ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯಬೇಡಿ, ಅದರಿಂದ ನಿಮಗೇ ಆಪತ್ತು: ಸಿಎಂ ಸಿದ್ದು ವಿರುದ್ಧ ರೇಣು ವಾಗ್ದಾಳಿ

By Girish Goudar  |  First Published Aug 27, 2024, 5:28 PM IST

ಮಹರ್ಷಿ ವಾಲ್ಮೀಕಿ ಅವರಿಗೆ ನೀವು ಮೋಸ ಮಾಡಿದ್ದಿರಿ. ವಾಲ್ಮೀಕಿ ನಿಗಮದ ಹಗರಣದಲ್ಲಿ ಏನು ಮಾಡಿದ್ದೀರಿ?. ದದ್ದಲ್‌ ಮತ್ತು ನಾಗೇಂದ್ರ ಮೇಲೆ ಏನ ಕ್ರಮ ಆಗಿದೆ..?. ನಾವು ನಿಮ್ಮ ಸರ್ಕಾರ ಬಿಳಿಸುವ ಪ್ರಯತ್ನ ಮಾಡುತ್ತಿಲ್ಲ. ನಿಮ್ಮಲ್ಲಿ ಬಾಹ್ಯ ಬೆಂಬಲ ನೀಡಿ ಆಂತರಿಕವಾಗಿ ಸಿಎಂ ಆಗಲು ಪ್ರಯತ್ನ ನಡೆದಿದೆ ಎಂದ ರೇಣುಕಾಚಾರ್ಯ 


ದಾವಣಗೆರೆ(ಆ.27): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷ ಆಯಿತು. ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಸುಮ್ಮನೆ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯಬೇಡಿ. ಅದರಿಂದ ನಿಮಗೆ ಆಪತ್ತು ಎಂದು ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಮಹರ್ಷಿ ವಾಲ್ಮೀಕಿ ಅವರಿಗೆ ನೀವು ಮೋಸ ಮಾಡಿದ್ದಿರಿ. ವಾಲ್ಮೀಕಿ ನಿಗಮದ ಹಗರಣದಲ್ಲಿ ಏನು ಮಾಡಿದ್ದೀರಿ?. ದದ್ದಲ್‌ ಮತ್ತು ನಾಗೇಂದ್ರ ಮೇಲೆ ಏನ ಕ್ರಮ ಆಗಿದೆ..?. ನಾವು ನಿಮ್ಮ ಸರ್ಕಾರ ಬಿಳಿಸುವ ಪ್ರಯತ್ನ ಮಾಡುತ್ತಿಲ್ಲ. ನಿಮ್ಮಲ್ಲಿ ಬಾಹ್ಯ ಬೆಂಬಲ ನೀಡಿ ಆಂತರಿಕವಾಗಿ ಸಿಎಂ ಆಗಲು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. 

Tap to resize

Latest Videos

undefined

ನಮ್ಮೊಳಗೆ ಭಿನ್ನಭಿಪ್ರಾಯ ಬೇಡ: ಯತ್ನಾಳ್‌, ರಮೇಶ್‌ಗೆ ರೇಣುಕಾಚಾರ್ಯ ಮನವಿ

ರಾಜ್ಯದಲ್ಲಿ ಸರ್ಕಾರ ಅಸ್ತಿರಗೊಂಡಿದೆ, ಕೆಲವೇ ದಿನಗಳಲ್ಲಿ ಪಕ್ಕಾ ಈ ಸರ್ಕಾರ ಬೀಳಲಿದೆ. ಮುಡಾ ಮತ್ತು ವಾಲ್ಮೀಕಿ ಹಗರಣ ವಿಷಯಾಂತರ ಮಾಡಲು ಶಾಸಕ ಗಾಣಿಗ ರವಿಗೆ ಸೂಚನೆ ನೀಡಲಾಗಿದೆ. ಹೈಕಮಾಂಡ್ ನಿಂದ ಸುಪಾರಿ ನೀಡಿ ವಿಷಯಾಂತರ ಮಾಡಲು ಹೇಳಿದ್ದಾರೆ. ಯಾವ ಬಿಜೆಪಿ ನಾಯಕ ನಿಮಗೆ ಮಾತನಾಡಿದ್ದಾರೆ ಆ ದಾಖಲೆ ಬಿಡುಗಡೆ ಮಾಡಿ. 100 ಕೋಟಿ ಆಫರ್ ನೀಡಿದ್ದ ಕುರಿತು ದಾಖಲೆ ಬಿಡುಗಡೆ ಮಾಡಿ. ನಿಮ್ಮ ಇಡಿ ಐಟಿ ಗೆ ದೂರು ಕೊಡಿ, ನಾಟಕ ಮಾಡುವದನ್ನು ಬಿಡಿ. ನಿಮಗೆ ತಾಕತ್ತಿದ್ದರೆ ದೂರು ನೀಡಿ ಬಂಧಿಸಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. 

ಜೈಲಿನಲ್ಲಿ ದರ್ಶನ್ ಗೆ ರಾಜಾತಿತ್ಯ ವಿಚಾರದ ಬಗ್ಗೆ ಎಂ. ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ. ದರ್ಶನ್ ಹೆಸರ ಹೇಳದೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ. ರಾಜ್ಯದಲ್ಲಿ ಜನ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಸರ್ಕಾರ ತನ್ನಿಂದ ತಾನೇ ಪತನವಾಗಲಿದೆ ಎಂದು ಹೇಳಿದ್ದಾರೆ. 

click me!