ನಾನು ಈ ಹಿಂದೆ ಆರ್‌ಎಸ್‌ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆನು. ಆದರೆ ಆರ್‌ಎಸ್‌ಎಸ್ ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ ಎಂದು ಕಳೆದ ಐದು ತಿಂಗಳಲ್ಲಿ ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ.
ಉಡುಪಿ (ಅ.15): ನಾನು ಈ ಹಿಂದೆ ಆರ್‌ಎಸ್‌ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆನು. ಆದರೆ ಆರ್‌ಎಸ್‌ಎಸ್ ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ ಎಂದು ಕಳೆದ ಐದು ತಿಂಗಳಲ್ಲಿ ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಸಂಘದ ಹೊರಗೆ ಇದ್ದು ಟೀಕೆ ಮಾಡುವುದು ಸುಲಭ, ಅಜ್ಞಾನದಿಂದ ಸಂಘದ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಾಷ್ಟ್ರೀಯ ಸ್ವಯಂಸೇವ ಸಂಘದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇತ್ತೀಚೆಗೆ ಉಡುಪಿ ಪರ್ಕಳ ಪ್ರೌಢಶಾಲೆಯಲ್ಲಿ ನಡೆದ ಆರ್‌ಎಸ್‌ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಕಾರ್ಯಕ್ರಮದ ನಂತರ ಪತ್ರಕರ್ತರ ಜೊತೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಚಿವರ ಈ ಹೇಳಿಕೆ ಗಮನ ಸೆಳೆದಿದೆ.
ಆರ್‌ಎಸ್‌ಎಸ್ ದೇಶಭಕ್ತಿ, ದೇಶಪ್ರೇಮ, ದೇಶ, ನಿಷ್ಠೆಯ ಸಂಘಟನೆಯಾಗಿದೆ. ದೇಶದ ಕಟ್ಟಕಡೆಯ ಬಡವನ ಬಗ್ಗೆ ಸೇವಾ ರೂಪದಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ದೇಶ ಕಟ್ಟುವ ಕೆಲಸ, ಸಂಸ್ಕಾರ ಉದ್ದೀಪಿಸುವ ಕೆಲಸವನ್ನು ಸಂಘ ಮಾಡುತ್ತಿದ್ದು, ಕಟ್ಟ ಕಡೆಯ ವ್ಯಕ್ತಿಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಸೇವೆ ಸಲ್ಲಿಸುತ್ತಿದೆ ಎಂದರು. ಆರ್‌ಎಸ್‌ಎಸ್‌ನ ಶಕ್ತಿಯನ್ನು ಸಹಿಸದೆ ಹೊಟ್ಟೆ ಕಿಚ್ಚಿನಿಂದ ಟೀಕೆ ಮಾಡುವವರಿದ್ದಾರೆ. ಹೊಟ್ಟೆ ಕಿಚ್ಚಿನಿಂದ ಮಾತನಾಡುವವರಿಗೆ ಮದ್ದಿಲ್ಲ, ಅಜ್ಞಾನದಿಂದ ಮಾತನಾಡುವವರು ಆರ್‌ಎಸ್‌ಎಸ್‌ನ ಜ್ಞಾನ ಪಡೆದುಕೊಳ್ಳಬಹುದು, ಸಂಘವನ್ನು ತಿಳಿದುಕೊಳ್ಳದೆ ವಿರೋಧ ಮಾತನಾಡಬಾರದು ಎಂದವರು ಹೇಳಿದರು.
undefined
Udupi: ದೇಶದಲ್ಲಿನ ಪ್ರತಿ ಸಮಸ್ಯೆಗಳಿಗೆ ಆರ್‌ಎಸ್‌ಎಸ್ ಸ್ಪಂದಿಸುತ್ತದೆ: ಡಾ.ಅವಿನಾಶ್ ಶೆಟ್ಟಿ
ಒಬಿಸಿಗಳನ್ನ ವಿಶ್ವಾಸಕ್ಕೆ ಪಡೆದರೆ ಬಿಜೆಪಿಗೆ 130 ಸ್ಥಾನ: ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಪಕ್ಷ ಸ್ವಂತ ಬಲದಿಂದ ಎಂದೂ ಅಧಿಕಾರಕ್ಕೆ ಬಂದಿಲ್ಲ. ಆದರೆ ಹಿಂದುಳಿದ ವರ್ಗಗಳನ್ನು ವಿಶ್ವಾಸಕ್ಕೆ ಪಡೆದರೆ ಖಂಡಿತ 130 ಸೀಟು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಉಡುಪಿಯ ಪ್ರಮೋದ್ ಮಧ್ವರಾಜ್ ಬುಧವಾರ ಇಲ್ಲಿ ಹೇಳಿದರು. ಓಬಿಸಿ ಜಿಲ್ಲಾ ಮೋರ್ಚಾ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ತಾವು ಈ ಮಾತು ಹೇಳಬೇಕೋ ಬೇಡವೋ ಗೊತ್ತಿಲ್ಲ ಎಂದು ತಮ್ಮ ಮಾತು ಮುಂದುವರೆಸಿದ ಅವರು, ಬಿಜೆಪಿ ಎಂದೂ ಕೂಡ ರಾಜ್ಯದಲ್ಲಿ ಪೂರ್ಣಬಹುಮತದ ಸರ್ಕಾರ ರಚನೆ ಮಾಡಿಲ್ಲ.
ಉಡುಪಿ: ನಟ ರಮೇಶ್ ಅರವಿಂದ್‌ಗೆ ಕಾರಂತ ಹುಟ್ಟೂರ ಪ್ರಶಸ್ತಿ
ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲು ಮೂಲ ಕಾರಣ ಪ್ರಧಾನಿ ಮೋದಿ. ಅವರು ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆಂದರು. ಬಿಜೆಪಿ ಮೊದಲು ಹಿಂದುಳಿದ ವರ್ಗಗಳ ಸಮುದಾಯಗಳ ವಿಶ್ವಾಸ ಗಳಿಸಬೇಕು. ಶೇ.50 ರಷ್ಟುಓಬಿಸಿ ಸಮುದಾಯಗಳು ರಾಜ್ಯದಲ್ಲಿ ಇವೆ. ಕರ್ನಾಟಕದಲ್ಲಿ ಬಿಜೆಪಿ 130 ಸೀಟು ಗೆಲ್ಲಬೇಕಾದರೆ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು, ಆಗ ಮಾತ್ರ ಬಿಜೆಪಿ 130 ಸೀಟುಗಳ ಗಡಿ ದಾಟಬಹುದು. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಇದನ್ನು ಬಿಜೆಪಿ ಸವಾಲಾಗಿ ಸ್ಪೀಕರಿಸಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಶಕ್ತಿ ತುಂಬಬೇಕೆಂದ ಪ್ರಮೋದ್ ಮಧ್ವರಾಜ್, ಆನೆ ಬಲ ಆನೆಗೆ ಗೊತ್ತಿಲ್ಲ. ಓಬಿಸಿ ಬಲ ಓಬಿಸಿಗೆ ಗೊತ್ತಿಲ್ಲ ಎಂದರು.