ನನ್ನ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಲೇ ನನ್ನ ಮೌನವೂ ವೀಕ್ನೆಸ್ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೊಳಿಗೆ ಅವರಿಗೆ ಸಚಿವ ಲಕ್ಷ್ಮೀ ಹೆಬ್ಬಾಳಕರ ತಿರುಗೇಟು ನೀಡಿದರು.
ಬೆಳಗಾವಿ (ಅ.21): ನನ್ನ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಲೇ ನನ್ನ ಮೌನವೂ ವೀಕ್ನೆಸ್ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೊಳಿಗೆ ಅವರಿಗೆ ಸಚಿವ ಲಕ್ಷ್ಮೀ ಹೆಬ್ಬಾಳಕರ ತಿರುಗೇಟು ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಣ್ಣ ಸಮಸ್ಯೆ ಕೂಡ ಇಲ್ಲ. ನನ್ನ ಮೌನವೂ ವೀಕ್ನೆಸ್ ಅಲ್ಲಾ ಎಂದರು.
ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಮೈಸೂರಿಗೆ ಹೋಗಲು ಪ್ಲಾನ್ ಮಾಡಲಾಗಿತ್ತು. ಸತೀಶ್ ಜಾರಕಿಹೊಳಿ ನನ್ನನ್ನು ಕರೆದಿದ್ದರು. ನನ್ನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ಹಿನ್ನೆಲೆಯಲ್ಲಿ ನಾನು ಹೋಗಲಿಲ್ಲ. ಹೈಕಮಾಂಡ್ ಯಾಕೆ ತಡೆಯಿತು ಎಂಬುವುದರ ಕುರಿತು ಹಾಗೂ ನೆಕ್ಸ್ಟ್ ಎಪಿಸೋಡ್ ಸತೀಶ್ ಅವರನ್ನೇ ಕೇಳಿ ಎಂದರು. ಡಿಸಿಎಂ ಡಿಕೆಶಿ ಭೇಟಿಗೆ ಶಾಸಕರು, ಜಿಲ್ಲಾಧ್ಯಕ್ಷರು ಬಾರದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರ ಪ್ರವಾಸ ಮೊದಲು ಗೊಂದಲದಲ್ಲಿತ್ತು. ಬಳಿಕ ಅವರು ಬಂದಂತ ಸಮಯದಲ್ಲಿ ಯಾರಾದರೂ ಬಂದು ಸ್ವಾಗತ ಮಾಡಬೇಕಿತ್ತು ಎಂದರು.
ಸಂಸದ ರಾಜಾ ಅಮರೇಶ್ವರ ಜನಪರವಾದ ರಾಜಕಾರಣಿ: ಸಚಿವ ಬೋಸರಾಜು ಬಣ್ಣನೆ
ವಿಮಾನದಲ್ಲಿ ಒಟ್ಟಿಗೆ ಬಂದ ಸತೀಶ, ಹೆಬ್ಬಾಳಕರ: ರಾಜ್ಯ ರಾಜಕಾರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಸಚಿವ ಸತೀಶ ಜಾರಕಿಹೊಳಿ ಇವರಿಬ್ಬರ ನಡುವಿನ ಶೀತಲ ಸಮರ ಸದಾ ಸುದ್ದಿಯಲ್ಲಿದೆ. ಈ ಮಧ್ಯೆ ಇಬ್ಬರು ಸಚಿವರು ಒಂದೇ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಿದರು. ಬೆಂಗಳೂರಿನಿಂದ ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಸಚಿವ ಸತೀಶ ಜಾರಕಿಹೊಳಿ ಇಬ್ಬರು ಒಂದೇ ವಿಮಾನದಲ್ಲಿ ಬಂದಿಳಿದರು. ಜತೆಗೆ ಒಬ್ಬರ ನಂತ ಮತ್ತೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವಿಮಾನ ನಿಲ್ದಾಣದ ಲಾಂಜ್‌ನಲ್ಲೇ ಸಚಿವರಾದ ಸತೀಶ್- ಹೆಬ್ಬಾಳ್ಕರ್ ಭೇಟಿಯಾಗಿ ಮಾತುಕತೆ ಕೂಡ ನಡೆಸಿದರು. ಉಭಯ ನಾಯಕರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸಾಥ್ ನೀಡಿದರು.