ಮಾಜಿ ಸಚಿವ ಸಿ.ಟಿ ರವಿಗೆ ಆಪ್ತನಿಂದಲೇ ಬಿಗ್‌ ಶಾಕ್..!

By Girish Goudar  |  First Published Oct 21, 2023, 8:45 PM IST

ಚಿಕ್ಕಮಗಳೂರು ನಗರಸಭೆಯ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್ ರನ್ನ ಅಮಾನತ್ತು ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಆದೇಶಿಸಿದ್ದಾರೆ. 18 ತಿಂಗಳ ಅಧಿಕಾರದ ಬಳಿಕ ಬೇರೆಯವರಿಗೆ ಅವಕಾಶ ನೀಡುವ ಸಲುವಾಗಿ, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಪಕ್ಷ ಸೂಚಿಸಿತ್ತು.‌ ಆದ್ರೆ, ವೇಣುಗೋಪಾಲ್ ಎರಡು ಬಾರಿ ರಾಜೀನಾಮೆ ನೀಡಿ ಹಿಂಪಡೆದಿದ್ದರು. ಇದು ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಕಾಲ ರಾಜೀನಾಮೆ ಹಿಂಪಡೆದು ಸ್ವಿಚ್ ಆಫ್ ಮಾಡಿಕೊಂಡು ನಗರದಿಂದ ಕಣ್ಮರೆಯಾಗಿದ್ದರು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.21):  ರಾಜೀನಾಮೆಯ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದ ಚಿಕ್ಕಮಗಳೂರು ನಗರ ಬಿಜೆಪಿ ನಗರಸಭೆ ಅಧ್ಯಕ್ಷನನ್ನು ಪಕ್ಷದಿಂದ ಅಮಾನತು ಮಾಡಿದೆ. ರಾಜೀನಾಮೆ ಕೊಟ್ಟು ವಾಪಸ್ ಪಡೆಯೋ ನಾಟಕ ಮಾಡ್ತಾ ನಗರದಿಂದಲೇ ಕಣ್ಮರೆಯಾಗ್ತಿದ್ದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ಗೆ ಬಿಜೆಪಿ ಪಾಠ ಕಲಿಸಿ, ಪಕ್ಷದಿಂದಲೇ ಅಮಾನತು ಮಾಡಿದೆ. 

Latest Videos

undefined

ಮಾಜಿ ಸಚಿವ ಸಿ.ಟಿ ರವಿಗೆ ಅಪ್ತನಿಂದಲೇ ಶಾಕ್: 

ಚಿಕ್ಕಮಗಳೂರು ನಗರಸಭೆಯ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್ ರನ್ನ ಅಮಾನತ್ತು ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಆದೇಶಿಸಿದ್ದಾರೆ. 18 ತಿಂಗಳ ಅಧಿಕಾರದ ಬಳಿಕ ಬೇರೆಯವರಿಗೆ ಅವಕಾಶ ನೀಡುವ ಸಲುವಾಗಿ, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಪಕ್ಷ ಸೂಚಿಸಿತ್ತು.‌ ಆದ್ರೆ, ವೇಣುಗೋಪಾಲ್ ಎರಡು ಬಾರಿ ರಾಜೀನಾಮೆ ನೀಡಿ ಹಿಂಪಡೆದಿದ್ದರು. ಇದು ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಕಾಲ ರಾಜೀನಾಮೆ ಹಿಂಪಡೆದು ಸ್ವಿಚ್ ಆಫ್ ಮಾಡಿಕೊಂಡು ನಗರದಿಂದ ಕಣ್ಮರೆಯಾಗಿದ್ದರು. ಪಕ್ಷದ ಆಂತರಿಕ ತೀರ್ಮಾನವನ್ನ ಉಲ್ಲಂಘಿಸಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ ಕಾರಣ ಪಕ್ಷದಿಂದಲೇ ಅಮಾನತು ಮಾಡಿದ್ದಾರೆ.

Chikkamagaluru: ಮಹಿಷ ದಸರಾ ಆಚರಣೆಗೆ ಯತ್ನ: ಹಲವರ ಬಂಧನ, ಸರ್ಕಾರದ ವಿರುದ್ಧ ಪ್ರತಿಭಟನೆ

18-12 ತಿಂಗಳಿಗೆ ನಗರಸಭೆ ಅಧ್ಯಕ್ಷ ಸ್ಥಾನವನ್ನ ಬಿಜೆಪಿ ವಿಭಜಿಸಿತ್ತು. ಮೊದಲ ಅವಧಿಗೆ 18 ತಿಂಗಳು, ಎರಡನೇ ಅವಧಿಗೆ 12 ತಿಂಗಳು. ಆದರೆ,ರಾಜೀನಾಮೆ ನೀಡದೆ ಪಕ್ಷ ವಿರೋಧಿ ಚಟುವಟಕೆ ನಡೆಸಿದ ಕಾರಣ ಅಮಾನತು ಮಾಡಿದ್ದಾರೆ. ಈ ವೇಳೆ ಬಿಜೆಪಿಯ 17 ಸದಸ್ಯರು ಅವಿಶ್ವಾಸ ಮಂಡನೆಗೂ ಮುಂದಾಗಿದ್ರು. ಮಾಜಿ ಶಾಸಕ ಸಿ.ಟಿ.ರವಿ ಕೂಡ ಅವರ ಮನವಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ.ಅವರ ಬೆನ್ನ ಹಿಂದೆ ಯಾರಿದ್ದಾರೆ ಎಂಬುದು ಸಹ ತಿಳಿಯುತ್ತಿಲ್ಲ ಅಂತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ.

ನನ್ನ ಅಮಾನತು ಮಾಡಕ್ಕೆ ಇವರ್ಯಾರು: ವರಸಿದ್ದ ವೇಣುಗೋಪಾಲ್ 

ಈ ಅಮಾನತು ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ನನಗೆ ಅಮಾನತ್ತು ಮಾಡುವ ಮೊದಲು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಅವರನ್ನು ಅಮಾನತ್ತು ಮಾಡಬೇಕು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಸೋಲಿಸಿದ್ದು ಜಿಲ್ಲಾಧ್ಯಕ್ಷ. ಅವರು ಪಕ್ಷದ ಕೆಲಸ ಹಾಗೂ ಸಂಘಟನೆ ಮಾಡಿದ್ದರೆ ಯಾಕೆ ನಮ್ಮ ಅಭ್ಯರ್ಥಿಗಳು ಸೋಲುತ್ತಿದ್ದರು. ಪಕ್ಷದ ಸಂಘಟನೆ ಮಾಡಲು ಬೇರೆಯವರಿಗೆ ಅವಕಾಶ ಮಾಡಿ ಕೊಡಿ. ಪಕ್ಷದಲ್ಲಿ ಯಾವುದೇ ಜಾತಿಯನ್ನು ತರಬೇಡಿ. ನಾನು 32 ವರ್ಷಗಳ ಕಾಲ ಪಕ್ಷಕ್ಕಾಗಿ ಧ್ವಜಗಳನ್ನು ಕಟ್ಟಿದ್ದೇನೆ. ಎರಡೂವರೆ ವರ್ಷ ಅಧಿಕಾರ ಅವಧಿಯನ್ನು ಪೂರ್ಣ ಕೊಡಿ ಎಂದು ನಾನು ಮೊದಲೇ ಕೇಳಿ ಕೊಂಡಿದ್ದೆ. ಅಧಿಕಾರ ಹಂಚಿಕೆ ಬಗ್ಗೆ ನನ್ನ ಬಳಿ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ನನ್ನ ಬೆನ್ನ ಹಿಂದೆ ಯಾರೂ ಇಲ್ಲ. ಸಾರ್ವಜನಿಕರು ಇದ್ದಾರೆ ನನ್ನ ಕೆಲಸ ನಾನು ಪ್ರಾಮಾಣಿಕವಾಗಿ ಮಾಡಿಕೊಂಡು ಮುಂದೆ ಹೋಗುತ್ತೇನೆ. ಸಿ.ಡಿ.ಎ. ಅಧ್ಯಕ್ಷ ಆನಂದ್ ಮೂರುವರೆ ವರ್ಷ ಅಧ್ಯಕ್ಷ ನಾಗಿದ್ದ. ಆಗ ಇವರ ಗಂಡಸುತನ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.  ತಮ್ಮಯ್ಯನಿಗೆ ಸಿಡಿಎ ಅಧ್ಯಕ್ಷ ಸ್ಥಾನ ಕೊಟ್ಟಿದ್ರೆ ಇವತ್ತು ಸಿ.ಟಿ.ರವಿ ಗೆಲ್ತಿದ್ರು. ಸಿ.ಟಿ.ರವಿ ಸೋಲಿಗೆ ಕಾರಣ ಯಾರು. ಈಗ ಅಮಾನತು ಮಾಡ್ತಾರೆ. ನನ್ನ ಅಮಾನತು ಮಾಡೋ ಇವರು ಎಲ್ಲಿದ್ರು. ನನ್ನ ಅಮಾನತು ಮಾಡಕ್ಕೆ ಇವರ್ಯಾರು ಎಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ. 

ಒಟ್ಟಾರೆ, ನಗರಸಭೆ ಅಧ್ಯಕ್ಷರ ರಾಜೀನಾಮೆ ಜಟಾಪಟಿ ಇನ್ನೂ ಕೂಡ ಮುಂದುವರೆದಿದ್ದು, ಪಕ್ಷದ ಮುಜುಗರ ತಂದ ಹಿನ್ನೆಲೆ ಈಗಾಗಲೇ ಅವರನ್ನು ಪಕ್ಷದಿಂದಲೇ ಅಮಾನತ್ತು ಮಾಡಲಾಗಿದೆ. ಸದ್ಯಕ್ಕೆ ಬಿಜೆಪಿ ನಗರಸಭಾ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸೇಫ್‌ ಝೋನಿನಲ್ಲಿರುವ ವರಸಿದ್ದಿ ವೇಣುಗೋಪಾಲ್ ಮುಂದಿನ ದಿನಗಳಲ್ಲಿ ಅವರ ನಡೆ ಯಾವ ರೀತಿ ಇರುತ್ತದೆ. ಯಾವ ಕಡೆ ಸಾಗುತ್ತಾರೆ ಅನ್ನೋ ಕುತೂಹಲವನ್ನ ಕಾದು ನೋಡಬೇಕಿದೆ. 

click me!