Anekal: ಅಡ್ಡ ಮತದಾನ ಮಾಡಿದ ನಾಲ್ವರು ಬಿಜೆಪಿ ಪುರಸಭೆ ಸದಸ್ಯರ ವಜಾ

By Govindaraj S  |  First Published Sep 4, 2022, 11:45 PM IST

ಮಾರ್ಚ್ 14ರಂದು ನಡೆದಿದ್ದ ಬೊಮ್ಮಸಂದ್ರ ಪುರಸಭೆಯಲ್ಲಿ ಅಡ್ಡ ಮತದಾನ ಮಾಡಿದ ನಾಲ್ವರು ಬಿಜೆಪಿ ಪುರಸಭೆ ಸದಸ್ಯರು ವಜಾರಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ವಸಂತ್, ಸದಸ್ಯರಾದ ಚಲಪತಿ ಮತ್ತು ಪ್ರಸಾದ್ ಅವರನ್ನು ಪಕ್ಷಾಂತರ ನಿಷೇಧ ಕಾನೂನಡಿ ಜಿಲ್ಲಾಧಿಕಾರಿಗಳು ವಜಾಗೊಳಿಸಿದ್ದಾರೆ. 


ಆನೇಕಲ್ (ಸೆ.04): ಮಾರ್ಚ್ 14ರಂದು ನಡೆದಿದ್ದ ಬೊಮ್ಮಸಂದ್ರ ಪುರಸಭೆಯಲ್ಲಿ ಅಡ್ಡ ಮತದಾನ ಮಾಡಿದ ನಾಲ್ವರು ಬಿಜೆಪಿ ಪುರಸಭೆ ಸದಸ್ಯರು ವಜಾರಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ವಸಂತ್, ಸದಸ್ಯರಾದ ಚಲಪತಿ ಮತ್ತು ಪ್ರಸಾದ್ ಅವರನ್ನು ಪಕ್ಷಾಂತರ ನಿಷೇಧ ಕಾನೂನಡಿ  ಜಿಲ್ಲಾಧಿಕಾರಿಗಳು ವಜಾಗೊಳಿಸಿದ್ದಾರೆ. 

ಮಾರ್ಚ್ 14ರಂದು ನಡೆದಿದ್ದ ಬೊಮ್ಮಸಂದ್ರ ಪುರಸಭೆಗೆ ಚುನಾವಣೆ ನಡೆದಿತ್ತು. ಈ ನಾಲ್ವರು ಬಿಜೆಪಿ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕದೇ ಕಾಂಗ್ರೇಸ್ ಬೆಂಬಲ ಪಡೆದು ಅಧ್ಯಕ್ಷ ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದ ವೈ.ಗೋಪಾಲ್ ಮತ್ತು ಉಪಾಧ್ಯಕ್ಷ ವಸಂತ್ ಅವರಿಗೆ ಅಡ್ಡ ಮತದಾನ ಮಾಡಿದ್ದರು. ಜೊತೆಗೆ ಬೆಂಬಲ‌ ನೀಡಿದ್ದ ಪ್ರಸಾದ್ ಮತ್ತು ಚಲಪತಿ ಕೂಡ ವಜಾಗೊಂಡಿದ್ದಾರೆ. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ವಿಪ್ ಜಾರಿ ಮಾಡಿದ್ದರೂ ಅಡ್ಡ ಮತದಾನ ಮಾಡಿದ್ದರು. 

Tap to resize

Latest Videos

Tumakuru: ಮುದ್ದಹನುಮೇಗೌಡರ ಮನವೊಲಿಸುತ್ತೇವೆ: ಎಂ.ಬಿ.ಪಾಟೀಲ್‌

ವಜಾಗೊಳಿಸಿ ನಿನ್ನೆ (ಶನಿವಾರ) ಜಿಲ್ಲಾದಿಕಾರಿಗಳು ಆದೇಶ ಹೊರಡಿಸಿರುವ ಪ್ರತಿಯನ್ನು ಮಂಡಲ‌ ಬಿಜೆಪಿ ಅಧ್ಯಕ್ಷ ಬಿಬಿಐ ರಾಜು ಬಿಡುಗಡೆ ಮಾಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಮಂಡಲ ಅಧ್ಯಕ್ಷ ಬಿಬಿಐ ರಾಜು ಮುಂದಿನ ದಿನಗಳಲ್ಲಿ ಪಕ್ಷ ವಿರೋದಿ ಚಟುವಟಿಕೆಗಳಲಿ ತೊಡಗುವವರಿಗೆ ಇದೊಂದು ಪಾಠವೆಂದು‌ ಬಣ್ಣಿಸಿದ್ದಾರೆ. ಮಾರ್ಚ್ 14ರ ಚುನಾವಣೆಯಂದು ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ.ಬಿ.ಶಿವಣ್ಣ ಕೂಡಾ ಭಾಗವಹಿಸಿದ್ದರು.

ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಬೊಮ್ಮಸಂದ್ರ ಪುರಸಭೆ ಕೈ ಪಾಲು: ಪುರಸಭೆಯಾದಾಗಿನಿಂದಲೂ ಬಿಜೆಪಿ ವಶದಲ್ಲಿದ್ದ ಬೊಮ್ಮಸಂದ್ರ ಪುರಸಭೆಯ ಆಡಳಿತ ಮಹತ್ತರ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಪಾಲಾಗಿದೆ. ಬೊಮ್ಮಸಂದ್ರ ಪುರಸಭೆಯ 23 ಸ್ಥಾನಗಳ ಪೈಕಿ 14 ಸದಸ್ಯರು ಬಿಜೆಪಿ ಚಿಹ್ನೆಯಡಿ ಗೆದ್ದು ಮೊದಲ ಅವಧಿಯಲ್ಲಿ ಆಡಳಿತ ನಡೆಸಿದರು. ಕಾಂಗ್ರೆಸ್‌ನಿಂದ 6, ಜೆಡಿಎಸ್‌, ಸಿಪಿಎಂ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 9 ಸದಸ್ಯರಿದ್ದಾರೆ. 

Kolar: ಶೇ.70ರಷ್ಟು ದಲಿತರು ಬಿಜೆಪಿ ಪರ ಇದ್ದಾರೆ: ಛಲವಾದಿ ನಾರಾಯಣಸ್ವಾಮಿ

ಈಗ ಎರಡನೆಯ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಅಭ್ಯರ್ಥಿ ಸ್ಪರ್ಧಿಸಲು ಅವಕಾಶವಿತ್ತು. ಅಂತೆಯೇ ಬಿಜೆಪಿಯ ಎಲ್ಲ ಸದಸ್ಯರು ತೀರ್ಥಯಾತ್ರೆ ಹೊರಟು ಆಡಳಿತ ಮುಂದುವರಿಸುವ ಆಲೋಚನೆಯನ್ನು ಹೊಂದಿದ್ದರು. ಮಹತ್ತರ ಬದಲಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಮೂವರು ಸದಸ್ಯರು ಸೇರಿದಂತೆ ಇತರರನ್ನು ವಿಶ್ವಾಸಕ್ಕೆ ಪಡೆದು ಸಂಸದ ಮತ್ತು ಶಾಸಕರ ಮತ ಸೇರಿ ಒಟ್ಟು 12 ಮತಗಳನ್ನು ಪಡೆದು ಬೊಮ್ಮಸಂದ್ರ ಪುರಸಭೆಯ ಮೇಲೆ ಕಾಂಗ್ರೆಸ್‌ ಬಾವುಟ ಹಾರುವಂತಾಗಿದೆ.

click me!