ಪ್ರತಿ ಮನೆಗೆ ಉಚಿತ ವಿದ್ಯುತ್, ನಿರುದ್ಯೋಗಿಗೆ 3,000 ರೂ, ಆಪ್ ಚುನಾವಣಾ ಪ್ರಣಾಳಿಕೆ ಬಿಡುಗಡೆ!

By Suvarna NewsFirst Published Aug 19, 2023, 6:25 PM IST
Highlights

ಕರ್ನಾಟಕದಲ್ಲಿ ಕಾಂಗ್ರೆಸ್ ಉಚಿತ 5 ಗ್ಯಾರೆಂಟಿ ನೀಡಿ ಹೈರಾಣಾಗಿದೆ. ಇದೀಗ ಆಪ್ ಸರದಿ. ಚುನಾವಣೆ ಗೆಲ್ಲಲು ಆಮ್ ಆದ್ಮಿ ಪಾರ್ಟಿ ಮತ್ತೆ ಉಚಿತ ಭರವಸೆ ನೀಡಿದೆ. ಪ್ರತಿ ಮನೆಗೆ ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ಸೇರಿದಂತೆ ಹಲವು ಭರವಸೆ ನೀಡಿದೆ.
 

ರಾಯ್‌ಪುರ್(ಆ.19) ತಮಿಳುನಾಡಿನಲ್ಲಿ ಅಬ್ಬರಿಸುತ್ತಿದ್ದ ಚುನಾವಣೆ ಉಚಿತ ಭರವಸೆಗಳು ಇದೀಗ ದೇಶಾದ್ಯಂತ ವ್ಯಾಪಿಸಿದೆ. ಆಮ್ ಆದ್ಮಿ ಪಾರ್ಟಿಯ ಉಚಿತ ಭರವಸೆ ರೀತಿಯಲ್ಲೇ ಕರ್ನಾಟಕದಲ್ಲೂ ಕಾಂಗ್ರೆಸ್ 5 ಗ್ಯಾರೆಂಟಿ ಘೋಷಿಸಿ ಸರ್ಕಾರ ರಚಿಸಿದೆ. ಇದೀಗ ಆಮ್ ಆದ್ಮಿ ಪಾರ್ಟಿ ತಮ್ಮ ಟ್ರೇಡ್ ಮಾರ್ಕ್ ಉಚಿತ ಭರವಸೆಯನ್ನು ಮುಂದುವರಿಸಿದೆ. ಚತ್ತೀಸಘಡ ಚುನಾವಣೆಗೂ ಆಪ್ ಉಚಿತ ಭರವಸೆ ನೀಡಿದೆ. ಇದೀಗ ಪ್ರತಿ ಮನೆಗೆ ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ಪ್ರತಿ ತಿಂಗಳು, 3,000 ರೂಪಾಯಿ, ಸ್ತ್ರೀಯರಿಗೆ ಪ್ರತಿ ತಿಂಗಳು 1,000 ರೂಪಾಯಿ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ಆಪ್ ನೀಡಿದೆ.

ಚತ್ತೀಸಘಡ ಚುನಾವಣೆ ಇದೇ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಚುನಾವಣಾ ಆಯೋಗ ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡಲಿದೆ. ಈಗಾಗಲೇ ಬಿಜೆಪಿ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಆಮ್ ಆದ್ಮಿ ಪಾರ್ಟಿ ಮತದಾರರಿಗೆ ಭರಪೂರ ಭರವಸೆ ನೀಡಿದೆ.  ನಿರುದ್ಯೋಗಿಗಳಿಗೆ ಸರ್ಕಾರ ಖಚಿತ ಉದ್ಯೋಗ ನೀಡುವ ಭರವಸೆ ನೀಡಿದೆ. ಇನ್ನು ಉದ್ಯೋಗ ಸಿಗುವ ವರೆಗೆ ಪ್ರತಿ ತಿಂಗಳು 3,000 ರೂಪಾಯಿ ಭರವಸೆ ನೀಡಿದೆ. ಚತ್ತೀಸಘಡದಲ್ಲಿ ಆಪ್ ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗದ ಭರವಸೆ ನೀಡಿದೆ. 

ಚುನಾವಣೆಗೆ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಮಹತ್ವದ ಬದಲಾವಣೆ!

ದೆಹಲಿ, ಪಂಜಾಬ್ ರೀತಿಯಲ್ಲೇ ಚತ್ತೀಸಘಡದಲ್ಲೂ ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ.  ಇದು ಸಂಪೂರ್ಣ ಉಚಿತವಾಗಿದೆ. 300 ಯುನಿಟ್ ವರೆಗೆ ಯಾವುದೇ ಚಾರ್ಜ್ ಇರುವುದಿಲ್ಲ ಎಂದು ಖುದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇನ್ನು ದಿನದ 24 ಗಂಟೆ ಕೂಡ ನಗರ ಹಾಗೂ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ. ಇಷ್ಟೇ ಅಲ್ಲ ವಿದ್ಯುತ್ ಬಾಕಿ ಬಿಲ್ ಪಾವತಿಗೂ ಸರ್ಕಾರ ನೆರವಾಗಲಿದೆ ಎಂದಿದೆ.

ಮಹಿಳಾ ಸಬಲೀಕರಣಕ್ಕೆ ಆಫ್ ಉಚಿತ ಭರವಸೆ ನೀಡಿದೆ. 18 ಹಾಗೂ ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡಲಾಗುತ್ತದೆ. ಸ್ತ್ರಿ ಸಮ್ಮಾನ್ ಯೋಜನೆಯಡಿ ಪ್ರತಿ ತಿಂಗಳು ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶಿಕ್ಷಕರ ನೇಮಕ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ಆಪ್ ಪಾರ್ಟಿ ಚತ್ತೀಸಘಡ ಮತದಾರರಿಗೆ ನೀಡಿದೆ.

ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ

ಛತ್ತೀಸ್‌ಗಢದ 21 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಪ್ರತಿನಿಧಿಸುತ್ತಿರುವ ಪಟಾಣ್‌ ಕ್ಷೇತ್ರಕ್ಕೆ ದುಗ್‌ರ್‍ ಕ್ಷೇತ್ರದ ಸಂಸದ ವಿಜಯ್‌ ಬಘೇಲ್‌ ಅವರನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ.2018ರಲ್ಲಿ ಛತ್ತೀಸ್‌ಗಢ ವಿಧಾನಸಭೆಯ 90 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 68 ಸ್ಥಾನ, ಬಿಜೆಪಿ 15 ಸ್ಥಾನ ಗೆದ್ದಿತ್ತು. ಇನ್ನು ಮಧ್ಯಪ್ರದೇಶದ 230 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 109 ಮತ್ತು ಕಾಂಗ್ರೆಸ್‌ 114 ಸ್ಥಾನ ಗೆದ್ದಿತ್ತು. ಆದರೆ 2020ರಲ್ಲಿ ಕಾಂಗ್ರೆಸ್‌ನ 22 ಶಾಸಕರು ರಾಜೀನಾಮೆ ನೀಡಿದ ಕಾರಣ, ಕಾಂಗ್ರೆಸ್‌ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

click me!