ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ

By Govindaraj S  |  First Published Mar 3, 2023, 10:06 PM IST

ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು ಎಂದು ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 


ಧಾರವಾಡ (ಮಾ.03): ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು ಎಂದು ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯವರೇ ಕೇಂದ್ರ ಸಚಿವ  ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಹುಬ್ಬಳ್ಳಿಯವರು, ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಸಹ ಹುಬ್ಬಳ್ಳಿಯವರು, ಆದರೆ ಅವಳಿ ನಗರದಲ್ಲಿ ಹತ್ತು ದಿನಕ್ಕೊಮ್ಮೆ ನೀರು ಬರುತ್ತಿದೆ ಇವರು ಕೆಲಸ ಮಾಡುತ್ತಿದ್ದಾರಾ? ಇವರು ನಾಯಕರಾ? ನಾಲಾಯಕರಾ? ಜನರೇ ತೀರ್ಮಾನ ಮಾಡಬೇಕು. ಅರವಿಂದ ಬೆಲ್ಲದ್ ತಂದೆಯ ಹೆಸರು ಒಂದು ನಗರಕ್ಕೆ ಇಟ್ಟಿದ್ದಾರೆ. ಇದೇನು ಇವರ ಆಸ್ತಿನಾ? ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

ಬಿಜೆಪಿಗರು ಹಿಟ್ಲರ್ ವಂಶಸ್ಥರು: ಬಿಜೆಪಿ ಸುಳ್ಳಿನ ಪಕ್ಷ. ಹಿಟ್ಲರ್ ಸುಳ್ಳು ಹೇಳೋದಕ್ಕೆ ಒಬ್ಬ ಮಂತ್ರಿ ಇಟ್ಟುಕೊಂಡಿದ್ದನು. ಇದೇ ರೀತಿ ಬಿಜೆಪಿ ಸಹ ಸುಳ್ಳು ಹೇಳುತ್ತಿದೆ. ಹೀಗಾಗಿ ಬಿಜೆಪಿ ಹಿಟ್ಲರ್ ವಂಶಸ್ಥರು. ಇವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ. ಅದಕ್ಕಾಗಿಯೇ ಸಂವಿಧಾನ ವಿರೋಧ ಮಾಡುತ್ತಾರೆ. ಸಾಮಾಜಿಕ ನ್ಯಾಯಕ್ಕೆ ಬದ್ಧರಾದವರು ಬಿಜೆಪಿಗೆ ವೋಟ್ ಹಾಕಬಾರದು. ಮೊದಲು ಹಿಂದೂತ್ವ ಇಟ್ಟುಕೊಂಡು ವೋಟ್ ಕೇಳಿದ್ದರು. ಆದರೆ ಈಗ ಜನ ಜಾಗೃತರಾಗಿದ್ದಾರೆ. ಹಿಂದೂತ್ವದ ಮೇಲೆ‌ ಈಗ ಚುನಾವಣೆಗೆ ಹೋಗಲು ಆಗುವುದಿಲ್ಲ. ಈಗ ಹಣ ಇಟ್ಟುಕೊಂಡು ಚುನಾವಣೆ ಮಾಡಲು ಹೊರಟಿದ್ದಾರೆ. 

Tap to resize

Latest Videos

500 ರೂ. ನೀಡಿ ಜನರ ಕರೆಸ್ಬೇಕು: ಸಿದ್ದರಾಮಯ್ಯ ವಿಡಿಯೋ ವೈರಲ್‌

ಮಂತ್ರಿಗಳಿಗೆ ಇಷ್ಟಿಷ್ಟು ದುಡ್ಡು ಕೊಡಬೇಕು ಅಂತಾ ಬೊಮ್ಮಾಯಿ ಹೇಳಿದ್ದಾರೆ.ನಿಗಮಗಳ ಅಧ್ಯಕ್ಷರಿಗೂ ಇಷ್ಟಿಷ್ಟು ದುಡ್ಡು ಅಂತಾ ಹೇಳಿದ್ದಾರೆ. ಅದಕ್ಕೆ ಮಾಡಾಳ ವಿರೂಪಾಕ್ಷಪ್ಪನ ಮಗ ಸಿಕ್ಕು ಬಿದ್ದಿದ್ದಾನೆ. ಪಾಪಾ ಅವರಿಗೆ ಕೋಟಾ ಕೊಟ್ಟು ಬಿಟ್ಟಿದಾರೆ ಅನ್ಸುತ್ತೆ.  ನಮ್ಮ ಅವಧಿಯಲ್ಲಿ ಆರೋಪ ಬಂದಿದ್ದಕ್ಕೆಲ್ಲ ಸಿಬಿಐಗೆ ಕೊಟ್ಟಿದ್ದೇನೆ. ಎಲ್ಲವುದಕ್ಕೂ ಬಿ ರಿಪೋರ್ಟ್ ಬಂದಿದೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಂತಾರೆ. ಎರಡು ಇಂಜಿನ್ ಇದ್ರೆ ವೇಗವಾಗಿ ಓಡುತ್ತೇವೆ ಅಂತಾರೆ. ಆದರೆ ಈ ಡಬ್ಬಾ ಸರ್ಕಾರ ಲಂಚ ಹೊಡೆಯೊದರಲ್ಲಿ ವೇಗವಾಗಿ ಓಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರದ ಸಾಧನೆ ಶೂನ್ಯ: ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದ್ದು ಹಿಂದೂ ಮುಸ್ಲಿಂ ಜಗಳ ಹಚ್ಚಿ ಮತ ಪಡೆಯುವ ಪಕ್ಷವಾಗಿದೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು. ನಗರದ ಕಡಪಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ತನ್ನ ಸಾಧನೆಗಳನ್ನು ತೋರಿಸಿ ಮತ ಕೇಳುವ ಪದ್ಧತಿ ಇದೆ. ಅದರಂತೆ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದ್ದು ಅವರಿಗೆ ಮತ ಕೇಳಲು ಬಿಜೆಪಿಯವರು ಹಿಂದೂ ಮುಸ್ಲಿಂ ಜಗಳ ಹಚ್ಚಿ ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

click me!