ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಹೆಸರು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಬರುತ್ತಾರೆಂದು ಜಪ ಮಾಡುತ್ತಾ ಗೊಂಲದಲ್ಲಿ ಮುಳುಗಿದ್ದಾರೆ.
ಸ್ಕಂದಕುಮಾರ್ ಬಿ.ಎಸ್.
ಕೋಲಾರ (ಏ.11) : ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಹೆಸರು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಬರುತ್ತಾರೆಂದು ಜಪ ಮಾಡುತ್ತಾ ಗೊಂಲದಲ್ಲಿ ಮುಳುಗಿದ್ದಾರೆ.
undefined
ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮಾಜಿ ಸಚಿವ ವರ್ತೂರು ಪ್ರಕಾಶ್(Vartur prakash BJP candidate), ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್(CMR Shrinath) ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ(Congress candidate) ಯಾರೆಂದು ಖಚಿತವಾಗದ ಕಾರಣ ಕಾರ್ಯಕರ್ತರು ಪ್ರಚಾರದಿಂದ ದೂರ ಉಳಿದಿದ್ದಾರೆ.
ಸಿದ್ದರಾಮಯ್ಯ ಕಣ್ಣಿಟ್ಟಿರುವ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಬ್ಬರದ ಪ್ರಚಾರ
ಸಿದ್ದುಗಾಗಿ ಹಿಂದೆ ಸರಿದ ಆಕಾಂಕ್ಷಿಗಳು
ಕಾಂಗ್ರೆಸ್ ಟಿಕೆಟ್(Congress Ticket) ಅಕಾಂಕ್ಷಿಗಳಾದ ಕೆ.ಶ್ರೀನಿವಾಸಗೌಡ(K Shrinivas gowda), ಬ್ಯಾಲಹಳ್ಳಿ ಗೋವಿಂದಗೌಡ, ಮನೋಹರ್, ಎ.ಶ್ರೀನಿವಾಸ್, ಎಲ್.ಎ.ಮಂಜುನಾಥ್, ಊರುಬಾಗಿಲು ಶ್ರೀನಿವಾಸ್ ಅವರು ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ತಾವು ಬೆಂಬಲಿಸುತ್ತೇವೆ ಎಂದಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಸಿ.ಎಂ.ಆರ್.ಶ್ರೀನಾಥ್ ಮತ್ತು ಕುರ್ಕಿ ರಾಜೇಶ್ವರಿ ಅಕಾಂಕ್ಷಿಗಳಾಗಿದ್ದರು. ಆದರೆ ಸಿಎಂಆರ್ ಶ್ರೀನಾಥ್‌ಗೆ ಟಿಕೆಟ್ ಖಚಿತವಾಗಿದೆ. ಬಿಜೆಪಿಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಜಿ ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಜಿಪಂ ಮಾಜಿ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಅಕಾಂಕ್ಷಿಗಳಾಗಿದ್ದರೂ ಸಹ ವರ್ತೂರು ಪ್ರಕಾಶ್ ಅವರಿಗೆ ಟಿಕೆಟ್ ಲಭಿಸಲಿದೆ ಎನ್ನಲಾಗಿದೆ.
ಆದರೆ ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಕ್ಕೆ ಪಕ್ಷದ ಹೈಕಮಾಂಡ್ ಸಮ್ಮತಿಸಿಲ್ಲ. ಏಕೆಂದರೆ ಸಿದ್ದರಾಮಯ್ಯ ರಾಜ್ಯದ ಉಸ್ತುವಾರಿ ವಹಿಸಿರುವುದರಿಂದ ಕೋಲಾರ ಕ್ಷೇತ್ರದಲ್ಲಿ ಯಾವುದೇ ರಿಸ್‌್ಕ ತೆಗೆದುಕೊಳ್ಳುವುದು ಬೇಡ, ವರುಣ ಕ್ಷೇತ್ರದಲ್ಲೇ ಸ್ಪರ್ಧಿಸಿ ಎಂದು ಸೂಚಿಸಿದೆ.
ಸಿದ್ದರಾಮಯ್ಯ ಗೆಲುವು ಸಲಭವಿಲ್ಲ
ಕೋಲಾರ ಕ್ಷೇತ್ರ(Kolar assembly constituency) ಸಮೀಕ್ಷೆ ವರದಿಗಳಂತೆ ಸಿದ್ದರಾಮಯ್ಯ(Siddaramaiah)ರಿಗೆ ಒತ್ತಾಯಿಸಿರುವಂತ ಘಟಬಂಧನ್ ನಾಯಕರು ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದರಿಂದ ಕೋಲಾರ ಕ್ಷೇತ್ರದತ್ತ ಗಮನ ಹರಿಸಲು ಸಾಧ್ಯವಿಲ್ಲ. ಮಾಲೂರು ನಂಜೇಗೌಡರು, ಬಂಗಾರಪೇಟೆ ಎಸ್.ಎನ್. ನಾರಾಯಣಸ್ವಾಮಿ, ಶ್ರೀನಿವಾಸಪುರ ರಮೇಶ್ ಕುಮಾರ್ ಇವರುಗಳು ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಅವರ ಕ್ಷೇತ್ರದಲ್ಲಿನ ಪ್ರಚಾರಕ್ಕೆ ಸಮಯ ಇರುವುದಿಲ್ಲ ಇನ್ನು ಕೋಲಾರ ಕ್ಷೇತ್ರದತ್ತ ಬಂದು ಪ್ರಚಾರ ಮಾಡುತ್ತಾರೆಯೇ ಎಂಬ ಪ್ರಶ್ನೆ ಎಂದುರಾಗಿದೆ.
ಉಳಿದಂತೆ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಮತ್ತು ನಸೀರ್ ಅಹ್ಮದ್ ಅವರುಗಳು ಮಾತ್ರ ಕೋಲಾರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗುವುದು ಕಷ್ಟಸಾಧ್ಯ ಎನ್ನಲಾಗಿದೆ. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ದೇವನಹಳ್ಳಿಯಲ್ಲಿ ಸ್ಪರ್ಧಿಸುವುದರಿಂದ ಜೊತೆ ಮೊದಲಿನಿಂದಲೂ ಘಟಬಂಧನ್ ಗುಂಪಿನ ಮೇಲೆ ಮುನಿಸು ಇರುವುದು ಸಿದ್ದರಾಮಯ್ಯ ಅವರ ಮೇಲೂ ಪರಿಣಾಮ ಬೀರುವುದನ್ನು ಅಲ್ಲಗೆಳೆಯುವಂತಿಲ್ಲ.
ಎಲ್ಲರ ಚಿತ್ತ ‘ಜೈ ಭಾರತ್’ನತ್ತ
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕೋಲಾರದಲ್ಲಿ ಏ.16ರಂದು ನಡೆಯಲಿರುವ ಗೈ ಭಾರತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆಯಾಗಲಿದೆ ಎಂದು ಕಾರ್ಯಕರ್ತರು, ನಾಯಕರು ನಿರೀಕ್ಷೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯ ಗೊಂದಲದಲ್ಲಿ ಮುಳುಗಿದ್ದು ಪ್ರಚಾರದ ಕಾರ್ಯವನ್ನು ಸಂಪೂರ್ಣವಾಗಿ ಮರೆತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೂ ಚುನಾವಣೆ ಎದುರಿಸುವುದು ಸುಲಭವಲ್ಲ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜಕೀಯಕ್ಕಿಂತ ಕೋಲಾರ ಅಭಿವೃದ್ಧಿ ಮುಖ್ಯ: ವರ್ತೂರ್ ಪ್ರಕಾಶ್
ಇತ್ತ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ದಿನೇ ದಿನೇ ರಂಗೇರುತ್ತಿದೆ. ಚುನಾವಣೆ ಅದಿಸೂಚನೆಗೊ ಮುನ್ನವೇ ಹಲವಾರ ಕಡೆ ಮತದಾರರ ಓಲೈಕೆಗಾಗಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ ಮನೆಯಲ್ಲಿ ಮಾತ್ರ ಮೌನ ವಾತಾವರಣ ಸೃಷ್ಟಿಯಾಗಿದೆ.