ಲೋಕಸಭಾ ಚುನಾವಣೆಗೂ ಮುನ್ನ ಭಾರೀ ಬದಲಾವಣೆ: ಆಪರೇಷನ್ ಕಮಲ ಮುನ್ಸೂಚನೆ ಕೊಟ್ಟ ನಿರಾಣಿ..!

By Girish GoudarFirst Published Oct 22, 2023, 1:30 AM IST
Highlights

ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ನಡೆದು ಆಪರೇಶನ್ ಹಸ್ತ ಆಗಲ್ಲ, ಬದಲಾಗಿ ಆಪರೇಶನ್ ಕಮಲ ಆಗುತ್ತೆ. ಕಾಂಗ್ರೆಸ್ಸಿಗರ ಹೇಳಿಕೆ ನೋಡಿದ್ರೆ ಈ ಸರ್ಕಾರ ಯಾವುದೇ ಸಮಯದಲ್ಲಿ ಹೋಗಬಹುದು, ಪಾರ್ಲಿಮೆಂಟ್ ಚುನಾವಣೆ ಒಳಗಾಗಿ ಬಹಳಷ್ಟು ಬದಲಾವಣೆ ಆಗೆ ಆಗುತ್ತೆ ಎಂದ ನಿರಾಣಿ 

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಅ.22):  ರಾಜ್ಯ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಭಾರೀ ಬದಲಾವಣೆಗಳು ನಡೆಯಲಿದ್ದು, ಈ ಮಧ್ಯೆ ರಾಜ್ಯದಲ್ಲಿ ಆಪರೇಶನ್ ಹಸ್ತ ಅಲ್ಲ ಬದಲಾಗಿ ಆಪರೇಶನ್ ಕಮಲ ನಡೆಯಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಶನಿವಾರ ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಟಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಮುರುಗೇಶ ನಿರಾಣಿ ಅವರು, ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ನಡೆಯಲಿದ್ದು, ರಾಜ್ಯದಲ್ಲಿ ಐದು ವರ್ಷ ಸರ್ಕಾರ ಇರಬೇಕು ಎನ್ನುವುದು ಬಿಜೆಪಿ ಇಚ್ಛೆಯಾಗಿದೆ. ಆದರೆ, ಅವರ ಹೇಳಿಕೆಗಳು ಐವರು ಡಿಸಿಎಂ ಅಂತಾರೆ, ಇಬ್ಬರು ಸಿಎಂ ಅಂತಾರೆ, ಹೀಗಾಗಿ ಯಾವುದೇ ಸಮಯದಲ್ಲಿ ಸರ್ಕಾರ ಹೋಗಬಹುದು. ಪಾರ್ಲಿಮೆಂಟ್ ಚುನಾವಣೆಗೂ ಮುನ್ನವೆ ಬಹಳಷ್ಟು ಬದಲಾವಣೆ ಆಗುತ್ತೆ, ಬದಲಾವಣೆ ಕಾಯ್ದು ನೋಡಿ, ಸಮಯ ಬಂದಾಗ ನಾನು ಹೇಳ್ತೇನೆ ಎಂದರು. 

ರಾಜ್ಯ ಸರ್ಕಾರದಿಂದ ಜನರ ನಂಬಿಕೆಗೆ ದ್ರೋಹ: ಶಾಸಕ ಸಿದ್ದು ಸವದಿ

ಇನ್ನು ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ನಡೆದು ಆಪರೇಶನ್ ಹಸ್ತ ಆಗಲ್ಲ, ಬದಲಾಗಿ ಆಪರೇಶನ್ ಕಮಲ ಆಗುತ್ತೆ ಎಂದರು. ಕಾಂಗ್ರೆಸ್ಸಿಗರ ಹೇಳಿಕೆ ನೋಡಿದ್ರೆ ಈ ಸರ್ಕಾರ ಯಾವುದೇ ಸಮಯದಲ್ಲಿ ಹೋಗಬಹುದು, ಪಾರ್ಲಿಮೆಂಟ್ ಚುನಾವಣೆ ಒಳಗಾಗಿ ಬಹಳಷ್ಟು ಬದಲಾವಣೆ ಆಗೆ ಆಗುತ್ತೆ ಎಂದು ನಿರಾಣಿ ಹೇಳಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು

ಇನ್ನು ಇದೇ ವೇಳೆ ಡಿಸಿಎಂ ಡಿಕೆಶಿ ಸಿಬಿಐ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಉಪ್ಪು ತಿಂದವರು ಯಾರೇ ಇದ್ದರೂ ನೀರು ಕುಡಿಯಲೇ ಬೇಕು, ಸಿಬಿಐ ತನಿಖೆಯಲ್ಲಿ ನಿರಪರಾಧಿ ಅಂತ ಬಂದ್ರೆ ಶಿಕ್ಷೆ ಆಗಲ್ಲ, ಅಪರಾಧಿ ಅಂತ ಬಂದ್ರೆ ಶಿಕ್ಷೆ ಅನುಭವಿಸಲೇಬೇಕು. ನ್ಯಾಯಾಲಯದ ತೀರ್ಪು ಯಾರೇ ಆಗಿದ್ರು ತಲೆಬಾಗಿ ಸ್ವೀಕರಿಸಬೇಕು ಎಂದು ನಿರಾಣಿ ಹೇಳಿದರು.

ಕಡಿಮೆಯಾಗುತ್ತಿರುವ ಸಿಎಂ ಸಿದ್ದರಾಮಯ್ಯ ವರ್ಚಸ್ಸು

ಇನ್ನು ಸರ್ಕಾರದಲ್ಲಿ ದಿನೇ ದಿನೇ ಸಿದ್ದರಾಮಯ್ಯ ವರ್ಚಸ್ಸು ಕಡಿಮೆಯಾಗ್ತಿರೋ ವಿಚಾರವಾಗಿ ಮಾತನಾಡಿ, ಮೊದಲ ಬಾರಿ ಸಿದ್ದರಾಮಯ್ಯ ಸಿಎಂ ಆದಾಗ ಇದ್ದಂತೆ, ಈಗ ಪ್ರತಿಶತ ೧೦ ರಷ್ಟು ಸಹ ಸಿಎಂ ಸಿದ್ದರಾಮಯ್ಯ ಪ್ರಭಾವ ಉಳಿದಿಲ್ಲ, ಇದಕ್ಕೆ ಅವರ ಪಕ್ಷದಲ್ಲಿ ಇರೋ ಒತ್ತಡ ಕಾರಣ ಇರಬಹುದು. ಇಲ್ಲವೆ ಉಚಿತ ಗ್ಯಾರಂಟಿಗಳಿಗೆ ದುಡ್ಡು ಹೊಂದಿಸಲು ಆಗದೇ ಇರಬಹುದು ಅಥವಾ ಅಭಿವೃದ್ಧಿ ಕೆಲಸ ಆಗ್ತಿಲ್ಲಾ ಅನ್ನೋ ಮನಸ್ಸಿನ ನೋವು ಇರಬಹುದು‌ ಎಂದರಲ್ಲದೆ, ಇದರ ಜೊತೆಗೆ ವಯಸ್ಸಿನ ಕಾರಣವೂ ಸಹ ಇರಬಹುದು. ಲೋಕಸಭಾ ಚುನಾವಣೆಗೂ ಮುನ್ನವೇ ಬದಲಾವಣೆ ಆಗಲಿವೆ. ನಾನು ಹೇಳುತ್ತೇನೆ, ಕಾದು ನೋಡಿ ಎಂದು ಮಾಜಿ ಸಚಿವ ನಿರಾಣಿ ಹೇಳಿದರು‌.

ಡಿಕೆಶಿ ಸಂಕಷ್ಟಕ್ಕೆ ಸಿಲುಕಿದರೆ ಸಿದ್ದರಾಮಯ್ಯ ಒಳಗೊಳಗೇ ಖುಷಿ ಪಡ್ತಾರೆ: ನಿರಾಣಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ತಾಂಡವವಾಡುತ್ತಿದೆ, ಕಾಂಗ್ರೆಸ್ಸೇತರ ಸರ್ಕಾರಗಳು ಬಂದಾಗಲೆಲ್ಲಾ ನಾಡಿನಲ್ಲಿ ಮಳೆ, ಬೆಳೆ, ಹೊಳೆ ಚೆನ್ನಾಗಿ ಸಮೃದ್ದಿ ಆಗಿವೆ. ನಾವು ತಿಳುವಳಿಕೆ ಬಂದ ಮೇಲೆ ನೋಡಲಾಗಿ, ಎಲ್ಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಬಂದಿವೆ. ಅದಕ್ಕೂ ಸಹ ಒಂದು ಕಾಲ ಅಂತ್ಯ ಅನ್ನೋದು ಬಂದಿದೆ. ಸಾಧ್ಯವಾದಷ್ಟು ಅದು ಬೇಗ ಅಂತ್ಯವಾಗಿ ಕರ್ನಾಟಕದಲ್ಲಿ ಬಿಜೆಪಿಯ ಸಮೃದ್ಧಿ ಕಾಲ ಬರಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಬದಲಾವಣೆಯ ಬಗ್ಗೆ ಸುಳಿವು ನೀಡಿದ ನಿರಾಣಿ ಅವರು ಸಿದ್ದರಾಮಯ್ಯ ಅಂತೇನಲ್ಲ, ಒಟ್ಟಿನಲ್ಲಿ ಕಾಂಗ್ರೆಸ್ ಕಾಲದಲ್ಲಿ ಬರಗಾಲ ಬರುತ್ತೇ ಎಂದ ಹೇಳಿದರು.

ಕಾಂಗ್ರೆಸ್ ಶಾಸಕರ ಮೇಲೆಯೇ ಡಿಕೆಶಿಗೆ ವಿಶ್ವಾಸ ಇಲ್ಲ...

ಕಾಂಗ್ರೆಸ್ ಶಾಸಕರು ಯಾವುದೇ ಹೇಳಿಕೆ ಕೊಡಬಾರದು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ,  ರಾಜ್ಯದಲ್ಲಿ ಅಸ್ಥಿತ್ವದಲ್ಲಿರೋ ಕಾಂಗ್ರೆಸ್ ಸರ್ಕಾರದ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಶಾಸಕರಿಗೆ, ಶಾಸಕರ ಮೇಲೆ ಡಿಕೆಶಿಗೆ ಯಾವುದೇ ವಿಶ್ವಾಸ ಉಳಿದಿಲ್ಲ, ಹೇಳಿಕೆ ಕೊಡಬಾರದು ಎಂದ್ರೆ, ಅದರಲ್ಲಿ ಏನೋ ಇರಬೇಕಲ್ಲ...? ಎಲ್ಲವೂ ಸರಿ ಇದ್ದಿದ್ರೆ ಹೀಗೆ ಹೇಳುವುದು ಬರಲ್ಲ, ಯಡಿಯೂರಪ್ಪ ಅವರು ಇದ್ದಾಗ ನಮಗೆ ಯಾರಿಗೂ ಆ ರೀತಿ ಹೇಳಿರಲಿಲ್ಲ, ನಮ್ಮ ಮೇಲೆ ಅವರಿಗೆ ಕಾನ್ಫಿಡೆನ್ಸ್ ಇತ್ತು, ಶಾಸಕರ ಮೇಲೆ ಕಾನ್ಫಿಡೆನ್ಸ್ ಇಲ್ಲ ಅಂತಾನೆ ಮಾತನಾಡಬೇಡಿ ಅಂತಾರೆ, ಕಾಂಗ್ರೆಸ್ ನಲ್ಲಿ ಅವರ ಮೇಲೆ(ಶಾಸಕರ) ಇವರಿಗೆ(ಡಿಕೆಶಿ) ವಿಶ್ವಾಸ ಇಲ್ಲ. ಇವರ ಮೇಲೆ ಅವರಿಗೆ ವಿಶ್ವಾಸ ಇಲ್ಲ ಎಂದು ನಿರಾಣಿ ಹೇಳಿದರು.

click me!