ರಾಜ್ಯ ವಿಧಾನಸಭಾ ಚುನಾವಣಾ ಬಳಿಕ ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ಹೈಕಮಾಂಡ್‌ಗೆ ನನ್ನನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ.
ಬೆಂಗಳೂರು (ಜೂ.23): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಯಲ್ಲಿ ಈಗ ವಿಪಕ್ಷ ನಾಯಕನ ಆಯ್ಕೆಯ ಕಸರತ್ತು ಆರಂಭವಾಗಿದೆ. ಅದರಲ್ಲಿಯೂ ಚಾಮರಾಜನಗರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿರುವ ಮಾಜಿ ಸಚಿವ ವಿ. ಸೋಮಣ್ಣ ನನ್ನನ್ನು ರಾಜ್ಯಾಧ್ಯಕ್ಷನಾಗಿ ಮಾಡುವಂತೆ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಚುನಾವಣಾ ಬಳಿಕ ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ಯಾರ ಮೇಲೆ ಏನು ಅಭಿಪ್ರಾಯ ಎಂದು ಹೇಳುವುದಕ್ಕಿಂತ ನನ್ನ 45 ವರ್ಷದ ಅನುಭವ ಹೇಳಿದ್ದೇನೆ. ನನ್ನನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದೇನೆ. ಅದು ಎಷ್ಟು ಚರ್ಚೆ ಆಗ್ತಾ ಇದ್ಯೊ ಗೊತ್ತಿಲ್ಲ. ನಾನು ಬಿಜೆಪಿಗೆ ಬಂದು 15 ವರ್ಷ ಆಯ್ತು. ನನಗೆ ನೀಡಿದ್ದ ಎಲ್ಲಾ ಟಾಸ್ಕ್ ಮಾಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಒಟ್ಟಿಗೆ ನಡೆಸಿಕೊಂಡು ಹೋಗಬೇಕಿದೆ. ಸೋಮಣ್ಣಗೆ ಆಗ್ತಾದಾ ರಾಜ್ಯಾಧ್ಯಕ್ಷ ಹುದ್ದೆ ಎನ್ನುವ ಮಾತು ಆಡ್ತಾರೆ. ಎಲ್ಲಾರಿಗೂ ಬೈತಾರೆ ಎನ್ನುವ ಮಾತು ಹೇಳ್ತಾರೆ ಎಂದರು.
ನಮಗೆ ಒಂದೇ ಹೆಂಡ್ತಿ, ಮುಸ್ಲಿಂರಿಗೆ 25 ಹೆಂಡ್ರು: ಇಲ್ಲಿ ಅನ್ನ ತಿಂದೋರು ನಮ್ಮಂಗಿಬೇಕು - ಕೆ.ಎಸ್. ಈಶ್ವರಪ್ಪ
24 ಗಂಟೆ ಕೆಲಸ ಮಾಡಿದವನಿಗೆ ಕೆಲಸ ಇಲ್ಲದಂತಾಗಿದೆ: ರಾಜ್ಯಾಧ್ಯಕ್ಷ ಹುದ್ದೆ ಉದ್ಯೋಗ ಅಲ್ಲ. ನಾನು ನನ್ನ ಅನುಭವ ಬಳಸಿ ಕೆಲಸ ಮಾಡುತ್ತೇನೆ. ಅನಾನುಕೂಲ ಆದಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಅವಕಾಶ ನೀಡಿದರೆ ಕೆಲಸ ಮಾಡ್ತೇನೆ. ಪ್ರಧಾನಿಗಳ ಹೊರತು ಪಡಿಸಿ ಎಲ್ಲಾರಿಗೂ ಭೇಟಿ ಮಾಡಿದ್ದೇನೆ. ಅಮಿತ್ ಶಾ, ಜೆಪಿ ನಡ್ಡಾ ಸಂತೋಷ ಎಲ್ಲಾರನ್ನೂ ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಮನೆಗೂ ಹೋಗ್ತೇನೆ. ಟಾಸ್ಕ್ ನಾನು ಒಪ್ಪಿ ಮಾಡಿಲ್ವಾ.? ಯಡಿಯೂರಪ್ಪ ರಾಷ್ಟ್ರೀಯ ನಾಯಕರು. ಸಂಸದೀಯ ಮಂಡಳಿ ಸದಸ್ಯರು. ನಾನು 24/7 ಕೆಲಸ ಮಾಡ್ತಾ ಇದ್ದವನು. ಈಗ ಕೆಲಸ ಇಲ್ಲದಾಗಿದೆ. ನಾನು ಎಲ್ಲಾರನ್ನೂ ನಂಬಿಕೆಯಿಂದ ತೆಗೆದುಕೊಂಡು ಹೋಗ್ತೇನೆ ಎಂದು ಹೇಳಿದರು.
ನಾನು ತೆಗೆದುಕೊಂಡ ರಿಸ್ಕ್ ಯಾರೂ ತಗೊಂಡಿಲ್ಲ: ರಾಜ್ಯದಲ್ಲಿ ನನ್ನಷ್ಟು ಓಪನ್ ಯಾರು ಇಲ್ಲ. ನಂಗೆ ಅವಕಾಶ ನೀಡಿದ್ರೆ ಗಾಂಭೀರ್ಯದಿಂದ ಕೆಲಸ ಮಾಡ್ತೇನೆ. 100 ದಿನ ನನಗೆ ಅವಕಾಶ ಕೊಟ್ಟು ನೋಡಿ. ಕೆಲಸ ಮಾಡಿ ತೋರಿಸ್ತೇನೆ. ಆರ್. ಅಶೋಕ್ ಕೂಡ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದಾರೆ. ನಂದೆ ಬೇರೆ, ಅವರದ್ದೆ ಬೇರೆ. ನಾನು ತಗೊಂಡ ರಿಸ್ಕ್ ಇವಾರ್ಯಾರು ತಗೊಂಡಿಲ್ಲ. ನಾನು ರಿಸ್ಕ್ ತಗೊಂಡು ಕೆಲಸ ಮಾಡಿದ್ದೇನೆ. ಯಾರ್ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನೋದು ನನಗೆ ಗೊತ್ತಿಲ್ಲ. ಪಕ್ಷಕ್ಕೆ ಹಿನ್ನಡೆ ಆಗಿದೆ. ಹೀಗಾಗಿ ಅವಕಾಶ ಕೊಡಿ ಎಂದು ಹೇಳಿದ್ದೇನೆ. ನಂಗೆ ಕೊಡಿ, ಹೊಂದಾಣಿಕೆ ಹೇಗಾಗತ್ತೆ ನೋಡೊಣ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯೊಲ್ಲ: ಸಂಸದ ಸಂಗಣ್ಣ ಕರಡಿ
ಚಿಂಚುಳ್ಳಿ ಬಾಯ್ ಎಲೆಕ್ಷನ್ ನಲ್ಲಿ 43 ದಿನ ಕೆಲಸ ಮಾಡಿದೆ. ನಾವು ಗೆದ್ವಿ. ಆದರೆ ಹಾನಗಲ್ ಸೋತರು. ಬಸವಕಲ್ಯಾಣ, ಸಿಂದಗಿ, ಮಸ್ಕಿ ಹಾಗೂ ಲೋಕಸಭಾ ಚುನಾವಣೆ ತುಮಕೂರಿನಲ್ಲಿ ದೇವೆಗೌಡರು ಸ್ಪರ್ಧೆ ಮಾಡಿದಾಗ ಪಾರ್ಟಿ ಗೆದ್ದಿತು. ಅಲ್ಲೆಲ್ಲಾ ನಾನು ಕೆಲಸ ಮಾಡಿದ್ದೆನೆ ಎಂದು ಹೇಳಿದರು.
ಪ್ರತಿಕ್ರಿಯೆ ನೀಡದೇ ತೆರಳಿದ ಕಟೀಲ್: ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಪ್ರತಿಕ್ರಿಯಿಸಲು ನೀಡಲು ನಿರಾಕರಿಸಿದರು. ಮಾಹಿತಿ ಪಡೆದುಕೊಂಡು ಮಾತಾಡ್ತೇನೆಂದು ಎಂದು ಶಹಾಪುರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸದೇ ತೆರಳಿದರು.