ಸೋನಿಯಾ, ರಾಹುಲ್ ಹಗಲು ರಾತ್ರಿ ಸರ್ಕಸ್ ಮಾಡಿದ್ರು ಅಧಿಕಾರಕ್ಕೆ ಬರಲ್ಲ: ಈಶ್ವರಪ್ಪ
ಕಲಬುರಗಿ(ಅ.05): ಕಲಬುರಗಿ ಮೂಲದ ಡಾ. ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷ ಪಟ್ಟಕಟ್ಟುವ ಮೂಲಕ ಅವರನ್ನು ರಾಜಕೀಯವಾಗಿ ಬಲಿ ಕೊಡುವ ಕೆಲಸ ನಡೆದಿದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಖರ್ಗೆಗೆ ಎಐಸಿಸಿ ಪಟ್ಟಕಟ್ಟಿ ಅವರಿಗೆ ಬಲಿ ಕೊಡೋದಕ್ಕೆ ವೇದಿಕೆ ಸಿದ್ಧ ಮಾಡಲಾಗುತ್ತಿದೆ. ಖರ್ಗೆರನ್ನ ಎಐಸಿಸಿ ಅಧ್ಯಕ್ಷ ಮಾಡಿದ್ರೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋದು ಬರೀ ಕನಸಷ್ಟೇ ಎಂದರು.
ಮಲ್ಲಿಕಾರ್ಜುನ ಖರ್ಗೆರನ್ನ ಬಲಿ ಕೊಡುವುದಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಖಾಡಕ್ಕೆ ಇಳಿಸಿದ್ದಾರೆಂದ ಈಶ್ವರಪ್ಪ ರಾಹುಲ್, ಸೋನಿಯಾ ಕಾಲಿಟ್ಟಲ್ಲಿ ಪಕ್ಷ ಧೂಳಿಪಟವಾಗ್ತಿದೆ ಎಂದು ಲೇವಡಿ ಮಾಡಿದರು. ಭಾರತ್ ಜೋಡೋ ಯಾರು ಮಾಡಬೇಕು? ಭಾರತ್ ತೋಡೊ ಮಾಡಿದವರಾರಯರು? ಪಾಕ್, ಹಿಂದೂಸ್ಥಾನ ವಿಭಜನೆ ಮಾಡಿದ್ದು ಯಾರು? ಎಂದು ಪ್ರಶ್ನೆಗಳ ಸುರಿಮಳೆಗರೆದರು.
20 ಶಾಸಕರ ಜತೆ ಹೈದ್ರಾಬಾದ್‌ಗೆ ತೆರಳಿದ ಕುಮಾರಸ್ವಾಮಿ: ಹೆಚ್‌ಡಿಕೆ ರಾಜಕೀಯ ಲೆಕ್ಕಾಚಾರ ಏನಿದೆ?
ಮುಸ್ಲಿಮರಿಗೊಸ್ಕರ ಪಾಕಿಸ್ತಾನ ದೇಶ ಮಾಡಿದ್ರು, ಹಾಗಂತ ದೇಶದಲ್ಲಿ ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶದಲ್ಲಿ ನಡೆಯುವ ಗಲಭೆ, ದೊಂಬಿಗಳಿಗೆ ಕಾಂಗ್ರೆಸ್ ಕಾರಣ. ಸೋನಿಯಾ, ರಾಹುಲ್ ಹಗಲು ರಾತ್ರಿ ಸರ್ಕಸ್ ಮಾಡಿದ್ರು ಅಧಿಕಾರಕ್ಕೆ ಬರಲ್ಲ, ಆ ಗಾಂಧಿ, ಈ ಗಾಂಧಿ ಕುಟುಂಬಕ್ಕೆ ಯಾವುದೇ ಹೋಲಿಕೆ ಇಲ್ಲ
ಖರ್ಗೆರನ್ನ ಎಐಸಿಸಿ ಅಧ್ಯಕ್ಷ ಮಾಡಿದ್ರೆ ಅಧಿಕಾರಕ್ಕೆ ಬರುತ್ತೆ ಅನ್ನೊದು ಕನಸು, ಪರಮೇಶ್ವರನ್ನ ಸೋಲಿಸಿದ್ದು ಇದೇ ಸಿದ್ದರಾಮಯ್ಯ, ಪರಮೇಶ್ವರ ಸಿಎಂ ರೆಸ್ನಲ್ಲಿದ್ದ ಕಾರಣ ಅವರನ್ನ ಸಿದ್ದರಾಮಯ್ಯ ಸೋಲಿಸಿದ್ರು, ನಾನು ಪರಮೇಶ್ವರ ಸೋಲಿಸಿಲ್ಲ ಅಂತಾ ಸಿದ್ದರಾಮಯ್ಯ ಚಾಮುಂಡಿ ಮೇಲೆ ಆಣೆ ಮಾಡಲಿ ಎಂದರು. ಮುಂಬರುವ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿರು.
ಕಲಬರಗಿಯಲ್ಲಿ ಓಬಿಸಿ ರಾಜ್ಯ ಮಟ್ಟದ ಸಮಾವೇಶ
ಇದೇ ಅ.30ರಂದು ಕಲಬುರಗಿಯಲ್ಲಿ ಓಬಿಸಿ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲಾಗುತ್ತದೆ. ಸಮಾವೇಶ ಕುರಿತು ಪೂರ್ವಿಭಾವಿ ಸಭೆ ನಡೆಯುತ್ತಿವೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಸಮಾವೇಶಕ್ಕೆ 5 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ ಇದೆ ಎಂದರು. ಈ ಮಾವೇಶದ ಮೂಲಕ ಇದು ಕಾಂಗ್ರೆಸ್‌ಗೆ ಟಕ್ಕರ್ ಕೊಡುವುದಕ್ಕೆ ಅಲ್ಲ, ನಮ್ಮ ಪಕ್ಷ ಸಂಘಟನೆಯ ವಿಷಯವಾಗಿ ನಾವು ಕೈಗೊಳ್ಳುತ್ತಿರುವ ಕ್ರಮಗಳಿವು ಎಂದು ಈಶ್ವಪ್ಪ ಹೇಳಿದರು. ಆರ್‌ಎಸ್‌ಎಎಸ್‌ಗೆ ರಾಷ್ಟ್ರ ಭಕ್ತಿ ಬಿಟ್ಟು ಬೇರೆನು ಗೊತ್ತಿಲ್ಲ, ಪಿಎಫ್‌ಐಗೆ ರಾಷ್ಟ್ರದ್ರೋಹ ಬಿಟ್ಟು ಬೇರೆನು ಗೋತ್ತಿಲ್ಲ ಎಂದು ಇವಿದ ಈಶ್ವರಪ್ಪ ತಾವು ಸಚಿವ ಸ್ಥಾನ ನೀಡಿ ಎಂದು ಕೇಳಿಕೊಂಡಿಲ್ಲ, ಸಚಿವ ಸ್ಥಾನ ಕೊಡೊದು ಬಿಡೋದು ವರಿಷ್ಟರಿಗೆ ಬಿಟ್ಟಿದ್ದು, ರೋಪಗಲಿಂದ ಮುಕ್ತಿ ಸಿಕ್ಕನಂತರ ಬೊಮ್ಮಾಯಿ, ಬಿಎಸ್ವೈ, ಕಟೀಲ್ ಅಭಿನಂದಿಸಿದ್ದಾರೆಂದರು.