ಕೇಂದ್ರದಿಂದ ಗುಜರಾತ್‌ಗೆ ಹೆಚ್ಚು, ನಮಗೆ ಕಮ್ಮಿ ಹಣ ಏಕೆ?: ಸದನದಲ್ಲಿ ಬಿರುಸಿನ ಚರ್ಚೆ

By Girish GoudarFirst Published Mar 10, 2022, 8:03 AM IST
Highlights

*  ಎಚ್‌ಡಿಕೆ, ಖಾದರ್‌ ಪ್ರಶ್ನೆ; ಮಾಧುಸ್ವಾಮಿ ಸಮರ್ಥನೆ
*  ಸದನದಲ್ಲಿ ಗುಜರಾತ್‌ ಮಾಡೆಲ್‌ ಬಗ್ಗೆ ಬಿಸುಸಿನ ಚರ್ಚೆ
*  ಕೇಂದ್ರದಿಂದ ತೆರಿಗೆ ಪಾಲು ನೀಡುವಲ್ಲಿ ತೀವ್ರ ಅನ್ಯಾಯ 
 

ಬೆಂಗಳೂರು(ಮಾ.10): ಗುಜರಾತ್‌(Gujarat) ಅಭಿವೃದ್ಧಿ ಹೊಂದಿದ ರಾಜ್ಯವೇ ಅಥವಾ ಹಿಂದುಳಿದ ರಾಜ್ಯವೇ ಎಂಬ ಕುರಿತು ಬುಧವಾರ ಸದನದಲ್ಲಿ ಚರ್ಚೆ ನಡೆದಿದ್ದು, ‘ಗುಜರಾತ್‌ನ ಮರುಭೂಮಿ(Desert) ಸುತ್ತಲಿನ ಭಾಗ ಸೇರಿದಂತೆ ಹಲವು ಭಾಗ ಈಗಲೂ ಹಿಂದುಳಿದಿದೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ(JC Madhuswamy) ಹೇಳಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌(Congress) ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ.ಖಾದರ್‌(UT Khader), ‘ಗುಜರಾತ್‌ ಹಿಂದುಳಿದ ರಾಜ್ಯವಾದರೆ ಗುಜರಾತ್‌ ಮಾದರಿ ಎಂದು ಏಕೆ ಸುಳ್ಳು ಪ್ರಚಾರ ಮಾಡುತ್ತೀರಿ? ಗುಜರಾತ್‌ ಮಾದರಿಯನ್ನು ನಮ್ಮಲ್ಲಿ ಅನುಷ್ಠಾನ ಮಾಡಬೇಕು ಎಂದು ಏಕೆ ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.

Latest Videos

HD Kumaraswamy ಇನ್ಮುಂದೆ ತಾಜ್‌ ವೆಸ್ಟೆಂಡ್‌ಗೆ ಹೋಗಲ್ಲ!

ಬಜೆಟ್‌(Budget) ಮೇಲಿನ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್‌ನ(JDS) ಎಚ್‌.ಡಿ.ಕುಮಾರಸ್ವಾಮಿ(HD Kumaraswamy), ಕೇಂದ್ರದಿಂದ ತೆರಿಗೆ ಪಾಲು ನೀಡುವಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯ 100 ರು. ತೆರಿಗೆ ಪಾವತಿಸಿದರೆ 40 ರು. ವಾಪಸು ನೀಡಲಾಗುತ್ತದೆ. ಅದೇ ಗುಜರಾತ್‌ ಹಾಗೂ ರಾಜಸ್ಥಾನ ರಾಜ್ಯಗಳಿಗೆ ದೊಟ್ಟಮಟ್ಟದ ಅನುದಾನ ಸಿಗುತ್ತಿದೆ. ಉತ್ತರ ಪ್ರದೇಶ 100 ರು. ತೆರಿಗೆ ಪಾವತಿಸಿದರೆ 250 ರು. ಅನುದಾನ ಪಡೆಯುತ್ತಿದೆ. ನಮ್ಮ ರಾಜ್ಯಕ್ಕೆ(Karnayaka) ತೀವ್ರ ಅನ್ಯಾಯವಾಗುತ್ತಿದ್ದು, ನಾಡಿನ ಜನತೆ ತೆರಿಗೆ ಕಟ್ಟುವುದೇ ತಪ್ಪೇ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜೆ.ಸಿ. ಮಾಧುಸ್ವಾಮಿ, ಹಿಂದುಳಿದ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಣಕಾಸು ಆಯೋಗದ ಸಭೆಯಲ್ಲಿ ಇವೆಲ್ಲವನ್ನೂ ನಿರ್ಧರಿಸುತ್ತದೆ. ಅನುದಾನವನ್ನು ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಅತ್ಯಂತ ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.

ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ, ‘ನಿಮ್ಮ ಅಭಿಪ್ರಾಯ ಒಪ್ಪುತ್ತೇವೆ. ಹಾಗಾದರೆ ಗುಜರಾತ್‌ ಹಿಂದುಳಿದಿದೆಯೇ? ಅತಿ ಹಿಂದುಳಿದಿದೆಯೇ? ಈ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿಲ್ಲವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಮಾಧುಸ್ವಾಮಿ, ‘ಹೌದು ಸರ್‌, ಗುಜರಾತ್‌ನಲ್ಲಿ ಮರುಭೂಮಿ ಹಾಗೂ ಸುತ್ತಮುತ್ತಲಿನ ಬಹಳಷ್ಟುಪ್ರದೇಶಗಳು ಈಗಲೂ ಹಿಂದುಳಿದಿವೆ’ ಎಂದು ಹೇಳಿದರು. ಕುಮಾರಸ್ವಾಮಿ ಮಾತು ಮುಂದುವರೆಸಿ ಬೇರೆ ವಿಷಯ ಕೈಗೆತ್ತಿಕೊಂಡಿದ್ದರಿಂದ ಗುಜರಾತ್‌ ಮಾಡೆಲ್‌ ಚರ್ಚೆ ಅಂತ್ಯವಾಯಿತು.

ಮಾಧುಸ್ವಾಮಿ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ

ಬೆಂಗಳೂರು: ಅಧಿವೇಶನ ನಡೆಸಲು ಅವಕಾಶ ಮಾಡಿಕೊಡದೇ ಕಾಂಗ್ರೆಸ್‌(Congress) ಸದಸ್ಯರು ಸಭಾಪತಿ ಮತ್ತು ಅವರ ಪೀಠಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತು ಸದನದಲ್ಲಿ(Session) ಕೆಲಕಾಲ ಕೋಲಾಹಲ ಸೃಷ್ಟಿಸಿತ್ತು.

Shivamogga Riots: ರಾಜ್ಯದ ಪೊಲೀಸರಿಂದಲೇ ಹರ್ಷ ಹತ್ಯೆ ಕೇಸ್‌ ತನಿಖೆ: ಮಾಧುಸ್ವಾಮಿ

ಫೆ.21 ರಂದು ಭೋಜನ ವಿರಾಮದ ಕಾಂಗ್ರೆಸ್‌ ಸದಸ್ಯರು ಪೀಠದ ಮುಂದೆ ಬಂದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಈಶ್ವರಪ್ಪ(KS Eshwarappa) ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ(National Flag) ಅಪಮಾನ ಆಗುವಂತಹ ವಿಚಾರಗಳಿಲ್ಲ. ಯಾವುದೇ ಕಾರಣಕ್ಕೂ ಅವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂದು ಸರ್ಕಾರ(Government of Karnataka) ಸ್ಪಷ್ಟಪಡಿಸಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯವ್ಯಾಪಿ ಸ್ಥಳವಿದೆ. ಆರೋಪ ಸಾಬೀತು ಪಡಿಸಿದರೆ ಶಿಕ್ಷೆ ನೀಡಲು ನ್ಯಾಯಾಲಯವಿದೆ. ತಮ್ಮ ಹೋರಾಟಕ್ಕೆ ಸದನವನ್ನು ಬಳಸಿಕೊಳ್ಳುವುದು ಸರಿ ಅಲ್ಲ ಎಂದು ತಿಳಿಸಿದ್ದರು. 

ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿ ಸಾರ್ವಜನಿಕ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡದೇ ಅಧಿವೇಶನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಸಭಾಧ್ಯಕ್ಷರಿಗೆ ಮತ್ತು ಅವರ ಪೀಠಕ್ಕೆ ಮಾಡುತ್ತಿರುವ ಅಪಮಾನ ಎಂದರು, ಇದಕ್ಕೆ ಬಿಜೆಪಿ ಸದಸ್ಯರಾದ ಭಾರತಿ ಶೆಟ್ಟಿ, ಆಯನೂರು ಮಂಜುನಾಥ್‌ ದನಿಗೂಡಿಸಿದ್ದರು.

click me!