Gangavati Janardhana Reddy Election Results 2023: ರಾಷ್ಟ್ರೀಯ ಪಕ್ಷಗಳ ಫುಟ್‌ಬಾಲ್‌ ಆಡಿದ ಜನಾರ್ಧನ ರೆಡ್ಡಿ!

By Govindaraj S  |  First Published May 13, 2023, 2:12 PM IST

ಆಂಜನೇಯನ ಜನ್ಮಸ್ಥಳ ಆಂಜನಾದ್ರಿಯ ಮೂಲಕ ಈಗಾಗಲೇ ವಿಶ್ವಪ್ರಸಿದ್ಧಿಯಾಗುತ್ತಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಸುಮಾರು 8 ಸಾವಿರಕ್ಕೂ ಹೆಚ್ಚು ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 


ಕೊಪ್ಪಳ (ಮೇ.13): ಆಂಜನೇಯನ ಜನ್ಮಸ್ಥಳ ಆಂಜನಾದ್ರಿಯ ಮೂಲಕ ಈಗಾಗಲೇ ವಿಶ್ವಪ್ರಸಿದ್ಧಿಯಾಗುತ್ತಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಸುಮಾರು 8 ಸಾವಿರಕ್ಕೂ ಹೆಚ್ಚು ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕೆಆರ್‌ಪಿಪಿ ತನ್ನ ಮೊದಲ ಚುನಾವಣೆಯಲ್ಲಿಯೇ ಖಾತೆ ತೆರೆದಿದೆ. ಬಿಜೆಪಿಗೆ ಸೆಡ್ಡು ಹೊಡೆದಿದ್ದ ಜನಾರ್ದನ ರೆಡ್ಡಿ ತಮ್ಮದೇ ಆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿದ್ದರು. 

ಗಂಗಾವತಿಯಲ್ಲಿ ತಾವೇ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಗಂಗಾವತಿಯಲ್ಲಿ ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ಇದ್ದರು. ಆದರೆ, ಕೊನೆಗೆ ಜನಾರ್ದನ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿ ಜನಾರ್ದನ ರೆಡ್ಡಿಗೆ ಭಾರೀ ಪೈಪೋಡಿ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಗೆ ಪ್ರವೇಶ ಇಲ್ಲದ್ದರಿಂದ ಗಂಗಾವತಿಗೆ ಬಂದು ನೆಲೆಸಿ ಇಲ್ಲಿ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಭತ್ತದ ನಾಡು ಗಂಗಾವತಿಯ ಜನತೆ ವಲಸಿಗ ಅಭ್ಯರ್ಥಿಗೆ ಕೈ ಹಿಡಿದಿರುವುದು ಅಚ್ಚರಿ ಮೂಡಿಸಿದೆ. 

Tap to resize

Latest Videos

undefined

Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಬಂದು ಪ್ರಚಾರ ನಡೆಸಿದರು, ಅಂಜನಾದ್ರಿಯ ಅಭಿವೃದ್ಧಿ ಕೂಡ ಬಿಜೆಪಿಯ ಕೈ ಹಿಡಿದಿಲ್ಲ. ಮುನವಳ್ಳಿ ಇಲ್ಲಿ ಗೆಲುವು ಸಾಧಿಸಿದ್ದರು. ಹಿಂದುತ್ವ ಮತ್ತು ಅಂಜನಾದ್ರಿಯ ವಿಷಯ ಕಳೆದ ಚುನಾವಣೆಯಲ್ಲಿ ಪ್ರಮುಖವಾಗಿತ್ತು. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್‌ ಅನ್ಸಾರಿ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ಜನಾರ್ದನ ರೆಡ್ಡಿ ವಿರುದ್ಧ ಇಬ್ಬರು ಸೋಲು ಅನುಭವಿಸಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು-100295, ಮಹಿಳಾ ಮತದಾರರು-101899, ಇತರೆ-12, ಒಟ್ಟು-202206 ಮತದಾರರಿದ್ದಾರೆ. 

Karnataka Election Results 2023: 10 ಬಾರಿ ಒಂದೇ ಚಿಹ್ನೆ, ಒಂದೇ ಪಕ್ಷದಡಿ ಸ್ಪರ್ಧಿಸಿ ಗೆದ್ದು ಬೀಗಿದ ಆರಗ ಜ್ಞಾನೇಂದ್ರ

ಇನ್ನು 2018 ರಲ್ಲಿ ಪಾರಣ್ಣ ಮುನವಳ್ಳಿ ಅವರು ಬಿಜೆಪಿಯಿಂದ 1,39,933 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!