಂಡಿಲ್ಲ..ಯಾವರಾಜಕೀಯ ಮುಖಂಡರ ಮನೆಗೂ ಭೇಟಿನೀಡಿಲ್ಲ. ವೈಯಕ್ತಿಕವಾಗಿ  ಪಕ್ಷೇತರನಾಗಿ‌ ಒಂದು‌ ಕ್ಷೇತ್ರ‌ಆಯ್ಕೆ ಮಾಡಿಕೊಂಡು‌ ಸ್ಪರ್ಧೆ ಮಾಡುವ ಇಚ್ಛೆಯಿದೆ.ಸ್ಥಾನಮಾನ‌ಕೇಂದ್ರಿತ ರಾಜಕಾರಣ ಸದ್ಯ‌ ನಡೆಯುತ್ತಿದೆ.ಆದರೆ ನನಗೆ ಸ್ವಾಭಿಮಾನ‌ಮುಖ್ಯ.ಮುಂದಿನ‌ ದಿನದಲ್ಲೂ‌ ಸ್ವಾಭಿಮಾನದಿಂದ ಸ್ಪರ್ಧೆ ಮಾಡುವೆ. ಕಾಂಗ್ರೆಸ್ ಸದಸ್ಯತ್ವಕ್ಕೆ ನಾನಾಗಿಯೇ ರಾಜಿನಾಮೆ ಕೊಡುವುದಿಲ್ಲ ಉಚ್ಚಾಟನೆ‌ ಮಾಡಿದರೂ ತೊಂದರೆ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ