ಬಿ.ವೈ. ವಿಜಯೇಂದ್ರರಿಗೆ ಬಲವನ್ನ ಕೊಡಲು ಈ ಸಭೆ ನಡೆಯುತ್ತಿದೆ. ಈಗಾಗಲೇ ಆರು ಸಭೆ ನಡೆಸಿದ್ದೇವೆ, ಇದು ಏಳನೇ ಸಭೆಯಾಗಿದೆ. 40ಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗಿಯಾಗುತ್ತೇವೆ. ಬಿಜೆಪಿ ಸದೃಢ ಆಗಬೇಕು ಹೀಗಾಗಿ ಈ ಸಭೆ ನಡೆಯುತ್ತಿದೆ ಎಂದು ತಿಳಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ(ಡಿ.14): ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬೆಂಬಲಿಗರ ಸಭೆ ಇಂದು(ಶನಿವಾರ) ನಡೆದಿದೆ. ಬಿಜೆಪಿ ನಾಯಕರ ಸಭೆ ತೀವ್ರ ಕುತೂಹಲ ಕೆರಳಿಸಿದೆ. ದಾವಣಗೆರೆ ನಗರದ ಸಾಯಿ ಹೋಟೆಲ್‌ನಲ್ಲಿ ಸಭೆ ನಡೆದಿದ್ದು, ಬಿ.ವೈ. ವಿಜಯೇಂದ್ರ ಅವರ ಬೆಂಬಲಿಗರು, ರಾಜ್ಯದ ಬಿಜೆಪಿ ಶಾಸಕರು ಭಾಗಿಯಾಗಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ ಸಭೆ ನಡೆಯಲಿದೆ.
ಬಿ.ವೈ. ವಿಜಯೇಂದ್ರ ಕೈ ಬಲಪಡಿಸಬೇಕು ಮಧ್ಯ ಕರ್ನಾಟಕದಲ್ಲಿ ಒಂದು ಸಮಾವೇಶ ನಡೆಸಬೇಕು. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಉಚ್ಚಾಟಿಸಲು ಹೈಕಮಾಂಡ್‌ಗೆ ಒತ್ತಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿ ಭಿನ್ನಮತ ಹುಟ್ಟಿಹಾಕಿದ್ದೇ ರೇಣುಕಾಚಾರ್ಯ ಆಂಡ್ ಟೀಮ್: ಶೋಷಿತ
ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವೈ, ಸಂಪಗಿ, ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣ್ ಕುಮಾರ್, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮುರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು ಭಾಗಿಯಾಗಿದ್ದಾರೆ.
undefined
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಬಿ.ವೈ. ವಿಜಯೇಂದ್ರರಿಗೆ ಬಲವನ್ನ ಕೊಡಲು ಈ ಸಭೆ ನಡೆಯುತ್ತಿದೆ. ಈಗಾಗಲೇ ಆರು ಸಭೆ ನಡೆಸಿದ್ದೇವೆ, ಇದು ಏಳನೇ ಸಭೆಯಾಗಿದೆ. 40ಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗಿಯಾಗುತ್ತೇವೆ. ಬಿಜೆಪಿ ಸದೃಢ ಆಗಬೇಕು ಹೀಗಾಗಿ ಈ ಸಭೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ವಿಜಯೇಂದ್ರ ಅಧ್ಯಕ್ಷ ಆಗಿ ಒಂದು ವರ್ಷ ಆಯ್ತು, ಅವರ ನೇತೃತ್ವದಲ್ಲಿ 17 ಎಂಪಿ ಸೀಟುಗಳನ್ನ ಗೆದ್ದಿದ್ದೇವೆ. ಮುಂದೆ ಪಕ್ಷವನ್ನ ಬಲಪಡಿಸಲು ಮಾಜಿ ಶಾಸಕರು ನಿರ್ಣಯಿಸಿ ಈ ಸಭೆ ನಡೆಸಿದ್ದೇವೆ. ನಾಳೆ ದುಗ್ಗಮ್ಮನ ದರ್ಶನ ಪಡೆದು ದೇವಸ್ಥಾನ ದರ್ಶನ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮುಖ್ಯ ಸಭೆ ನಡೆಸುತ್ತೇವೆ. ಬಳಿಕ ನಮ್ಮ ನಿರ್ಣಯವನ್ನ ತಿಳಿಸುತ್ತೇವೆ ಎಂದು ಎಂ.ಪಿ. ರೇಣುಕಾಚಾರ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಯಾರ ಉಚ್ಚಾಟನೆ ಮಾಡುವಂತೆ ಒತ್ತಾಯಿಸಲು ಈ ಸಭೆ ನಡೆಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಎಫ್ ಐಆರ್ ವಿಚಾರ, ಕಾಂಗ್ರೆಸ್ ಸರ್ಕಾರ ಅವರ ದುರಾಡಳಿತ ಮುಚ್ಚಿ ಹಾಕಿಕೊಳ್ಳಲು ಕೋವಿಡ್ ವಿಚಾರ ತೆಗೆದಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಪೊಲೀಸರು ಜಯಮೃತ್ಯುಂಜಯ ಶ್ರೀಗಳನ್ನ ಮುಗಿಸಲು ಪ್ಲ್ಯಾನ್ ಮಾಡಿದ್ರು: ರೇಣುಕಾಚಾರ್ಯ ಸ್ಫೋಟಕ ಹೇಳಿಕೆ
ದಾವಣಗೆರೆ: ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಹೋರಾಟಗಾರರ ಮೇಲೆ ಗೋಲಿ ಬಾರ್ ಮಾಡಲು ಸಂಚು ಮಾಡಿದ್ದರು. ಪೊಲೀಸರು ಜಯ ಮೃತ್ಯುಂಜಯ ಸ್ವಾಮೀಜಿಗಳನ್ನ ಮುಗಿಸಲು ಪ್ಲ್ಯಾನ್ ಮಾಡಿದ್ರು. ಸ್ವಾಮೀಜಿ ಮುಗಿಸಿದ್ರೆ ಹೋರಾಟ ನಿಲ್ಲುತ್ತೆ ಅಂತ ಗೋಲಿ ಬಾರ್ ಮಾಡಲು ಪ್ಲ್ಯಾನ್ ಮಾಡಿದ್ರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ಚನ್ನಮ್ಮ ವಂಶಸ್ಥರ ಮೇಲಿನ ಲಾಠಿ ಚಾರ್ಜ್ ಖಂಡಿಸಬೇಕು. ಇಲ್ಲವಾದರೆ ನಮಗೂ ಕೂಡ ಉಳಿಗಾಲವಿಲ್ಲದಂತಾಗುತ್ತದೆ. ನಾವು ಪಂಚಮಸಾಲಿ ಸಮುದಾಯದ ಜೊತೆ ಗಟ್ಟಿಯಾಗಿದ್ದೇವೆ. ಸಮುದಾಯ ಮೇಲಿನ ದಾಳಿಯನ್ನ ಎಲ್ಲ ಮಠಾಧೀಶರು ಖಂಡಿಸಬೇಕು ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ: ಹೋರಾಟ ಅತಿರೇಕವಾಗಬಾರದು, ಪರೋಕ್ಷವಾಗಿ ಕೂಡಲ
ಪಂಚಮಸಾಲಿ ಸಮುದಾಯದವರು ಮೀಸಲಾತಿ ಅವರ ಹಕ್ಕನ್ನ ಕೇಳುತ್ತಿದ್ದಾರೆ. ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಹಗುರವಾಗಿ ಮಾತನಾಡಿದ್ದಾರೆ. ಪರಮೇಶ್ವರ್ ಅವರನ್ನ ಸಂಪುಟದಿಂದ ವಜಾ ಮಾಡಬೇಕು. ಲಾಠಿ ಚಾರ್ಜ್ ಮಾಡುವ ಬದಲು ಮುತ್ತು ಕೊಡಬೇಕಾ ಅಂತ ಕೇಳ್ತಾರೆ. ಅವರು ಮುತ್ತು ಕೊಡು ಅಂತ ಕೇಳಿದ್ದರಾ?. ಹೋರಾಟಗಾರರು ಇರುವಲ್ಲಿಗೆ ಹೋಗಿ ಅವರ ಮನವಿಯನ್ನ ಕೇಳಬೇಕಿತ್ತು ಎಂದು ಕಿಡಿ ಕಾರಿದ್ದಾರೆ.
ಆರ್ ಎಸ್ ಎಸ್ ನವರು ಹೋರಾಟದಲ್ಲಿ ಕಲ್ಲು ತೂರಿದ್ದಾರೆ ಎಂಬ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇಣುಕಾಚಾರ್ಯ ಅವರು, ಹೋರಾಟ ಹತ್ತಿಕ್ಕಲು ಅವರೇ ಕಲ್ಲು ತೂರಿರಬಹುದು. ಅಧಿಕಾರದ ಪಿತ್ತ ನೆತ್ತಿಗೇರಿ ಈ ರೀತಿ ಮಾತನಾಡುತಿದ್ದಾರೆ. ಕಾಶಪ್ಪನವರ ಬಾರಕೋಲು ಹಿಡಿದು ಪಾದಯಾತ್ರೆ ಮಾಡಿದ್ರಿ. ಬಾರಕೋಲು ತೆಗಿಲೆ ಇಲ್ಲ ಸೊಂಟಕ್ಕೆ ಸುತ್ತುಕೊಂಡಿದ್ರು ಎಂದು ಲೇವಡಿ ಮಾಡಿದ್ದಾರೆ.