
ಪಾಂಡವಪುರ (ಏ.11) : ಮೇಲುಕೋಟೆ ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿ ಪಡಿಸಬೇಕು. ಹೊಸ ಆಲೋಚನೆಗಳೊಂದಿಗೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ನಾರಾಯಣಪುರ ಗ್ರಾಮ(Narayanapur village)ದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಜನತೆ ನನ್ನನ್ನು ಮನೆ ಮಗನ ರೀತಿ ಬೆಳೆಸಿದ್ದಾರೆ. ಚುನಾವಣೆಯಲ್ಲಿ ಅಧಿಕ ಬಹುಮತ ನೀಡಿ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಸಚಿವ ಕೆಸಿಎನ್‌ರಂತೆ ಪಕ್ಷಾಂತರಿಯಲ್ಲ, ನನಗೆ ಒಳಗೊಂದು ಹೊರಗೊಂದು ನೀತಿ ಇಲ್ಲ: ಶಾಸಕ ಸಿ.ಎಸ್.ಪುಟ್ಟರಾಜು
ನಾನು ಚಿಕ್ಕವಯಸ್ಸಿನಿಂದಲೂ ನಾರಾಯಣಪುರ ಭಾಗದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ನನ್ನ ಪ್ರತಿ ಚುನಾವಣೆಯಲ್ಲಿ ಈ ಭಾಗದ ಜನರು ಅಧಿಕ ಬಹುಮತ ನೀಡಿ ನನ್ನನ್ನು ಬೆಂಬಲಿಸುವ ಕೆಲಸ ಮಾಡಿದ್ದಾರೆ. ಅದೇ ರೀತಿ ನಾನು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕಳೆದ ಐದು ವರ್ಷದಲ್ಲಿ 60-70 ಕೋಟಿ ಅನುದಾನವನ್ನು ನೀಡಿ ಹಳ್ಳಿಗಳ ಅಭಿವೃದ್ಧಿ ಪಡಿಸಿದ್ದೇನೆ ಎಂದರು.
ನೀವು ಕೊಟ್ಟಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದೇನೆ. ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿ ಮಾಡಬೇಕು ಎಂಬ ಆಲೋಚನೆಯೊಂದಿಗೆ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಇನ್ನೂ ನೂರಾರು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಯುವಜತನೆ, ಮಹಿಳೆಯರ ಆರ್ಥಿಕ ಸಬಲೀಕರಣದ ಆಲೋಚನೆ ಹೊಂದಿದ್ದೇನೆ. ಮತ್ತೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಯಾವುದಾರೂ ಅಭಿವೃದ್ಧಿ ಕೆಲಸ ಮಾಡಲು ಹೊರಟರೆ ಪುಟ್ಟರಾಜು(CS Puttaraju MLA)ಗೆ ಒಳ್ಳೆಯ ಹೆಸರು ಬರುತ್ತದೆ ಎಂದು ವಿರೋಧಿಗಳು ಸಾಕಷ್ಟುಅಡ್ಡಿಪಡಿಸುವ ಕೆಲಸ ಮಾಡಿದರು. ಕದಲಗೆರೆ ಕೆರೆ ಅಭಿವೃದ್ಧಿಗೆ ಅಡ್ಡಿಪಸಿದರು. ಇಲ್ಲವಾಗಿದ್ದರೆ ಇಷ್ಟೊತ್ತಿಗೆ ಕದಲಗೆರೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದುತ್ತಿತ್ತು ಎಂದು ಕಿಡಿಕಾರಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯಶ್ವಂತ್ ಕುಮಾರ್ ಮಾತನಾಡಿ, ಪ್ರತಿದಿನ ಜನರ ಮಧ್ಯೆ ಇದ್ದು ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿರುವ ಸಿ.ಎಸ್.ಪುಟ್ಟರಾಜು ಅವರ ಬೇಕೋ. ಐದು ವರ್ಷ ವಿದೇಶದಲ್ಲಿದ್ದು ಚುನಾವಣೆ ವೇಳೆ ಬಂದು ಜನ ದರ್ಶನ ಅಂತ ಜನ ಬಳಿ ಹೋಗುತ್ತಿರುವ ವ್ಯಕ್ತಿ ಬೇಕೋ ಎನ್ನುವುದನ್ನು ಜನತೆ ತೀರ್ಮಾನ ಮಾಡಬೇಕು ಎಂದರು.
ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟರಾಜು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಅಪಾರವಾಗಿವೆ. ಕಾವೇರಿ ನದಿಯಿಂದ ಬೆಂಗಳೂರು, ಕೋಲಾರದವರೆಗೂ ನೀರು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಶಾಸಕರಾದವರು ಈ ಭಾಗಕ್ಕೆ ಕಾವೇರಿ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಸಿ.ಎಸ್.ಪುಟ್ಟರಾಜು ಅವರು ಸಚಿವರಾಗುತ್ತಿದ್ದಂತೆಯೇ ಈ ಭಾಗಕ್ಕೆ ಕಾವೇರಿ ನೀರುಕೊಟ್ಟು ಭಗೀರಥ ಇಂತಹ ನಾಯಕರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ನೂರಾರು ಮಹಿಳೆಯ ಪೂರ್ಣಕುಂಭ, ವಿವಿಧ ಕಲಾತಂಡಗಳ ಮೂಲಕ ಅದ್ಧೂರಿ ಮೆರೆವಣಿಗೆ ನಡೆಸಿ ಪುಷ್ಪಾರ್ಚನೆ ಮಾಡಿ ಬೃಹತ್ ಹಣ್ಣಿನ ಹಾಕಿ ಸ್ವಾಗತಿಸಿ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ವೇದಿಕೆಗೆ ಕರೆತಂದರು. ವೇದಿಕೆಯಲ್ಲಿ ಹಲವಾರು ರೈತಸಂಘ-ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಖಚಿತ: ಶಾಸಕ ಸಿ.ಎಸ್.ಪುಟ್ಟರಾಜು
ಸಮಾರಂಭದಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಸಿ.ಎಸ್.ಗೋಪಾಲಗೌಡ, ನವೀನ ವೆಂಕಟೇಶ್, ರಾಧಾಕೃಷ್ಣ, ಕೆಂಪರಾಜು, ಸುಂದ್ರಣ್ಣ, ಗ್ರಾಪಂ ಅಧ್ಯಕ್ಷೆ ಪವಿತ್ರ ಲೋಕೇಶ್, ಸ್ವಾಮೀಗೌಡ, ರಾಮಚಂದ್ರು, ಕುಮಾರ್, ಯೋಗನರಸಿಂಹೇಗೌಡ, ವೆಂಕಟೇಶ್, ಆನಂದ್ ಮಾಸ್ಟರ್, ಪ್ರಕಾಶ್, ನಟರಾಜು, ಎನ್.ಕೆ.ಜಯರಾಮು, ಕರಿಯಯ್ಯ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಯಜಮಾನರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.