ಸಿಎಂ ಸಿದ್ದರಾಮಯ್ಯರನ್ನ ಕಂಡ್ರೆ ಬಿಜೆಪಿಯವರಿಗೆ ಭಯ : ಶಾಸಕ ಪ್ರದೀಪ್ ಈಶ್ವರ್

By Kannadaprabha News  |  First Published Aug 27, 2024, 12:07 PM IST

 ಸಿದ್ದರಾಮಯ್ಯ ನವರೇ ನಮ್ಮ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಕಂಡ್ರೆ ಬಿಜೆಪಿಯವರಿಗೆ ಭಯ. ಅಹಿಂದ ನಾಯಕ ಸಿದ್ದರಾಮಯ್ಯರನ್ನ ಸಹಿಸುಕೊಳ್ಳುವ ಶಕ್ತಿ‌ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ‌ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರವರಿಗೆ ಇಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.


ಚಿಕ್ಕಬಳ್ಳಾಪುರ (ಆ.27) :  ಸಿದ್ದರಾಮಯ್ಯ ನವರೇ ನಮ್ಮ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಕಂಡ್ರೆ ಬಿಜೆಪಿಯವರಿಗೆ ಭಯ. ಅಹಿಂದ ನಾಯಕ ಸಿದ್ದರಾಮಯ್ಯರನ್ನ ಸಹಿಸುಕೊಳ್ಳುವ ಶಕ್ತಿ‌ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ‌ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರವರಿಗೆ ಇಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಗರದ ಮಿನಿ ವಿಧಾನ ಸೌಧದ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನವರನ್ನು ಮುಖ್ಯಮಂತ್ರಿ ಆಗಿ ನಾವು ಉಳಿಸಿಕೊಳ್ತೇವೆ. ಸಿದ್ದರಾಮಯ್ಯ ನವರನ್ನ ಬಿಜೆಪಿಯವರು ಏನೂ ಮಾಡಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್‌ಗೇ ಅಧ್ಯಕ್ಷ ಸ್ಥಾನ.

Tap to resize

Latest Videos

'ನೂರು ಜನ್ಮ ಎತ್ತಿ ಬಂದ್ರೂ ನನ್ನ ಏನೂ ಮಾಡಲು ಆಗಲ್ಲ; ನನ್ನ ವಿರುದ್ಧದ ಷಡ್ಯಂತ್ರಕ್ಕೆ ಭಗವಂತ ತೀರ್ಪು ಕೊಡ್ತಾನೆ: ಎಚ್‌ಡಿಕೆ

ನಗರಸಭೆ ಅಧ್ಯಕ್ಷರ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ನ 16 ನಗರಸಭಾ ಸದಸ್ಯರಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಾಗ ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ಈ ಬಾರಿ ಹಾಗಾಗುವುದಿಲ್ಲಾ. ನಿಷ್ಠಾವಂತ ಕಾಂಗ್ರೆಸ್ ಸದಸ್ಯರೇ ಈ ಬಾರಿ ಅಧ್ಯಕ್ಷ ಉಪಾಧ್ಯಕ್ಷರಾಗುತ್ತಾರೆ. ಅಡ್ಡ ಮತದಾನ ಮಾಡಿದರೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರರೊಂದಿಗೆ ಮಾತನಾಡಿದ್ದೇನೆ. ಸೆಪ್ಟಂಬರ್ ಮೊದಲ ವಾರದಿಂದ ಎಲ್ಲಾ ಅದಿಕಾರಿಗಳು ಮತ್ತು ನಾನು ಒಂದು ಬಸ್ ನಲ್ಲಿ ತೆರಳಿ ಪ್ರತಿ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗೂ ಅರ್ಧ ಅರ್ಧ ಗಂಟೆ ಸಮಯ ನಿಗದಿಪಡಿಸಿ ಅಲ್ಲಿನ ರೈತರ, ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಪ್ರಥಮವಾಗಿ ಮುದ್ದೇನಹಳ್ಳನ ಪಂಚಾಯತಿಯನ್ನು ಆಯ್ಕೆ ಮಾಡಿ ಕೊಂಡಿದ್ದೇನೆ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ₹60 ಕೋಟಿ

ಕ್ಷೇತ್ರದ ಅಭಿವೃದ್ದಿಗೆ 60 ಕೋಟಿಗಳ ಅನುದಾನವನ್ನು ತಂದಿದ್ದು ಅದರಲ್ಲಿ 40 ಕೋಟಿಗಳು ನಗರೋತ್ತಾನಕ್ಕೆ ಬಂದಿದೆ . ಈ ಅನುದಾನ ತರಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರಿಗೆ ಕೃತಜ್ಞತೆಗಳನ್ನು ತಿಳಿಸಿದರು.

ಮುಡಾ ಹೋರಾಟ ದೆಹಲಿಗೆ ಒಯ್ಯಲು ಬಿಜೆಪಿ ಚಿಂತನೆ - ಸಂಸದರು, ಶಾಸಕರ ಜತೆಗೂಡಿ ಪ್ರತಿಭಟನೆ?

ಈ ವೇಳೆ ತಹಶೀಲ್ದಾರ್ ಅನಿಲ್,ನಗರಸಭೆ ಪ್ರಭಾರಿ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರ ಉಮಾಶಂಕರ್, ನಗರ ಪೋಲಿಸ್ ಠಾಣೆಯ ಪಿಎಸ್ಐ ಹೆಚ್.ನಂಜುಂಡಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು

click me!