ಹೊನ್ನಾಳಿ (ಅ.30) : ವಿರೋಧಿಗಳ ಟೀಕೆ, ನಿಂದನೆಗಳಿಗೆ ಸೊಪ್ಪು ಹಾಕಲ್ಲ ಬದಲಿಗೆ ನಾನು ಇನ್ನಷ್ಟುಹೆಚ್ಚು ಸ್ಫೂರ್ತಿ, ಆತ್ಮವಿಶ್ವಾಸದಿಂದ ಅವಳಿ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಮನೆಯ ಮಗ, ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶಾಸಕ ರೇಣುಕಾಚಾರ್ಯ ಸಮ್ಮುಖ ಬಿಜೆಪಿ ಸೇರ್ಪಡೆಯಾದ ಮುಸ್ಲಿಮರು
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಗ್ರಾಮವಾಸ್ತವ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಹಾಗೂ ಇಷ್ಟುದಿನ ಮನೆಯೊಳಗಿದ್ದ ವಿರೋಧ ಪಕ್ಷದ ನಾಯಕರು ಇದೀಗ ಹೊರಬಂದು ಬಣ್ಣ ಬಣ್ಣದ ಮಾತುಗಳಾಡಿ ಮತದಾರರ ಓಲೈಸುವ ಕೆಲಸ ಮಾಡುತ್ತಿದ್ದಾರೆ ಆದರೆæ ಕೋವಿಡ್ ಹಾಗೂ ಅತಿವೃಷ್ಟಿಯ ಸಂಕಷ್ಟಗಳ ಸಂದರ್ಭದಲ್ಲಿ ಯಾರು ಜನರ ಜೊತೆಗಿದ್ದು ಕೆಲಸ ಮಾಡಿದ್ದಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತಿಗೆ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಕುಟುಕಿದರು.
ರಾಜ್ಯದಲ್ಲಿಯೇ ಮುಂಚೂಣಿ:
ಪ್ರಾಸ್ತಾವಿಕವಾಗಿ ತಹಸೀಲ್ದಾರ್ ಎಚ್.ಜೆ. ರಶ್ಮಿ ಮಾತನಾಡಿ, ತಾಲೂಕಿನಲ್ಲಿ ಈ ವರೆಗೆ 30ಗ್ರಾಮ ವಾಸ್ತವ್ಯಗಳು ನಡೆದು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ 4 ರಿಂದ 6 ಗ್ರಾಮವಾಸ್ತವ್ಯಗಳ ಮಾಡಬೇಕೆನ್ನುವುದು ಶಾಸಕರ ಅಪೇಕ್ಷೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ ಯಡಿ 53 ಫಲಾನುಭವಿಗಳು, ಸಂಧ್ಯಾಸುರಕ್ಷಾದಡಿ 10, ಅಂಗವಿಕಲ ವೇತನ 6, ವಿಧವಾ ವೇತನ 7, ಬಗರ್ ಹುಕ್ಕುಂ ಸಾಗುವಳಿ ಮಂಜೂರಾತಿ 21, 94ಸಿ ಹಕ್ಕುಪತ್ರ 50, ಹೊಸಹಳ್ಳಿ ವೃತ್ತಗ ಗ್ರಾಮಗಳ ಅಧಾರ್ ನೋಂದಣಿ ತಿದ್ದುಪಡಿ 50 ಮಾನ್ಯ ಘನ ಸರ್ಕಾರದವಿನೂತನ ಯಜನೆ 72 ಗಂಟೆಗಳಲ್ಲಿ ಮಾಸಾಶನ ಮಂಜೂರು 1 ಹೀಗೆ ಒಟ್ಟು 198 ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೆಎಸ್‌ಡಿಎಲ್ ನಿರ್ದೇಶಕ ಹಾಗೂ ಹೊಸಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಶಿವು ಹಡೇದ್ ಶಾಸಕರು ಕ್ಷೇತ್ರಕ್ಕೆ ಮಾಡಿದ ಕೆಲಸಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಶಾಸಕರನ್ನು ಗ್ರಾಮದ ಜನರು ಪೂರ್ಣಕುಂಭ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ. ಇಒ ರಾಮಭೋವಿ ಸ್ವಾಗತಿಸಿದರು. ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ತಿಪ್ಪೇಶಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಕೆ.ಇ.ನಾಗರಾಜ್, ಸದಸ್ಯರಾದ ಮಹಾಂತೇಶ್,ಶಾಂತರಾಜ್, ಭಾಗಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು. ವೇದಿಕೆಯಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಕ್ಷೇತ್ರದಲ್ಲಿ ಪ್ರೀತಿಯ ರಾಜಕಾರಣ ಮಾತ್ರ
ಇಡೀ ಕ್ಷೇತ್ರವನ್ನು ನೀರಾವರಿ ಮಾಡುವ ನಿಟ್ಟಿನಲ್ಲಿ ಅಹೋರಾತ್ರಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಸುಮಾರು 5 ಸಾವಿರ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಜವಳಿ ಪಾರ್ಕ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಹೊನ್ನಾಳಿ ಕ್ಷೇತ್ರಕ್ಕೆ ಜನಪರ ಕಾಳಜಿವುಳ್ಳ ಯಾವುದೇ ವ್ಯಕ್ತಿ ಶಾಸಕರಾಗಬಹುದು, ಇದನ್ನು ಅವಳಿ ತಾಲೂಕುಗಳ ಮತದಾರÜ ಪ್ರಭುಗಳು ನಿರ್ಧಾರ ಮಾಡುತ್ತಾರೆ ಜಾತಿಯ ರಾಜಕಾರಣ ಇಲ್ಲಿ ನಡೆಯಲ್ಲ, ಪ್ರೀತಿಯ ರಾಜಕಾರಣ ಮಾತ್ರ ನಡೆಯುತ್ತದೆ ಇಂತಹ ಜನರ ಪ್ರೀತಿ ನನಗಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ಶಾಸಕ ರೇಣುಕಾಚಾರ್ಯರದ್ದು ಆಧಾರ ರಹಿತ ಆರೋಪ; ಎಂ.ಎಲ್.ಸುರೇಶ್
ಚುನಾವಣೆಗಳು ಬಂದಾಗ ಮಾತ್ರ ಜನರ ಮುಂದೆ ಪ್ರತ್ಯಕ್ಷರಾಗುವವರು ನಿಜವಾದ ರಾಜಕಾರಣಿಗಳಲ್ಲ, ಜನರೊಂದಿಗೆ ಸದಾ ಜೊತೆಗಿದ್ದು ಅವರ ಸಂಕಷ್ಟಗಳಿಗೆ ನಿರಂತರ ಸ್ಪಂದಿಸುವ ಕೆಲಸ ಮಾಡುವವರು ನಿಜವಾದ ರಾಜಕಾರಣಿ. ಇಂತಹ ರಾಜಕಾರಣಿ ನಾನಾಗಿದ್ದೇನೆ ನನಗೆ ಜನರೇ ಸರ್ವಸ್ವ.
ಎಂ.ಪಿ.ರೇಣುಕಾಚಾರ್ಯ, ಶಾಸಕ