ಕಾಂಗ್ರೆಸ್ ಪಕ್ಷ ಉಡುಪಿ ಜಿಲ್ಲೆಯಲ್ಲಿ ನನ್ನನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವ ದಿನ ದೂರ ಇಲ್ಲ, ನಾನು ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುವುದಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭವಿಷ್ಯ ನುಡಿದಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಮೇ.22): ಕಾಂಗ್ರೆಸ್ (Congress) ಪಕ್ಷ ಉಡುಪಿ (Udupi) ಜಿಲ್ಲೆಯಲ್ಲಿ ನನ್ನನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವ ದಿನ ದೂರ ಇಲ್ಲ, ನಾನು ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುವುದಿಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಪಶ್ಚಾತ್ತಾಪ ಪಡುತ್ತದೆ ಕಾದು ನೋಡಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ (pramod madhwaraj) ಭವಿಷ್ಯ ನುಡಿದಿದ್ದಾರೆ. ಅವರು ಶನಿವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರು.
undefined
ಬಿಜೆಪಿಯ ಶಿಸ್ತನ್ನು ಡಿಕೆಶಿ ಕಲಿಯಲಿ: ಕಾಂಗ್ರೆಸ್ ನ ಸಂಪ್ರದಾಯಕ್ಕೂ ಬಿಜೆಪಿ ಸಂಪ್ರದಾಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ, ಕಾಂಗ್ರೆಸ್ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ, ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು. ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ, ಬಿಜೆಪಿಯಲ್ಲಿ ಮಂತ್ರಿ, ಶಾಸಕ, ಸಂಸದರು ಕೂಡಾ ಕೆಳಗೆ ಕೂತುಕೊಳ್ಳುತ್ತಾರೆ, ಬಿಜೆಪಿಯ ಶಿಸ್ತು ಸಂಪ್ರದಾಯವನ್ನು ಡಿ.ಕೆ ಶಿವಕುಮಾರ್ ಕಲಿಯೋದು ಒಳ್ಳೆಯದು, ಅವರಿಗೆ ಇದು ನನ್ನ ಪುಕ್ಕಟೆ ಸಲಹೆ ಎಂದರು. ನನ್ನ ಪಕ್ಕ ವೇದಿಕೆಗಳಲ್ಲಿ ಕೂರುತ್ತಿದ್ದ ಪ್ರಮೋದ್ ಮಧ್ವರಾಜ್ ಈಗ, ಬಿಜೆಪಿಯಲ್ಲಿ ವೇದಿಕೆಯ ಎದುರು ಕೆಳಗೆ ಕುಳಿತುಕೊಳ್ಳುವಂತಾಗಿದೆ ಎಂಬ ಡಿಕೆಶಿ ಲೇವಡಿಗೆ ಅವರು ಉತ್ತರಿಸಿದರು.
ಹಿಜಾಬ್ ವಿವಾದ ಎದ್ದಿದ್ದ ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಅಮೋಘ ಸಾಧನೆ
ವೇದಿಕೆಗೆ ಜೋತು ಬೀಳುವವನಲ್ಲ: ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ, ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ, ಕಾರ್ಯಕರ್ತನೊಟ್ಟಿಗೆ ಕುಳಿತುಕೊಳ್ಳುತ್ತೇನೆ.ಇದರಲ್ಲಿ ನನಗೆ ಯಾವ ಮುಜುಗರ, ಬೇಸರ ಇಲ್ಲ.
ಕಾಂಗ್ರೆಸ್‌ಗೆ ಯಾರು ಬೇಕಾದರೂ ಬರಬಹುದು, ಹೋಗಬಹುದು ಬಿಜೆಪಿ ಹಾಗಲ್ಲ: ಪೂರ್ವ ನಿರ್ಧಾರ ಇಲ್ಲದೇ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ, ಸ್ಥಳೀಯ ಕಾರ್ಯಕರ್ತರ ವಿಶ್ವಾಸ ಪಡೆಯದೇ ಬಿಜೆಪಿ ಯಾರನ್ನು ಸೇರಿಸಿಕೊಳ್ಳುವುದಿಲ್ಲ ಆದರೆ ಕಾಂಗ್ರೆಸ್ ಗೆ ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಅನ್ನುವ ವ್ಯವಸ್ಥೆ ಇದೆ. ಬಿಜೆಪಿ ಕಾರ್ಯಕರ್ತರ ವಿಶ್ವಾಸ ಪಡೆದು ಸೇರ್ಪಡೆ ಪರ್ವ ಮುಂದುವರಿಯಲಿದೆ. ನನ್ನ ಬೆಂಬಲಿಗರಲ್ಲಿ ಯಾರಿಗೆಲ್ಲಾ ಬಿಜೆಪಿ ಸೇರ್ಪಡೆ ಆಸಕ್ತಿ ಇದೆ ಇನ್ನೂ ಕೇಳಿಲ್ಲ, ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ವಿರೋಧಿಗಳಾಗಿರುತ್ತಾರೆ. ಯಾರನ್ನು ಕೂಡಾ ಬಿಜೆಪಿ ಸೇರಲು ಬಲವಂತ ಮಾಡುವುದಿಲ್ಲ, ಸೇರ್ಪಡೆಗೂ ಮುನ್ನ ಕಾರ್ಯಕರ್ತರ ಷರತ್ತುಗಳನ್ನು ಕೇಳಬೇಕಾಗುತ್ತದೆ, ಹಾಗಾಗಿ ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಭೇಟಿಯಾಗಿದ್ದೇನೆ, ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ಕಾಂಗ್ರೆಸ್ ಕಾರ್ಯಕರ್ತರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಮುಂದೆ ನಡೆಯಲಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ವೇಳೆ ಸ್ಫೋಟ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ಹತೋಟಿಯಲ್ಲಿ ಹಿಡಿಯಲು ಹೈಕಮಾಂಡ್ ಎಷ್ಟರ ಮಟ್ಟಿಗೆ ಸಮರ್ಥವಾಗಿದೆ ಅನ್ನುವುದರ ಬಗ್ಗೆ ನನಗೆ ಸಂಶಯ ಇದೆ, ಮುಂದಿನ ಚುನಾವಣೆಗೂ ಪೂರ್ವವಾಗಿ ದೊಡ್ಡಮಟ್ಟದ ಸ್ಪೋಟ ಆಗುತ್ತದೆ, ಟಿಕೆಟ್ ಹಂಚಿಕೆಯ ಸಂದರ್ಭದಲ್ಲಂತೂ ದೊಡ್ಡ ಸ್ಫೋಟ ಆಗುತ್ತದೆ ಎಂಬುದು ನನ್ನ ಸಂಶಯ ಎಂದರು.
CRZ ವ್ಯಾಪ್ತಿಯ ಮರಳು ಮಾರುವಂತಿಲ್ಲ ಎನ್‌ಜಿಟಿ ಆದೇಶ
ನಾನು ಅಶಿಸ್ತಿನ ಪಕ್ಷದಿಂದ ಬಂದವನು: ನಾನು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇನೆ, ಈ ಬಗ್ಗೆ ಪಕ್ಷ ಮತ್ತು ಸಂಘ ಪರಿವಾರಕ್ಕೆ ಹೇಳಿದ್ದೇನೆ, ಬಿಜೆಪಿ ಬಹಳ ಶಿಸ್ತಿನ ಪಕ್ಷ, ಸಂಘಟನೆಯ ಬಗ್ಗೆ ಬಹಳಷ್ಟು ಒತ್ತು ಕೊಡುತ್ತಾರೆ. ನಾನು ಅಶಿಸ್ತಿನ ಪಕ್ಷದಿಂದ ಬಂದವನು, ಇಲ್ಲಿನ ಶಿಸ್ತನ್ನು ನೋಡುವಾಗ ಹೆಮ್ಮೆಯೂ ಆಗುತ್ತೆ ಸಂತೋಷನೂ ಆಗುತ್ತದೆ. ಕಾಂಗ್ರೆಸ್ಸಿಗೆ ಬಿಜೆಪಿಗೆ ಇರುವ ಸಂಘಟನಾತ್ಮಕ ವ್ಯತ್ಯಾಸದ ಅರಿವು ಈಗ ನನಗೆ ಆಗಿದೆ, ಕಾಂಗ್ರೆಸ್ ಸಂಘಟನೆಯ ಕಡೆಗೆ ಏನು ಗಮನ ಕೊಟ್ಟಿಲ್ಲ, ಬಿಜೆಪಿ ಆ ಕಡೆಗೆ ಗಮನ ಕೊಟ್ಟಿದೆ ಅನ್ನುವುದು ನನಗೆ ಅರಿವಾಗಿದೆ ಎಂದರು.