ನೀವು ಮೊದಲನೇ ಕಾರು ಹತ್ತಿದ್ದು ಬಿಜೆಪಿ ಸಹಕಾರದಿಂದ ಎಂಬುದು ನೆನಪಿರಲಿ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಬಿಜೆಪಿ 17 ಶಾಸಕರ ಬೆಂಬಲದಿಂದ ನೀವು ಮೊದಲ ಬಾರಿಗೆ ಗೂಟದ ಕಾರು ಏರಿದ್ದು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು . ಆಗ ಬಿಜೆಪಿ ನಿಮಗೆ ಕೋಮುವಾದಿ ಪಕ್ಷ ಅಂತಾ ಗೊತ್ತಿರಲಿಲ್ವಾ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಶಿವಮೊಗ್ಗ (ಸೆ.12): 'ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಗ ಸಾಯಬಾರದು, ಅದನ್ನು ನಾನಾಗಲಿ ನಮ್ಮ ಪಕ್ಷವಾಗಲಿ ಬಯಸುವುದಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಮಂಗಳವಾರ ಶಿವಮೊಗ್ಗದಲ್ಲಿ ಮಾಧ್ಯಮದವರು 'ಸಿದ್ದರಾಮಯ್ಯನವರು ಬಿಜೆಪಿ ಕಚೇರಿಗೆ ನನ್ನ ಹೆಣ ಕೂಡ ಹೋಗುವುದಿಲ್ಲ' ಎಂಬ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನೀವು ಮೊದಲನೇ ಕಾರು ಹತ್ತಿದ್ದು ಬಿಜೆಪಿ ಸಹಕಾರದಿಂದ ಎಂಬುದು ನೆನಪಿರಲಿ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಬಿಜೆಪಿ 17 ಶಾಸಕರ ಬೆಂಬಲದಿಂದ ನೀವು ಮೊದಲ ಬಾರಿಗೆ ಗೂಟದ ಕಾರು ಏರಿದ್ದು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು . ಆಗ ಬಿಜೆಪಿ ನಿಮಗೆ ಕೋಮುವಾದಿ ಪಕ್ಷ ಅಂತಾ ಗೊತ್ತಿರಲಿಲ್ವಾ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯರನ್ನು ಜನರು ದೇವರಾಜ್ ಅರಸರಂತೆ ಕಾಣುತ್ತಿದ್ದಾರೆ: ಶಿವರಾಜ ತಂಗಡಗಿ
ಕೋಮುವಾದಿ ಬಿಜೆಪಿ ಪಕ್ಷಕ್ಕೆ ನನ್ನ ಹೆಣ ಕೂಡಾ ಹೋಗಲ್ಲ ಅಂದಿದ್ದೀರಿ ಯಾವಾಗ ಬಿಜೆಪಿ ಕೋಮುವಾದಿ ಆಗಿತ್ತು? ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು, ಬಿಜೆಪಿ ಬೆಂಬಲದಿಂದ ನಾನು ಸರ್ಕಾರಿ ಕಾರು ಹತ್ತಿದ್ದು ನಿಜ ಅಂತಾ ಒಪ್ಪಿಕೊಂಡು ನೀವು ಕ್ಷಮೆ ಕೇಳಿ ಎಂದು ಸಿದ್ದರಾಮಯ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.