ಶಾಸಕ ಯತ್ನಾಳ್, ಮಾಜಿ ಸಚಿವ ರೇಣುಕಾಚಾರ್ಯ ಒಂದೇ ನಾಣ್ಯದ ಎರಡು ಮುಖಗಳು. ಪರಸ್ಪರ ಕಿತ್ತಾಡುವುದನ್ನು ಬಿಟ್ಟು ಇಬ್ಬರೂ ಒಂದಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದ ಮಾಜಿ ಸಂಸದ ಎಸ್.ಮುನಿಸ್ವಾಮಿ
ಮುಳಬಾಗಿಲು(ಡಿ.14): ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಬಣಗಳು ಇಲ್ಲ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದಲ್ಲಿ ಹನುಮ ಜಯಂತಿ ಪ್ರಯುಕ್ತ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಯತ್ನಾಳ್, ಮಾಜಿ ಸಚಿವ ರೇಣುಕಾಚಾರ್ಯ ಒಂದೇ ನಾಣ್ಯದ ಎರಡು ಮುಖಗಳು. ಪರಸ್ಪರ ಕಿತ್ತಾಡುವುದನ್ನು ಬಿಟ್ಟು ಇಬ್ಬರೂ ಒಂದಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಕೆಳಗಿಳಿಯಲಿದ್ದಾರೆ.
ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ
ಯತ್ನಾಳ್ ಮತ್ತು ರೇಣುಕಾಚಾರ್ಯ ಕಿತ್ತಾಡುವುದು ಬಿಟ್ಟು ಪಕ್ಷ ಸಂಘಟನೆ ಕಡೆ ಹೆಚ್ಚಿನ ಗಮನ ನೀಡಬೇಕು. ಕಾಂಗ್ರೆಸ್ ಸರ್ಕಾರ ಹಲವಾರು ಹಗರಣಗಳಿಂದ ಕೂಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಜನತೆ ಉಗಿಯುತ್ತಿದ್ದು ಶೀಘ್ರದಲ್ಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆಂದು ಭವಿಷ್ಯ ನುಡಿದರು.
undefined
ಬಳ್ಳಾರಿಯಲ್ಲಿ ಸರಣಿ ಬಾಣಂತಿ ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದು ಸಿಬ್ಬಂದಿ ಕೊರತೆಯನ್ನು ನೀಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಸ್ಥಾನಗಳಿಸಲು ಡಿ.ಕೆ.ಶಿವಕುಮಾರ್ ಸೇರಿದಂತೆ ೩೬ ಜನ ಪೈಪೋಟಿ ನಡೆಸುತ್ತಿದ್ದು ಕಾಂಗ್ರೆಸ್‌ಗೆ ಈಗ ಒಂದು ಮನೆ ೩೬ ಬಾಗಿಲು ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಹೆಚ್ಚಿನ ಪರಿಹಾರ ನೀಡಲಿ
ಮುರಡೇಶ್ವರ ಕಡಲ ತೀರದಲ್ಲಿ ತಾಲೂಕು ೪ ವಿದ್ಯಾರ್ಥಿನೀಯರು ಮೃತಪಟ್ಟಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದಕ್ಕೆ ಮುಂಚಿತವಾಗಿಯೆ ಸಿದ್ದರಾಮಯ್ಯ ನೊಂದ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ವಕ್ಭ್ ಸಚಿವ ಜಮೀರ್ ಅಹಮದ್ ಮತ್ತು ಕೋಲಾರ ಡಿಸಿ ಅಕ್ರಂಪಾಷ ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಹಿಂದೂಗಳು ಸಹ ಬುದ್ದಿ ಕಲಿಯಬೇಕೆಂದು ಮನವಿ ಮಾಡಿದರು.
ಆನೆ ಸಾಯಿಸಲು ಅನುಮತಿ ಕೋರಿದ ಶಾಸಕ: ಬೇಸರ ವ್ಯಕ್ತಪಡಿಸಿದ ಸಚಿವ ಈಶ್ವರ್ ಖಂಡ್ರೆ
ಪಂಚಮಸಾಲಿ ಧರಣಿ ವೇಳೆ ಪೋಲೀಸರು ಏಕಾಏಕಿ ಲಾಠಿ ಚಾರ್ಜ್ ಮಾಡಿರುವು ಸರಿಯಲ್ಲ ಉಪಚುನಾವಣೆಯ ೩ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವ ಹುಮ್ಮಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೀಗುತ್ತಿದ್ದಾರೆ ಎಂದು ಲೇವಡಿ ಮಾಡಿದರಲ್ಲದೆ ಪಂಚಮಸಾಲಿ ಸಮುದಾಯದ ಮೇಲೆ ಹಲ್ಲೆಯನ್ನು ಖಂಡಿಸಿದರು.
ಮುಳಬಾಗಿಲು ಬಿಜೆಪಿ ಅಧ್ಯಕ್ಷ ತೊಂಡಹಳ್ಳಿ ಸುರೇಶ್‌ರಾಜು, ನಗರಾಧ್ಯಕ್ಷ ಕಾಪರ್ತಿ ಅಮರ್, ಶ್ರೀನಿವಾಸಪುರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್, ದೇವಾಲಯದ ಅಧ್ಯಕ್ಷ ಟಿ.ಹೆಚ್.ತೇಜೋರಮಣ, ಕಾರ್ಯದರ್ಶಿ ಮೈಕ್ ಶಂಕರ್, ಉಪಾಧ್ಯಕ್ಷ ನಂಗಲಿ ವಿಶ್ವನಾಥ್‌ರೆಡ್ಡಿ, ರೈತಮೋರ್ಚಾ ಅಧ್ಯಕ್ಷ ಉತ್ತನೂರು ಲಕ್ಷ್ಮಿನಾರಾಯಣಶೆಟ್ಟಿ, ಓಬಿಸಿ ಅಧ್ಯಕ್ಷ ಎಂ.ಪಿ.ಎಸ್ ಮಂಜುನಾಥ್ ಇದ್ದರು.