ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಜೋರಾಗಿದ್ದು, ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ ಆಗಿದ್ದಾರೆ.
ಯಾದಗಿರಿ (ಜು.05): ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಜೋರಾಗಿದ್ದು, ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ ಆಗಿದ್ದಾರೆ. ಯಾರು ಈ ರೀತಿ ಹೇಳಿಕೆ ಕೊಡ್ತಾರೆ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಒತ್ತಾಯ ಮಾಡಿದ್ದು, ಈ ರೀತಿಯ ಹೇಳಿಕೆಗಳಿಂದ ಪಕ್ಷಕ್ಕೆ ಬಹಳಷ್ಟು ಡ್ಯಾಮೇಜ್ ಆಗ್ತಿದೆ. ಇಂಥಹ ಹೇಳಿಕೆಗಳಿಂದಾನೇ 123 ಇದ್ದವ್ರು 65ಕ್ಕೆ ಬಂದಿದ್ದೀವಿ. ನಿಮ್ಮ ವೈಯಕ್ತಿಕ ಹೇಳಿಕೆ ಕೊಟ್ಟು, ವೈಯಕ್ತಿಕ ಲಾಭಕ್ಕೋಸ್ಕರ ಇಡೀ ಪಕ್ಷವನ್ನೇ ಮುಗಿಸಿದ್ದೀರಿ. ಮತ್ತೇಷ್ಟು ಮುಗಿಸೋದು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಬರೀ ರೇಣುಕಾಚಾರ್ಯ ಅಲ್ಲ, ಬಹಳಷ್ಟು ಜನ ಈ ರೀತಿಯ ಹೇಳಿಕೆಗಳನ್ನ ಕೊಡ್ತಿದ್ದಾರೆ. ಹೈಕಮಾಂಡ್ ಮುಂದೆ ಬರಬೇಕಿದೆ. ಈ ರೀತಿ ಡ್ಯಾಮೇಜ್ ಮಾಡೋವ್ರನ್ನ ಕೂಡಿಸಿ ಬರೀ ಚಾಯ್ ಪೇ ಚರ್ಚಾ ಮಾಡಬಾರದು. ಸೀರಿಯಸ್ಸಾಗಿ ಆ್ಯಕ್ಷನ್ ತಗೊಂಡ್ರೆ ಒಳ್ಳೆಯದಾಗ್ತದೆ. ಆ್ಯಕ್ಷನ್ ತಗೊಂಡಿಲ್ಲ ಅಂದ್ರೆ ತ್ಯಾಗ ಮಾಡಿ, ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ನೋವಾಗ್ತದೆ. ಮೊದಲಿನಿಂದಲೂ ಹೇಳ್ತಾರೆ ನಮ್ದು ಶಿಸ್ತಿನ ಪಕ್ಷ ಅಂತಾ. ಆದ್ರೀಗ ಆ ಶಿಸ್ತು ಎಲ್ಲೋ ಬಿಗಡಾಯಿಸ್ತಿದೆ. ದೊಡ್ಡವ್ರಿಗೆ ಅವ್ರ ಜಾತಿ ನೋಡಿ, ಜನಾಂಗ ನೋಡಿ ಕ್ರಮ ಕೈಗೊಂಡಿಲ್ಲ ಅಂದ್ರೆ ಕಾರ್ಯಕರ್ತರು ಬಾಯಿ ಬಿಚ್ಚಿದ್ರೆ ಎಲ್ಲರ ಬುಡ ಅಲ್ಲಾಡ್ತದೆ ಎಂದರು.
undefined
ನನಗೂ ಸ್ಥಾನಮಾನ ಬೇಕು: ಅಧಿಕಾರದ ಆಸೆ ಬಹಿರಂಗಪಡಿಸಿದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ!
ಆ ರೀತಿ ಆಗೋದಕ್ಕೆ ಅವಕಾಶ ಮಾಡಿಕೊಡೋದು ಬೇಡ. ಯಾರು ತಪ್ಪು ಮಾಡಿದ್ದಾರೆ ಅವ್ರ ಮೇಲೆ ಖಡಕ್ ಆಗಿ ಕ್ರಮ ಕೈಗೊಳ್ಳಿ. ಬರೀ ಒಂದು ನೋಟೀಸ್ ನೊಟ್ಟು ಕರೆಸೋದು ಮಾತಾಡೋದು ಇದೆಲ್ಲಾ ಬೇಡ. ಹೈಕಮಾಂಡ್ ಇದರ ಬಗ್ಗೆ ಬಹಳ ಸೀರಿಯಸ್ಸಾಗಿ ತಗೊಳ್ಳಬೇಕು. ಯಾರು ಈ ರೀತಿ ಹೇಳಿಕೆ ಕೊಡ್ತಾರೆ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡುವಂತ ಕೆಲಸ ಮಾಡಬೇಕು. ಅವಾಗ ಮಾತ್ರ ಇದೆಲ್ಲಾ ಸರಿ ಹೋಗ್ತದೆ ಎಂದು ಮಾಜಿ ಸಚಿವ ರಾಜೂಗೌಡ ಗುಡುಗಿದ್ದಾರೆ.
ರೈತರಿಗೆ ಬರ ಪರಿಹಾರ ಘೋಷಿಸಿ: ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಕಡೆಗೆ ಗಮನ ಹರಿಸದೆ ಸದ್ಯ ತೆಲೆದೋರಿರುವ ಭೀಕರ ಪರಿಸ್ಥಿತಿ ನೋಡಿ ಬರ ಘೋಷಣೆ ಮಾಡಬೇಕು. ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಆಗ್ರಹಿಸಿದರು. ಬಸವಸಾಗರ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ನೀರಿನ ಸಂಗ್ರಹ ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮುಂಗಾರು ಮಳೆ ಇಲ್ಲದಿರುವುದರಿಂದ ಜಲಮೂಲಗಳಾದ ಜಲಾಶಯಗಳು, ನದಿ, ಹಳ್ಳ-ಕೊಳ್ಳಗಳು ಬರಿದಾಗಿವೆ.
'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಡನ್ನು ಹಾಡಿ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎಂದ ಡಿಕೆಶಿ
ಜೊತೆಗೆ ಮಳೆ ಕೊರೆತೆಯಿಂದಾಗಿ ಜಮೀನಿನಲ್ಲಿ ಹಸಿರು ಕಾಣುತ್ತಿಲ್ಲ. ಈ ಒಂದು ಹಂತದಲ್ಲಿ ಜಲಕ್ಷಾಮ ಉಂಟಾಗಿದೆ. ಅದರಲ್ಲೂ ಬಸವಸಾಗರ ಜಲಾಶಯದಲ್ಲಿ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಅಧಿಕಾರಿಗಳ ಮಾಹಿತಿಯಂತೆ ಜಲಾಶಯ ನಿರ್ಮಾಣ ಆದಾಗಿನಿಂದಲೂ ಕಳೆದ 2016ರಲ್ಲಿ ನೀರು ಸಂಗ್ರಹವು ಕನಿಷ್ಟಮಟ್ಟಕ್ಕೆ ಇಳಿದಿತ್ತು. ಇದು 2ನೇ ಬಾರಿ ಅಂದರೆ ಈ ವರ್ಷವು ಕೂಡ ಕನಿಷ್ಟಮಟ್ಟಕ್ಕೆ ಇಳಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಸಂಕಷ್ಟಪರಿಸ್ಥಿತಿಯನ್ನು ಸರ್ಕಾರ ಮನಗಂಡು ಕುಡಿವ ನೀರಿಗಾದರೂ ಮಹಾರಾಷ್ಟ್ರದ ಕೋಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಪ್ರಕಾಶ, ಎಇಇ ಪ್ರಭಾಕರ, ಎಇಗಳಾದ ಬಾಲಸುಭ್ರಮಣ್ಯ, ವಿಜಯ ಅರಳಿ ಸೇರಿದಂತೆ ಇತರರಿದ್ದರು.