Asianet Suvarna News Asianet Suvarna News

Shivamogga Riots: ರಾಜ್ಯದ ಪೊಲೀಸರಿಂದಲೇ ಹರ್ಷ ಹತ್ಯೆ ಕೇಸ್‌ ತನಿಖೆ: ಮಾಧುಸ್ವಾಮಿ

*  ಬೇರೆ ಯಾವುದೇ ತನಿಖೆಯ ಅಗತ್ಯವಿಲ್ಲ: ಸಚಿವ ಮಾಧುಸ್ವಾಮಿ
*  ನ್ಯಾಯಾಂಗ ತನಿಖೆಗೆ ಕೋರಿ ಜೆಡಿಎಸ್‌ ಶಾಸಕರಿಂದ ಸಭಾತ್ಯಾಗ
*  ದುಷ್ಕರ್ಮಿಗಳು ಎಲ್ಲೇ ಇದ್ದರೂ ಹಿಡಿದು ಕಾನೂನು ಕ್ರಮ 
 

Karnataka police Should Investigate Harsha Murder Case  Says Minister JC Madhuswamy grg
Author
Bengaluru, First Published Feb 23, 2022, 4:32 AM IST

ಬೆಂಗಳೂರು(ಫೆ.23): ಶಿವಮೊಗ್ಗದ(Shivamogga) ಯುವಕ ಹರ್ಷ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಲು ರಾಜ್ಯದ ಪೊಲೀಸರು ಸಮರ್ಥರಾಗಿದ್ದಾರೆ. ಬೇರೆ ಯಾವುದೇ ತನಿಖೆಗೆ ಅಗತ್ಯವಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಹೇಳಿದ್ದಾರೆ.

ಮಂಗಳವಾರ ಶಿವಮೊಗ್ಗದ ಹರ್ಷ ಕೊಲೆ(Harsha Murder) ಪ್ರಕರಣದ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ಹರ್ಷ ಎಂಬ ಯುವಕನ ಹತ್ಯೆ ಹಾಗೂ ಬಳಿಕ ನಡೆದ ಪ್ರಕ್ಷುಬ್ಧ ಘಟನೆಗಳು ಅನಿರೀಕ್ಷಿತ. ರಾಜ್ಯ ಸರ್ಕಾರ(Government of Karnataka) ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿಲ್ಲ. ದುಷ್ಕರ್ಮಿಗಳು ಎಲ್ಲೇ ಇದ್ದರೂ ಹಿಡಿದು ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

Harsha Murder Case: ಶಿವಮೊಗ್ಗ ಘಟನೆ ರಾಜಕೀಯ ಬಳಕೆ ಸಲ್ಲದು: ಸಂಗಣ್ಣ

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್‌(JDS) ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಹತ್ಯೆ ಪ್ರಕರಣ ಹಾಗೂ ನಂತರದ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ(Investigation) ವಹಿಸಬೇಕು. ಹಾನಿಯಾದ ಆಸ್ತಿ-ಪಾಸ್ತಿ ಮಾಲಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ನಡುವೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರಾಜ್ಯದ ಪೊಲೀಸರೇ(Police) ತನಿಖೆಗೆ ಸಮರ್ಥರಾಗಿದ್ದಾರೆ. ಬೇರೆ ತನಿಖೆ ಅಗತ್ಯವಿಲ್ಲ ಎಂದಾಗ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಪಿಎಫ್‌ಐ, ಎಸ್‌ಡಿಪಿಐ ನಿಷೇಧಿಸಿ:

ಬಿಜೆಪಿಯ ಆಯನೂರು ಮಂಜುನಾಥ್‌ ಮಾತನಾಡಿ, ಘಟನೆಗಳ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಈ ಪ್ರಕರಣದ ಬಗ್ಗೆ ಮಾತನಾಡಿದ್ದ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಹಾಗೂ ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಲಾಗಿದೆ. ಹರ್ಷನ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಸಿಎಫ್‌ಐ ಸಂಘಟನೆ ಹೆಸರು ಕೇಳಿ ಬಂದಿದೆ. ಹೀಗಾಗಿ ಈ ಸಂಘಟನೆಗಳನ್ನು ನಿಷೇಧಿಸಬೇಕು. ಮೃತ ಹರ್ಷ ಕುಟುಂಬಕ್ಕೆ ಪರಿಹಾರ ನೀಡಬೇಕು. ಶಾಸಕ ಡಿ.ಎಸ್‌.ಅರುಣ್‌ ಹಾಗೂ ಇತರೆ ಶಾಸಕರಿಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಪ್ರೇರಿತ ದಂಗೆ:

ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಮಾತನಾಡಿ, ಶಿವಮೊಗ್ಗದಲ್ಲಿ 144 ಸೆಕ್ಷನ್‌ ಜಾರಿ ನಡುವೆಯೂ ನಡೆದ ಹರ್ಷನ ಮೃತದೇಹದ ಮೆರವಣಿಗೆಯಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಭಾಗಿಯಾಗಿದ್ದರು. ಹರ್ಷನ ಹತ್ಯೆ ಬಳಿಕ ನಡೆದ ಘಟನೆ ಸರ್ಕಾರಿ ಪ್ರೇರಿತ ದಂಗೆ. ಸಚಿವ ಈಶ್ವರಪ್ಪ ದಂಗೆ ಮಾಡಿಸಲೆಂದೇ ಶಿವಮೊಗ್ಗಕ್ಕೆ ಹೋಗಿದ್ದರು ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಡಬಲ್‌ ಸ್ಟ್ಯಾಂಡರ್ಡ್‌ ಕಾಂಗ್ರೆಸ್‌(Congress) ಎಂದು ಕೂಗಿದರು. ಇದರಿಂದ ಕೆರಳಿದ ಬಿ.ಕೆ.ಹರಿಪ್ರಸಾದ್‌, ನಿಮ್ಮದೇ ಸರ್ಕಾರವಿದೆ. ತಾಕತ್‌ ಇದ್ದರೆ ಎಸ್‌ಡಿಪಿಐ ಬ್ಯಾನ್‌ ಮಾಡಿ ಎಂದು ಸವಾಲು ಹಾಕಿದರು. ಉಗ್ರರನ್ನು ಬೆಂಬಲಿಸುವ ಪಕ್ಷ ಬಿಜೆಪಿ ಎಂದು ಕಿಡಿಕಾರಿದರು. ಈ ವೇಳೆ ಸದನದಲ್ಲಿ ಕೆಲ ಕಾಲ ಗದ್ದಲ ಏರ್ಪಟ್ಟಿತು.

ಮಾಧುಸ್ವಾಮಿ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ

ಅಧಿವೇಶನ ನಡೆಸಲು ಅವಕಾಶ ಮಾಡಿಕೊಡದೇ ಕಾಂಗ್ರೆಸ್‌ ಸದಸ್ಯರು ಸಭಾಪತಿ ಮತ್ತು ಅವರ ಪೀಠಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತು ಸದನದಲ್ಲಿ(Session) ಕೆಲಕಾಲ ಕೋಲಾಹಲ ಸೃಷ್ಟಿಸಿದ ಘಟನೆ ಸೋಮವಾರ ನಡೆದಿತ್ತು. 

ಭೋಜನ ವಿರಾಮದ ಕಾಂಗ್ರೆಸ್‌ ಸದಸ್ಯರು ಪೀಠದ ಮುಂದೆ ಬಂದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಈಶ್ವರಪ್ಪ(KS Eshwarappa) ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ(National Flag) ಅಪಮಾನ ಆಗುವಂತಹ ವಿಚಾರಗಳಿಲ್ಲ. ಯಾವುದೇ ಕಾರಣಕ್ಕೂ ಅವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂದು ಸರ್ಕಾರ(Government of Karnataka) ಸ್ಪಷ್ಟಪಡಿಸಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯವ್ಯಾಪಿ ಸ್ಥಳವಿದೆ. ಆರೋಪ ಸಾಬೀತು ಪಡಿಸಿದರೆ ಶಿಕ್ಷೆ ನೀಡಲು ನ್ಯಾಯಾಲಯವಿದೆ. ತಮ್ಮ ಹೋರಾಟಕ್ಕೆ ಸದನವನ್ನು ಬಳಸಿಕೊಳ್ಳುವುದು ಸರಿ ಅಲ್ಲ ಎಂದರು.

ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿ ಸಾರ್ವಜನಿಕ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡದೇ ಅಧಿವೇಶನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಸಭಾಧ್ಯಕ್ಷರಿಗೆ ಮತ್ತು ಅವರ ಪೀಠಕ್ಕೆ ಮಾಡುತ್ತಿರುವ ಅಪಮಾನ ಎಂದರು, ಇದಕ್ಕೆ ಬಿಜೆಪಿ ಸದಸ್ಯರಾದ ಭಾರತಿ ಶೆಟ್ಟಿ, ಆಯನೂರು ಮಂಜುನಾಥ್‌ ದನಿಗೂಡಿಸಿದರು.

Flag Row: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೀವಿ ಎಂದಿಲ್ಲ: ಈಶ್ವರಪ್ಪ

ಈ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರಕಾಶ ರಾಥೋಡ್‌ ಮತ್ತು ಸಲೀಂ ಅಹಮ್ಮದ್‌, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಕರಣವನ್ನು ಸದನದಲ್ಲಿ ಚರ್ಚಿಸದೆ ಮತ್ತೆಲ್ಲಿ ಚರ್ಚಿಸಬೇಕು? ನಾವು ಕೇವಲ ಈಶ್ವರಪ್ಪ ವಜಾಕ್ಕೆ ಒತ್ತಾಯಿಸುತ್ತಿದೇವೆ ಹೊರತು ಸಭಾತಿಗಳನ್ನು ವಿರೋಧಿಸುತ್ತಿಲ್ಲ. ಸಚಿವರ ಮಾತನ್ನು ಒಪ್ಪುವುದಿಲ್ಲ. ಪ್ರತಿಭಟನೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದರು.

‘ಸಂವಿಧಾನದ(Constitution) ಬಗ್ಗೆ ಗೌರವ ಇದ್ದರೆ ಸದನದ ಸಮಯ ಹಾಳು ಮಾಡಬಾರದು. ಸಭಾಪತಿಗಳಿಗೆ ಗೌರವ ನೀಡಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲ ಕಾಂಗ್ರೆಸ್‌ ಸದಸ್ಯರಿಗಿಲ್ಲ’ ಎಂದು ಸಚಿವ ಮಾಧುಸ್ವಾಮಿ ಕಿಡಿಕಾರಿದರು. ಇದಕ್ಕೆ ಪ್ರತಿಪಕ್ಷದಿಂದ ಅಪಮಾನ ಆಗಿದೆಯೇ ಎಂಬುದನ್ನು ಸಭಾಪತಿಗಳೇ ಸ್ಪಷ್ಟಪಡಿಸಲಿ’ ಎಂದು ವಿರೋಧಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು.
 

Follow Us:
Download App:
  • android
  • ios