ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ತರೂರ್‌ಗೆ ಸ್ವಂತ ನಾಡಿನಿಂದ ಇಲ್ಲ ಬೆಂಬಲ!

By Suvarna NewsFirst Published Oct 4, 2022, 3:37 PM IST
Highlights

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಇದೀಗ ಪಕ್ಷದಲ್ಲಿ ಎರಡು ಬಣಗಳು ಎದ್ದು ಕಾಣುತ್ತಿದೆ. ಒಂದು ಗಾಂಧಿ ಕುಟುಂಬ ಬೆಂಬಲಿಸುವ ಬಣ ಹಾಗೂ ಮತ್ತೊಂದು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲು ಹಂಬಲಿಸುವ ಬಣ. ಜಿ23 ನಾಯಕರ ಗುಂಪಿನಿಂದ ಸ್ಪರ್ಧಿಸಿರುವ ಶಶಿ ತರೂರ್ ಇದೀಗ ಏಕಾಂಗಿಯಾಗಿದ್ದಾರೆ.

ತಿರುವನಂತಪುರಂ(ಅ.04) ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ ಇದೀಗ ಏಕಾಂಗಿಯಾಗುತ್ತಿದ್ದಾರೆ. ಕಾರಣ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಆಯ್ಕೆ ಯಾವುದೇ ಆಗಿದ್ದರೂ ಖರ್ಗೆಗೆ ಮತ ಹಾಕಬೇಕಾದ ಅನಿವಾರ್ಯಯಲ್ಲಿದ್ದಾರೆ. ಇದು ಶಶಿ ತರೂರ್‌ಗೆ ತೀವ್ರ ಹಿನ್ನಡೆ ತಂದಿದೆ. ಇದೀಗ ಅಧ್ಯಕ್ಷ ಚುನಾವಣೆ ಪ್ರಚಾರ ಕಾರ್ಯಕ್ಕೆ ಕೇರಳಕ್ಕೆ ಆಗಮಿಸಿರುವ ಶಶಿ ತರೂರ್‌ಗೆ ತಮ್ಮ ಸ್ವಂತ ನಾಡಿನಲ್ಲೇ ಬೆಂಬಲ ಇಲ್ಲದಾಗಿದೆ. ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ತಮ್ಮ ಬೆಂಬಲ ಮಲ್ಲಿಕಾರ್ಜುನ ಖರ್ಗೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್ ಚುನಾವಣಾ ಮಾರ್ಗಸೂಚಿ ಪ್ರಕಾರ, ಕಾಂಗ್ರೆಸ್ ಪಕ್ಷದ ಹುದ್ದೆಯಲ್ಲಿರುವವರು ಯಾರ ಪರ ಪ್ರಚಾರ ಮಾಡುವಂತಿಲ್ಲ. ಆದರೆ ಸುಧಾಕರ್ ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ. ಕೇರಳ ಕಾಂಗ್ರೆಸ್ ಅಧ್ಯಕ್ಷರೇ ಖರ್ಗೆಗೆ ಬೆಂಬಲ ನೀಡಿರುವುದರಿಂದ ಇನ್ನುಳಿದ ಪಕ್ಷದ ನಾಯಕರು ಖರ್ಗೆಗೆ ಬೆಂಬಲ ನೀಡಲಿದ್ದಾರೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚು. ಈ ಬೆಳವಣಿಗೆಯಿಂದ ಶಶಿ ತರೂರ್‌ಗೆ ತಮ್ಮ ಸ್ವಂತ ನಾಡು ಕೇರಳದಲ್ಲೇ ಬೆಂಬಲ ಇಲ್ಲದಾಗಿದೆ.

ಕೇರಳದಲ್ಲಿ ಪ್ರಚಾರ ಆರಂಭಿಸಿರುವ ಶಶಿ ತರೂರ್(Shashi Tharoor) ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾನು ಯಾವುದೇ ಹಿರಿಯ ನಾಯಕ, ಪ್ರಮುಖ ನಾಯಕರ ಬೆಂಬಲ ನಿರೀಕ್ಷಿಸುತ್ತಿಲ್ಲ. ನಾನೊಬ್ಬ ಪಕ್ಷದ ಕಾರ್ಯಕರ್ತ(Congress Party Worker). ಹಲವು ಕಾರ್ಯಕರ್ತರು ಚುನಾವಣೆಗೆ (Congress President Election)ಸ್ಪರ್ಧಿಸಲು ಮನವಿ ಮಾಡಿದ್ದರು. ಸ್ಪರ್ಧಿಸಿದ್ದೇನೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲ ಬದಲಾವಣೆ ಮಾಡಲು ಈ ಚುನಾವಣೆಗೆ ಧುಮುಕಿದ್ದೇನೆ ಎಂದು ಶಶಿ ತೂರರ್ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕಠಿಣ ಮಾರ್ಗಸೂಚಿ ಪ್ರಕಟ!

ನಾನು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಒತ್ತಡ, ಚುನಾವಣೆಯಲ್ಲಿ ಸೋಲು ಭೀತಿಗಳಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಈ ಮೂಲಕ ನನ್ನ ಬೆಂಬಲಿಸಿದವರಿಗೆ ಮೋಸ ಮಾಡುವುದಿಲ್ಲ. ಪಕ್ಷದ ಪ್ರಮುಖ ನಾಯಕರು, ಟಿಕೆಟ್ ಆಕಾಂಕ್ಷಿಗಳು ಖರ್ಗೆಗೆ(Mallikarjun Kharge) ಬೆಂಬಲ ನೀಡಲಿದ್ದಾರೆ. ಈ ನಾಯಕರಿಂದ  ನಾನು ಬೆಂಬಲ ನಿರೀಕ್ಷಿಸುವುದು ತಪ್ಪು ಎಂದು ಶಶಿ ತರೂರ್ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣದಲ್ಲಿರುವ ಏಕೈಕ ಕಾಂಗ್ರೆಸ್‌ ನಾಯಕ ಹಾಗೂ ವಾಗ್ಮಿ ಶಶಿ ತರೂರ್‌ ಅವರು ಅಧ್ಯಕ್ಷೀಯ ಹುದ್ದೆಯ ಚುನಾವಣೆಗೂ ಮುನ್ನ ಖರ್ಗೆ ಜೊತೆ ಸಾರ್ವಜನಿಕ ಚರ್ಚೆಗೆ ಒಲವು ವ್ಯಕ್ತಪಡಿಸಿದ್ದಾರೆ.

Congress President Election: ಖರ್ಗೆ ಕಾಂಗ್ರೆಸ್‌ನಲ್ಲಿ ಯಾವ ಬದಲಾವಣೆಯನ್ನೂ ತರೋದಿಲ್ಲ: ಶಶಿ ತರೂರ್‌

‘ಇತ್ತೀಚೆಗೆ ಬ್ರಿಟನ್ನಿನ ಕನ್ಸರ್ವೇಟಿವ್‌ ಪಕ್ಷದ ನಾಯಕತ್ವಕ್ಕಾಗಿ (ನಂತರ ಬ್ರಿಟನ್‌ ಪ್ರಧಾನಿ ಹುದ್ದೆ) ನಡೆದ ಸಾರ್ವಜನಿಕ ಚರ್ಚೆಯ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹುದ್ದೆಗೂ ಸಾರ್ವಜನಿಕ ಚರ್ಚೆ ನಡೆದರೆ ಅದರಿಂದ ಜನರಲ್ಲಿ ಪಕ್ಷದ ಬಗ್ಗೆ ಆಸಕ್ತಿ ಮೂಡುತ್ತದೆ’ ಎಂದು ತರೂರ್‌ ಹೇಳಿದ್ದಾರೆ.
 

click me!