ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ

By Kannadaprabha News  |  First Published Mar 20, 2023, 9:40 PM IST

ರಾಜ್ಯ ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದ ಬದಲಾವಣೆಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರಾರಂಭಿಸಿದ್ದೇನೆ. ಕೆಆರ್‌ಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಪ್ರತಿಯೊಂದು ಮಗುವಿಗೆ ಎಲ್‌ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ಸಂಕಲ್ಪ ಮಾಡಿದ್ದಾಗಿ ಕೆಆರ್‌ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.


ಗಂಗಾವತಿ (ಮಾ.20): ರಾಜ್ಯ ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದ ಬದಲಾವಣೆಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರಾರಂಭಿಸಿದ್ದೇನೆ. ಕೆಆರ್‌ಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಪ್ರತಿಯೊಂದು ಮಗುವಿಗೆ ಎಲ್‌ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ಸಂಕಲ್ಪ ಮಾಡಿದ್ದಾಗಿ ಕೆಆರ್‌ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ವಿರೂಪಾಪುರ ತಾಂಡಾ, ನೀಲಕಂಠೇಶ್ವರ ಕ್ಯಾಂಪ್‌ ಮತ್ತಿತರ ವಾರ್ಡ್‌ಗಳಲ್ಲಿ ಸಂಚರಿಸಿ ಜನರೊಂದಿಗೆ ಸಭೆ ನಡೆಸಿ ಮಾತನಾಡಿ, ಬಸವಣ್ಣನ ಆಶಯದಂತೆ ಪ್ರತಿ ಕುಟುಂಬಕ್ಕೂ ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.

ನಾನು ಮಾಡಿರುವ ಬಳ್ಳಾರಿಯ ಅಭಿವೃದ್ಧಿ ಕಾರ್ಯವನ್ನು ಒಮ್ಮೆ ಹೋಗಿ ನೋಡಿ ಬಂದರೆ ನಿಮಗೆಲ್ಲ ನನ್ನ ಮೇಲೆ ವಿಶ್ವಾಸ ಬರುತ್ತದೆ. ನಾನು ಕೇವಲ ಮಾತನಾಡಿ ಮರೆಯಾಗುವ ವ್ಯಕ್ತಿಯಲ್ಲ ಎಂದರು. ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ಅಮರಜ್ಯೋತಿ ನರಸಪ್ಪ, ಈ. ರಾಮಕೃಷ್ಣ, ರಾಮಾ ನಾಯ್ಕ, ಫಕೀರಪ್ಪ ಲಮಾಣಿ, ಸಂಜಯ ಬೆಟಗೇರಿ, ಚಂದ್ರಶೇಖರ ಹಿರೂರು, ರಮೇಶ ಹೊಸಮಲಿ, ಚನ್ನವೀರನಗೌಡ, ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ವಿರೂಪಾಕ್ಷಗೌಡ ನಾಯಕ ಹೇರೂರು ಮತ್ತಿತರು ಇದ್ದರು.

Tap to resize

Latest Videos

undefined

75,393.57 ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ: ಸಿಎಂ ಬೊಮ್ಮಾಯಿ

ಕೆಆರ್‌ಪಿ ಪಕ್ಷ 25 ಸ್ಥಾನ ಗೆಲ್ಲಲಿದೆ: ನಾನು ಸಿಎಂ, ಡಿಸಿಎಂ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ, ರಾಜ್ಯದ 15 ಜಿಲ್ಲೆಗಳಲ್ಲಿ 20 ರಿಂದ 25 ಸ್ಥಾನ ಪಕ್ಷ ಗೆಲ್ಲುತ್ತದೆ ಎಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದ ಉತ್ಸವ ಮೈದಾನದಲ್ಲಿ ಬುಧವಾರ ನಡೆದ ಪಕ್ಷದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ನನ್ನ ಬಳ್ಳಾರಿಯಿಂದ ಹೊರ ಹಾಕಲು ಕೆಲವರು ಪಿತೂರಿ ನಡೆಸಿದ್ದರು. ನಂತರ ಅವರು ಸುಪ್ರೀಂಗೆ ಅರ್ಜಿ ಹಾಕಿ ನನ್ನನ್ನು ಹೊರ ಹಾಕಿದರು. ವಿಧಿಯಾಟದಲ್ಲಿ ನಾನು ಹೊರಗೆ ಬಂದೆ ಎಂದರು.

ಇದಕ್ಕೂ ಮೊದಲು ಕ್ಷೇತ್ರದ ಅಭ್ಯರ್ಥಿ ಡಾ.ಚಾರುಲ್‌ ವೆಂಕಟರಮಣ ದಾಸರಿ ಮಾತನಾಡಿ, ಜನಾರ್ಧನರೆಡ್ಡಿ ಅವರ ಹೊಸ ಪಕ್ಷ ಸ್ಥಾಪಿಸಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕ್ಷೇತ್ರದಿಂದ ಗೆದ್ದವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾನು ಹಾಗೂ ನನ್ನ ಪತ್ನಿ ವೈದ್ಯ ವೃತ್ತಿಯಲ್ಲಿ ಜನರ ಸೇವೆ ಮಾಡಬೇಕೆನ್ನುವ ತುಡಿತದಿಂದ ಕನಕಗಿರಿಗೆ ಬಂದಿರುವೆ. ನನ್ನ ಗೆಲ್ಲಿಸಿ, ಜನಾರ್ದನರಡ್ಡಿ ಅವರ ಕೈ ಬಲಪಡಿಸುವಂತೆ ಕೋರಿದರು.

50 ಕ್ಷೇತ್ರಗಳಲ್ಲಿ ಕೆಆರ್‌ಪಿ ಪಕ್ಷ ಸ್ಪರ್ಧೆ: ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 50 ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ಸಿ. ರೇವಣ ಸಿದ್ದಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಗಳ ಹುಡುಕಾಟ ನಡೆದಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಚುನಾವಣೆ ಸಿದ್ಧತೆಯಲ್ಲಿದ್ದೇವೆಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಸಚಿವ ಮುರುಗೇಶ್‌ ನಿರಾಣಿ

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಭರವಸೆಗಳನ್ನು ಕೇಳಿ ಜನ ಸುಸ್ತಾಗಿದ್ದಾರೆ. ಆದರೆ ಜನಾರ್ದನ ರೆಡ್ಡಿಯವರು ರಾಜ್ಯದ ಅಭಿವೃದ್ಧಿ ಬಗ್ಗೆ ಹಲವಾರು ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪಕ್ಷದ ಪ್ರಣಾಳಿಕೆ ಕೂಡಾ ಬಿಡುಗಡೆ ಮಾಡಿದ್ದಾರೆ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವವರೆಗೂ ಹೋರಾಟ ಮಾಡುವಂತಹ ಛಲ ಹೊಂದಿದ್ದಾರೆ. ಇಂತಹ ಗುಣಗಳನ್ನು ಹೊಂದಿರುವ ರೆಡ್ಡಿಯವರ ಪಕ್ಷಕ್ಕೆ ಎಲ್ಲ ಕಡೆಗೂ ಸಾಕಷ್ಟುಜನಬೆಂಬಲ ವ್ಯಕ್ತವಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ತಾಲೂಕು ಅಧ್ಯಕ್ಷರಾಗಿ ದೇವಗೊಂಡನಹಳ್ಳಿ ಸಂತೋಷಕುಮಾರ ಅವರನ್ನು ಆಯ್ಕೆ ಮಾಡಿದ್ದಾರೆ. ಜತೆಗೆ ವಿವಿಧ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

click me!