ಸಹೋದರಿ ವಿರುದ್ಧ ಪತ್ನಿಯನ್ನ ಕಣಕ್ಕಿಳಿಸಿ ತಪ್ಪು ಮಾಡಿದೆ: ಅಜಿತ್ ಪವಾರ್

By Ravi Janekal  |  First Published Aug 14, 2024, 4:45 PM IST

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋದರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್‌ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿಬಿಟ್ಟೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ಅಜಿತ್‌ ಬಣ) ಮುಖ್ಯಸ್ಥ ಅಜಿತ್‌ ಪವಾರ್‌ ಮಂಗಳವಾರ ಪಶ್ಚಾತ್ತಾಪ ಪಟ್ಟರು.


ಮುಂಬೈ (ಆ.14): ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋದರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್‌ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿಬಿಟ್ಟೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ಅಜಿತ್‌ ಬಣ) ಮುಖ್ಯಸ್ಥ ಅಜಿತ್‌ ಪವಾರ್‌ ಮಂಗಳವಾರ ಪಶ್ಚಾತ್ತಾಪ ಪಟ್ಟರು.

ಮಾಧ್ಯಮದೊಂದಿಗೆ ಮಾತನಾಡಿ, ‘ನನ್ನ ಸೋದರಿ ಅಂದ್ರೆ ನನಗೆ ತುಂಬಾ ಇಷ್ಟ. ಚುನಾವಣೆಯಲ್ಲಿ ಆಕೆಯ ವಿರುದ್ಧ ನಾನು, ನನ್ನ ಪತ್ನಿಯನ್ನು ಕಣಕ್ಕಿಳಿಸಿದ್ದೆ. ಈ ರೀತಿ ಮಾಡಬಾರದಿತ್ತು. ಆದರೆ ನಮ್ಮ ಪಕ್ಷದ ಸಂಸದೀಯ ಮಂಡಳಿ ಇದನ್ನು ನಿರ್ಧರಿಸಿತ್ತು. ಆದರೆ ಈಗ ಅದು ತಪ್ಪು ನಿರ್ಧಾರವೆಂದು ನನಗೆ ಅರಿವಾಗಿದೆ’ ಎಂದರು.
ಬಾರಾಮತಿ ಲೋಕಸಭೆ ಕ್ಷೇತ್ರದಿಂದ ಅಜಿತ್‌ ಪತ್ನಿ ಸುನೇತ್ರಾ ಪವಾರ್‌, ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

Tap to resize

Latest Videos

 

ಉದ್ಧವ್ ಠಾಕ್ರೆ ಬೆಂಗಾವಲಿನ ಮೇಲೆ ದಾಳಿ : ಸೆಗಣಿ, ತೆಂಗಿನಕಾಯಿ ಎಸೆದ MNS ಕಾರ್ಯಕರ್ತರು

click me!