ದೇಶದಲ್ಲಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹೋದ ಕಡೆಯಲೆಲ್ಲ ಕಾಂಗ್ರೆಸ್ ಸೋತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗುಂಡ್ಲುಪೇಟೆಗೆ ಕರೆತಂದು ಪ್ರಚಾರ ಮಾಡಿಸಿದರೆ ಇಲ್ಲಿನ ಕಾಂಗ್ರೆಸ್‌ಗೆ ಡೆಪಾಸಿಟ್ ಹೋಗುತ್ತೇ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಗುಂಡ್ಲುಪೇಟೆ (ಮಾ.03): ದೇಶದಲ್ಲಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹೋದ ಕಡೆಯಲೆಲ್ಲ ಕಾಂಗ್ರೆಸ್ ಸೋತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗುಂಡ್ಲುಪೇಟೆಗೆ ಕರೆತಂದು ಪ್ರಚಾರ ಮಾಡಿಸಿದರೆ ಇಲ್ಲಿನ ಕಾಂಗ್ರೆಸ್‌ಗೆ ಡೆಪಾಸಿಟ್ ಹೋಗುತ್ತೇ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ನೆಹರು ಪಾರ್ಕ್ನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಮೋದಿ, ಅಮಿತ ಶಾ ಬಿಟ್ಟರೆ ನಿಮ್ಮಲ್ಲಿ ರಾಜ್ಯದಲ್ಲಿ ಲೀಡರ್‌ಗಳಿಲ್ವ ಎಂದು ಹೇಳಿದ್ದಾರೆ. ಆದರೆ, ನಿಮ್ಮ ಲೀಡರ್‌ಗಳು ಹೋದೆಡೆಯಲ್ಲ ಕಾಂಗ್ರೆಸ್ ನೆಲ ಕಚ್ಚಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದರು.
ದೇಶದ ಅನೇಕ ರಾಜ್ಯದಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ ಕಡೆ ಡೆಪಾಸಿಟ್ ಹೋಗಿದೆ. ಇಲ್ಲಿ ನಿರಂಜನ್‌ಕುಮಾರ್ ಗೆಲ್ಲುತ್ತಾರೆ. ದಯವಿಟ್ಟು ಸೋನಿಯಾ, ರಾಹುಲ್, ಪ್ರಿಯಾಂಕ ಗುಂಡ್ಲುಪೇಟೆ ಕರೆತನ್ನಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರಲ್ಲಿ ವ್ಯಂಗವಾಡಿದರು. ಬಿಜೆಪಿಯಲ್ಲಿ 50 ಜನ ಲೀಡರ್‌ಗಳಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಾಲ್ಕು ದಿಕ್ಕುಗಳಲ್ಲಿ ಪ್ರವಾಸ ಮಾಡುತ್ತಿದೇವೆ. ಬಿಜೆಪಿಗೆ ಮೋದಿ, ಅಮಿತ್ ಶಾ ಲೀಡರ್‌ಗಳು ನಿಮಗ್ಯಾರು ಲೀಡರ್‌ಗಳಿದ್ದಾರೆ ಎಂದು ಹೇಳಿ ಸಿದ್ದರಾಮಯ್ಯರನ್ನು ಕಾಲೆಳೆದರು.
undefined
ಬೆಂಗಳೂರಿಗೆ ರಾಮನಗರ ಹೆಬ್ಬಾಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ
ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮಾತನಾಡಿ, ಶಾಸಕ ನಿರಂಜನ್ 3ಬಾರಿ ಸೋತ, ನಾಲ್ಕನೇ ಬಾರಿಗೆ ಗೆದ್ದ ನಾಯಕ. 4ನೇ ಚುನಾವಣೆಯಲ್ಲಿ ನಿಲ್ಲಲು ಶಕ್ತಿ ಇಲ್ಲ ಎಂದು ಪಕ್ಷ ನಿಲ್ಲಿಸಿತು. 17 ಸಾವಿರ ಮತಗಳಲ್ಲಿ ಗೆದ್ದ ಎಂದು ಹಳೆಯದನ್ನು ಮೆಲಕು ಹಾಕಿದರು. ಈ ಬಾರಿಯೂ ನಿರಂಜನ್‌ರನ್ನು ಕನಿಷ್ಟ30 ಸಾವಿರ ಮತಗಳಿಂದ ಗೆಲ್ಲಿಸಬೇಕು. ಕಾರ್ಯಕರ್ತರಲ್ಲಿ ಇರುವ ಉತ್ಸಾಹ ಹಾಗೂ ಬದ್ಧತೆ ನೋಡಿದರೆ ಖಂಡಿತ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್ ಮಾತನಾಡಿದರು. ಸಭೆಯಲ್ಲಿ ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ವಿಜಯ ಸಂಕಲ್ಪ ಯಾತ್ರೆ ಸಂಚಾಲಕ ದತ್ತಾತ್ರೇಯ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮುಖಂಡರಾದ ಎಂ.ರಾಮಚಂದ್ರ, ಡಾ. ಎ.ಆರ್.ಬಾಬು, ಮಂಡಲ ಅಧ್ಯಕ್ಷ ಜಗದೀಶ್ ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಇದ್ದರು.
ಸಂಪೂರ್ಣ ಬಹುಮತಕ್ಕೆ ಇನ್ನೂ ಎರಡು ಸ್ಥಾನ ಗೆಲ್ಲಬೇಕಿದೆ: ರಾಜ್ಯದಲ್ಲಿ ಯಡಿಯೂರಪ್ಪ 4 ಬಾರಿ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ತಲಾ ಒಂದೊಂದು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ರಾಜ್ಯದಲ್ಲಿ ಒಂದು ಬಾರಿಯೂ ಬಿಜೆಪಿಗೆ ಬಹುಮತ ಬಂದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ 110 ದಾಟಿಲ್ಲ. ಸಂಪೂರ್ಣ ಬಹುಮತ ಬರಲಿಲ್ಲ. 4 ಸದಸ್ಯರ ಕೊರತೆಯಿದೆ, ಈ ಬಾರಿ ಜಿಲ್ಲೆಯಲ್ಲಿ ಮತ್ತೆರಡು ಸದಸ್ಯರ ಕೊಡ್ತೀರಾ ಎಂದು ಕಾರ್ಯಕರ್ತರನ್ನೇ ಪ್ರಶ್ನಿಸಿದರು.
ಗೆಲ್ಲುವ ಮುಂಚೆ ಅಭಿನಂದನೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ನಿರಂಜನ್, ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್.ಮಹೇಶ್ ಫಲಿತಾಂಶಕ್ಕೂ ಮುನ್ನವೇ ಗೆದ್ದಾಯ್ತು ಅವರಿಗೆ ಅಭಿನಂದನೆ. ಹನೂರು, ಚಾಮರಾಜನಗರ ಗೆಲ್ಲುವ ಕಡೆ ಶ್ರಮಹಾಕಬೇಕು ಎಂದರು.
ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ
ಕಾಶಿ, ಮಧುರ ದೇವಸ್ಥಾನದ ಬಳಿಯ ಮಸೀದಿ ಧ್ವಂಸವಾಗಲಿದೆ: ಕಾಶಿ ಹಾಗೂ ಮಧುರ ದೇವಸ್ಥಾನಗಳಲ್ಲಿ ಮಸೀದಿಗಳಿವೆ ಮುಂದಿನ 2024 ರಲ್ಲಿ ಮತ್ತೆ ಮೋದಿ ಪ್ರಧಾನಿ ಆಗಲಿದ್ದು ದೇವಸ್ಥಾನದ ಬಳಿಕ ಮಸೀದಿ ಧ್ವಂಸ ಆಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಮುಂದೆ ಪ್ರಧಾನಿ ಆದ ಬಳಿಕ ಕಾಶಿ ಹಾಗೂ ಮಧುರ ದೇವಸ್ಥಾನದ ಬಳಿಯ ಮಸೀದಿ ಧ್ವಂಸವಾಗಲಿದೆ. ಬಿಜೆಪಿಗರು ಶಕ್ತಿ ಮೀರಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.