2018 ರಲ್ಲಿಯೇ ಶಾಸಕ ಡಾ. ಅಜಯ್ ಸಿಂಗ್ ಬಿಜೆಪಿ ಕದ ತಟ್ಟಿದ್ದರು. ಈ ಬಗ್ಗೆ ಅಂದಿನ ಬಿಜೆಪಿ ಉಸ್ತುವಾರಿ ಮುರುಳಿಧರರಾವ್ ಮತ್ತು ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದರು ಎಂದು ತಿಳಿಸಿದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ.
ಕಲಬುರಗಿ(ಸೆ.20): ಜೇವರ್ಗಿ ಕಾಂಗ್ರೆಸ್ ಶಾಸಕ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್ ಈ ಹಿಂದೆ ಬಿಜೆಪಿ ಸೇರಲು ಮುಂದಾಗಿದ್ದರು ಎಂದು ಜೆಡಿಎಸ್ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
2018 ರಲ್ಲಿಯೇ ಶಾಸಕ ಡಾ ಅಜಯ್‌ಸಿಂಗ್ ಬಿಜೆಪಿ ಕದ ತಟ್ಟಿದ್ದರು. ಈ ಬಗ್ಗೆ ಅಂದಿನ ಬಿಜೆಪಿ ಉಸ್ತುವಾರಿ ಮುರುಳಿಧರರಾವ್ ಮತ್ತು ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದರು ಎಂದು ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ತಿಳಿಸಿದ್ದಾರೆ.
ಮೂಲತಃ ಬಿಜೆಪಿಯಲ್ಲಿದ್ದ ದೊಡ್ಡಪ್ಪಗೌಡ ಪಾಟೀಲ್, ಕಳೆದ ಬಾರಿ ಬಿಜೆಪಿ ಟಿಕೆಟ್ ಸಿಗದ ಕಾರಣ ಜೆಡಿಎಸ್ ನಿಂದ ಸ್ಪರ್ದಿಸಿ ಡಾ. ಅಜಯಸಿಂಗ್ ವಿರುದ್ದ ಪರಾಭವಗೊಂಡವರು. ಅವರು ಇದೀಗ ಬಿಜೆಪಿಯಲ್ಲಿದ್ದಾಗಿನ ಘಟನೆಯನ್ನು ಹೊರಹಾಕಿದ್ದಾರೆ.
undefined
ಬರ ಕುರಿತು ಮಾತುಕತೆಗೆ ಪ್ರಧಾನಿ ಸಮಯ ನೀಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಡಾ ಅಜಯ್‌ಸಿಂಗ್ ರನ್ನು ಬಿಜೆಪಿಗೆ ಸೇರಿಸಿಕೊಳ್ಳೊಣವೇ ? ಬೇಡವೇ ? ಎನ್ನುವುದರ ಬಗ್ಗೆ ಯಡಿಯೂರಪ್ಪನವರು ನನ್ಬೊಂದಿಗೆ ಚರ್ಚಿಸಿದ್ದರು ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದ್ಸಾರೆ.
ನಾನು ಅಂದು ಕಲಬುರಗಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷನಾಗಿದ್ದೆ.
ಬಿಜೆಪಿ ಪಕ್ಷಕ್ಕೆ ಅಜಯ್‌ಸಿಂಗ್ ಸೇರ್ಪಡೆಯಿಂದ ಒಳ್ಳೆಯದಾದರೆ ಸೇರಿಸಿಕೊಳ್ಳೊಣ ಎಂದಿದ್ದೆ. ಅಜಯ್‌ಸಿಂಗ್ ಜೇವರ್ಗಿ ಕ್ಷೇತ್ರಕ್ಕೆ, ಸಹೋದರ ವಿಜಯಸಿಂಗ್ ಬಸವಕಲ್ಯಾಣ ಕ್ಷೇತ್ರಕ್ಕೆ, ಭಾವ ಚಂದ್ರಸಿಂಗ್ ಬೀದರ್ ಕ್ಷೇತ್ರಕ್ಕೆ ಟಿಕೆಟ್ ಡಿಮ್ಯಾಂಡ್ ಮಾಡಿದ್ದರು ಎಂದು ದೊಡ್ಡಪ್ಪಗೌಡ ತಿಳಿಸಿದ್ಸಾರೆ.
ರಾಜ್ಯ ಬಿಜೆಪಿ ನಾಯಕರ ಮುಂದೆ ಶಾಸಕ ಡಾ ಅಜಯ್‌ಸಿಂಗ್ ಟಿಕೆಟ್‌ಗಾಗಿ ಡಿಮ್ಯಾಂಡ್ ಮಾಡಿದ್ದರು. ಅಜಯ್‌ಸಿಂಗ್ ಬಿಜೆಪಿ ಸೇರ್ಪಡೆ ಬಗ್ಗೆ ನನ್ನ ಜೊತೆ ಯಡಿಯೂರಪ್ಪ ಮತ್ತು ಮುರುಳಿಧರರಾವ್ ಚರ್ಚೆ ಸಹ ನಡೆಸಿದ್ದರು. ನಂತರ ಮುಂದಿನ ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ಆದ್ರೆ ಅಜಯಸಿಂಗ್ ಬಿಜೆಪಿ ಕದ ತಟ್ಟಿದ್ದರು ಎನ್ನುವುದು ಸತ್ಯ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದ್ದಾರೆ.