ಪ್ರಪಂಚದಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು ಹೆಣ್ಣು ಮಕ್ಕಳಿಗೆ ಹೆಚ್ಚಿನ ಮೀಸಲಾತಿ ಕೆಲಸ ಮಾಡಲಿ. ದೇಶಾದ್ಯಂತ ಸಂಭ್ರಮದಿಂದ ಸ್ವಾಗತಿಸುವ ಕೆಲಸ ನಡೆಯುತ್ತಿದೆ ಎಂದ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ(ಸೆ.21): ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಚಂದ್ರಯಾನ 3, ತ್ರಿಬಲ್ ತಲಾಖ್, ಪೋಕ್ಸೋ ಕಾಯ್ದೆ ಸೇರಿದಂತೆ ವಿಶ್ವದಲ್ಲಿ ಜನಪ್ರಿಯರಾಗಿದ್ದಾರೆ. ಇದೀಗ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತಂದಿದ್ದಾರೆ ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅಟಲ್ ಬಿಹಾರಿ ವಾಜಪೇಯಿ ದೇವೇಗೌಡ ರವರು ಪ್ರಧಾನಿಯಾಗಿದ್ದಾಗ ಇದಕ್ಕಾಗಿ ಪ್ರಯತ್ನ ನಡೆದಿತ್ತು. ಮಹಿಳಾ ಮೀಸಲಾತಿ ಜಾರಿಗೆ ಬಂದಿದ್ದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಂತೋಷ ವ್ಯಕ್ತಪಡಿಸಿವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಿನ್ನೆ(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನನಾಡಿದ ಕೆ.ಎಸ್.ಈಶ್ವರಪ್ಪ, ಪ್ರಪಂಚದಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು ಹೆಣ್ಣು ಮಕ್ಕಳಿಗೆ ಹೆಚ್ಚಿನ ಮೀಸಲಾತಿ ಕೆಲಸ ಮಾಡಲಿ. ದೇಶಾದ್ಯಂತ ಸಂಭ್ರಮದಿಂದ ಸ್ವಾಗತಿಸುವ ಕೆಲಸ ನಡೆಯುತ್ತಿದೆ ಎಂದರು.
ಅಪ್ಪ-ಮಗನ ವರ್ಗಾವಣೆ ದಂಧೆ ಸುಳ್ಳಾದರೆ ಕುರುಡುಮಲೆ ಗಣೇಶನ ಮುಂದೆ ಬಂದು ಪ್ರಮಾಣ ಮಾಡಲಿ; ಸಿಎಂಗೆ ಈಶ್ವರಪ್ಪ ಸವಾಲು!
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು ರಾಜ್ಯ ಸರ್ಕಾರದಿಂದ ಬೆಳೆ ಸೇರುವೆ ಕಾರ್ಯ ನಡೆಯಬೇಕು. ಎಷ್ಟು ಬೆಳೆ ನಷ್ಟ ಆಗಿದೆ ಎಷ್ಟೆಷ್ಟು ಮಳೆ ಬಂದಿಲ್ಲ ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬೇಕು ರಾಜ್ಯದಲ್ಲಿ ಇನ್ನು ಬರಗಾಲದ ಕುರಿತು ಸರ್ವೆ ಕಾರ್ಯವನ್ನೇ ಸಂಪೂರ್ಣವಾಗಿ ಇನ್ನೂ ಮಾಡಿಲ್ಲ ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಬರಗಾಲದ ಸಮಸ್ಯೆ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಎಲ್ಲಾ ತಾಲೂಕುಗಳಿಗೂ ಒಂದೊಂದು ಕೋಟಿ ರೂ ಕೊಟ್ಟಿದ್ದೇವೆ ಎಂದು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯ ಚಿಂತನೆಯಲ್ಲೇ ಇನ್ನು ಇದ್ದಾರೆ ಗ್ಯಾರಂಟಿ ಯೋಜನೆಗಳ ಮೂಲಕ ಲೋಕಸಭೆ ಗೆಲ್ಲಬೇಕು ಎಂದು ಕೊಳ್ಳುತ್ತಿದ್ದಾರೆ . ಒಂದು ತಿಂಗಳುಗಳ ಕಾಲ ಸಿಎಂ ಸಿದ್ದರಾಮಯ್ಯ ಸಂಪೂರ್ಣವಾಗಿ ಬರಗಾಲ ನಿವಾರಣೆಗೆ ತೊಡಗಿಸಿಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನವನ್ನು ನಾವು ಕೊಡಿಸುವ ಪ್ರಯತ್ನ ನಡೆಸುತ್ತೇವೆ ಸಚಿವ ಶಿವಾನಂದ ಪಾಟೀಲ್ ಹಣ ಬರುತ್ತದೆ ಎನ್ನುವ ಕಾರಣಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎನ್ನುತ್ತಾರೆ ಇದಕ್ಕಿಂತ ಅಪಮಾನ ಬೇರೊಂದಿಲ್ಲ ಎಂದು ತಿಳಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಚಾರ ಐ ಎನ್ ಡಿಐ ಎ ಒಕ್ಕೂಟದ ಪಾಲುದಾರರಾಗಿರುವ ಹಿನ್ನೆಲೆ ಕಾಂಗ್ರೆಸ್ ನದಿ ನೀರು ಬಿಡಲು ಮುಂದಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಕುರಿತಂತೆ ಹೆಚ್ಚಿನ ಮಾಹಿತಿ ನನ್ನ ಬಳಿ ಇಲ್ಲ
ಡಿಸಿಎಂ ಡಿಕೆಶಿಗೆ ಮುಜುಗರ ತರಲು ಚೇಲಾಗಳು ಈ ರೀತಿ ಮಾತನಾಡಿದ್ದಾರೆಅದೇ ರೀತಿ ಡಿಕೆಶಿ ಚೇಲಾಗಳು ಕೂಡ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಾರೆಇದು ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಗೆ ತೋರಿಸುತ್ತದೆ .ಬಿಜೆಪಿ ಶಾಸಕರು ಯಾರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಲ್ಲ.135 ಶಾಸಕರಿದ್ದಾರೆ ಆಡಳಿತ ಚೆನ್ನಾಗಿ ನಡೆಸಿಕೊಂಡು ಹೋಗಲಿ. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಕಾಂಗ್ರೆಸ್ ಒಂದೇ ಒಂದು ಸಾಕ್ಷಿ ಕೊಡಲಿಲ್ಲ. ಗುತ್ತಿಗೆದಾರ ಕೆಂಪಣ್ಣನವರಿಂದ ಹಲವು ಬಾರಿ ಕೇಳಿಸಿದರು ಸಾಕ್ಷಿ ಕೊಡೋದಿಲ್ಲ
ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರರಿಂದ ವರ್ಗಾವಣೆ ದಂಧೆ
ವರ್ಗಾವಣೆಯಲ್ಲಿ ಕೇಂದ್ರೀಕೃತ ಲೂಟಿ ನಡೆಯುತ್ತಿದೆ. 40% ಕಿಂತ ಜಾಸ್ತಿ ಲೂಟಿ ನಡೆಯುತ್ತಿದೆ ನಿವೃತ್ತ ನ್ಯಾಯಾಧೀಶರಿಂದ ಅಥವಾ ಹಾಲಿ ನ್ಯಾಯಾಧೀಶರಿಂದ ವರ್ಗಾವಣೆ ದಂಧೆ ಕುರಿತು ತನಿಖೆ ನಡೆಸಬೇಕು. ಅನೇಕ ಅಧಿಕಾರಿಗಳು ಹಣ ಕೊಟ್ಟಿದ್ದ ಬಗ್ಗೆ ಗಮನಕ್ಕೆ ತರುತ್ತಿದ್ದಾರೆ ವಾಟ್ಸಪ್ ಮೂಲಕ ಮೆಸೇಜ್ ಹಾಕುತ್ತಿದ್ದಾರೆ .ಯಾವುದೇ ಶಾಸಕ ಕ್ಷೇತ್ರಕ್ಕೂ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಶಿವಮೊಗ್ಗದ ಗೋವಿಂದಪುರದಲ್ಲಿ ಆಶ್ರಯ ಮನೆಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸುವ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಯಾವ ಯಾವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುವುದು ತನಿಖೆ ನಡೆಸಿ. ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ಸಿಐಡಿ ಯಿಂದ ಅಥವಾ ಸಿಬಿಐ ತನಿಖೆ ನಡೆಸಿ ಎಂದರು. ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ಕೊಡುವ ಮೂಲಕ ಗುತ್ತಿಗೆದಾರರು ನಿಮ್ಮ ಮನೆ ಬಾಗಿಲಿಗೆ ಬರಬೇಕಾ?. ಮಧು ಬಂಗಾರಪ್ಪನವರಿಗೆ ಶಕ್ತಿ ಇದ್ದರೆ ತನಿಖೆಗೆ ಆದೇಶ ಮಾಡಿ 3 ತಿಂಗಳಲ್ಲಿ ಭ್ರಷ್ಟಾಚಾರದ ಕುರಿತು ವರದಿ ಪಡೆದು ತೀರ್ಮಾನ ಮಾಡಿ.ನನ್ನ ಮೇಲೆ ಭ್ರಷ್ಟಾಚಾರದ ಆಪಾದನೆ ಬಂತು ನಾನೇ ರಾಜೀನಾಮೆ ನೀಡಿದೆ ನ್ಯಾಯಾಲಯಕ್ಕೂ ಹೋಗಿದ್ದೆ, ಮಧು ಬಂಗಾರಪ್ಪ ಭ್ರಷ್ಟಾಚಾರ ನಡೆದಿದೆ ಎಂದು ಘೋಷಣೆ ಮಾಡುತ್ತಿರುವುದೇ ನನ್ನ ಕೈ ಖಾಲಿಯಾಗಿದೆ ಯಾರಾದರೂ ಬಂದು ದುಡ್ಡು ಕೊಡಿ ಎನ್ನುವುದಕ್ಕೆ ಎಂದು ಆಕ್ರೋಶ ಹೊರಹಾಕಿದರು
ಡಿಕೆಶಿ ನೀರಿನ ಕಳ್ಳ, ಅಯೋಗ್ಯ ಎಂದ ಈಶ್ವರಪ್ಪ
ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿಡಿಕೆಶಿ ನೀರಿನ ಕಳ್ಳ, ನಮ್ಮ ರಾಜ್ಯದ ರೈತರಿಗೆ ದ್ರೋಹ ಮಾಡಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ.ಕಾವೇರಿ ವಿಚಾರದಲ್ಲಿ ಡಿಕೆಶಿ ನೇರವಾಗಿ ನೀರಿನ ಕಳ್ಳತನ ಮಾಡುತ್ತಿದ್ದಾರೆ ಹೇಳುವುದೊಂದು ಮಾಡುವುದೊಂದು.ಅವರಿಗೆ ಲೋಕಸಭೆ ಗೆಲ್ಲಬೇಕು ಎನ್ನುವುದು ಬಿಟ್ಟರೆ ಬೇರೇನು ಇಲ್ಲ. ತಮಿಳುನಾಡನ್ನು ಇಂಡಿಯಾ ತೆಕ್ಕೆಯಲ್ಲಿಟ್ಟುಕೊಂಡು ತೃಪ್ತಿಪಡಿಸಲು ನೀರು ಬಿಟ್ಟಿಲ್ಲ ಎನ್ನುತ್ತಲೆ ನೀರು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿಯನ್ನು ನೀರಿನ ಕಳ್ಳ ಎಂದರೆ ತಪ್ಪಾಗುವುದಿಲ್ಲ. ಆ ಭಾಗದ ರೈತರು ಬಿಜೆಪಿಯ ಹೋರಾಟದ ಬಳಿಕ ಇದೀಗ ಕೇಂದ್ರ ಸರ್ಕಾರದ ಬಳಿ ಹೋಗುವುದಾಗಿ ಹೇಳುತ್ತಿದ್ದಾರೆ.ನೀರಿನ ಕಳ್ಳ ಡಿಕೆಶಿನಮ್ಮ ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ.ಡಿಕೆಶಿ ಉಪಮುಖ್ಯಮಂತ್ರಿ ಯಾಗಲು ಅಯೋಗ್ಯ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಾಚೆಗೆ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಮಾಜಿ ಸಿಎಂ ಹೆಚ್‌ಡಿಕೆ ಮೈತ್ರಿ ಸರವಾಗಿ ಬಿಜೆಪಿ ವರಿಷ್ಠರ ಜೊತೆ ಚರ್ಚೆ ನಡೆಸುವುದಾಗಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಅಷ್ಟೇ ಎಂದರು
ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ವಿಚಾರ
ಸಿದ್ದರಾಮಯ್ಯನ ಚೇಲಾಗಳು ಡಿಕೆಶಿಗೆ ಅವಮಾನ ಮಾಡಲು ಈ ಬೇಡಿಕೆ ಇಟ್ಡಿದ್ದಾರೆ. ಕಾಂಗ್ರೆಸ್ ನ ಗುಂಪುಗಾರಿಕೆಯೇ ಅವರ 100 ದಿನದ ಸಾಧನೆ ಎಂದರಲ್ಲದೆ ಮೂರು ಡಿಸಿಎಂಗೆ ಹೋಗುತ್ತದೋ, ಐದು ಡಿಸಿಎಂ ಗೆ ಹೋಗುತ್ತದೋ ಗೊತ್ತಿಲ್ಲ ಲೋಕಸಭೆ ಚುನಾವಣೆಯವರೆಗೆ ಈ ಸರಕಾರ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಗುಂಪುಗಾರಿಕೆ, ಅವ್ಯವಹಾರ, ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ನಮ್ಮ ಸರಕಾರ ಇದ್ದಾಗ 40% ಸರ್ಕಾರ ಅಂತಿದ್ದರುಒಂದೇ ಒಂದು ಸಾಕ್ಷಿ ಕೊಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಭ್ರಷ್ಟಾಚಾರ ನಡೆಯುತ್ತಿದೆ. ಒಬ್ಬೊಬ್ಬ ಅಧಿಕಾರಿಯಿಂದಲೂ ಲಂಚ ಪಡೆಯುತ್ತಿದ್ದಾರೆ.ಅವರ ಪಕ್ಷದ ಶಾಸಕರೇ ಆರೋಪ ಮಾಡ್ತಿದ್ದಾರೆ.
ಗ್ಯಾರಂಟಿ ದುಡ್ಡು ಹೊಡೆಯೋದೇ ಕಾಂಗ್ರೆಸ್ ಯೋಚನೆ: ಈಶ್ವರಪ್ಪ ವಾಗ್ದಾಳಿ
40% ಕ್ಕಿಂತ ಹೆಚ್ಚಿನ ಲಂಚವನ್ನು ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಪಡೆಯುತ್ತಿದ್ದಾರೆ. ಈ ಬಗ್ಗೆ ಬೇಕಾದರೆ ನಾನು ಸಾಕ್ಷಿ ಒದಗಿಸುತ್ತೇನೆ. ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಈಶ್ವರಪ್ಪ ಸವಾಲ್ ಹಾಕಿದ್ದಾರೆ.ವರ್ಗಾವಣೆ ದಂಧೆಯಲ್ಲಿ ಸಿದ್ದರಾಮಯ್ಯ, ಯತೀಂದ್ರ ಲೂಟಿ ಮಾಡ್ತಿದ್ದಾರೆ. ನ್ಯಾಯಾಧೀಶರ ನೇಮಕ ಮಾಡಿದ್ರೆ ನಾನೇ 25 ಕ್ಕು ಹೆಚ್ಚು ಅಧಿಕಾರಿಗಳನ್ನು ಕರೆದುಕೊಂಡು ಹೋಗ್ತೀನಿ.ಅಧಿಕಾರಿಗಳು ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ
ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕುಕ್ಕರ್, ಐರನ್ ಬಾಕ್ಸ್ ವಿತರಣೆ ವಿಚಾರ
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದ ವರುಣ ಕ್ಷೇತ್ರದಲ್ಲಿ ಕುಕ್ಕರ್ ಐರನ್ ಬಾಕ್ಸ್ ವಿತರಣೆ ಮಾಡಲಾಗಿದೆ.ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೊಟ್ಟಿರುವ ಹೇಳಿಕೆಯಿಂದ ಬಹಿರಂಗವಾಗಿದೆ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಿದ್ದರಾಮಯ್ಯ ಅಕ್ರಮವಾಗಿ ಜಯ ಗಳಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಶಾಸಕ ಸ್ಥಾನದಿಂದ ಚುನಾವಣಾ ಆಯೋಗ ಕಿತ್ತು ಎಸೆಯಬೇಕು ಎಂದು ಆಗ್ರಹಿಸಿದರು.