Haveri: ಕಾಂಗ್ರೆಸ್‌ ಎಂದಿಗೂ ಜಾತಿ, ಧರ್ಮದೊಂದಿಗೆ ಆಟವಾಡಿದ ಪಕ್ಷವಲ್ಲ: ಜಯಮಾಲಾ

Published : Mar 26, 2022, 10:33 AM IST
Haveri: ಕಾಂಗ್ರೆಸ್‌ ಎಂದಿಗೂ ಜಾತಿ, ಧರ್ಮದೊಂದಿಗೆ ಆಟವಾಡಿದ ಪಕ್ಷವಲ್ಲ: ಜಯಮಾಲಾ

ಸಾರಾಂಶ

*  ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಭಿಯಾನ ಉದ್ಘಾಟಿಸಿದ ಮಾಜಿ ಸಚಿವೆ ಜಯಮಾಲಾ *  2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ *  ಪ್ರತಿ​ಪ​ಕ್ಷ​ಗ​ಳಿಗೆ ತಿರು​ಗೇ​ಟು​ 

ಸವಣೂರ(ಮಾ.26):  ಕಾಂಗ್ರೆಸ್‌(Congress) ಪಕ್ಷ ಎಂದಿಗೂ ಜಾತಿ, ಧರ್ಮದ ಜೊತೆಯಲ್ಲಿ ಆಟವಾಡಿದ ಪಕ್ಷವಲ್ಲ. ಪ್ರೀತಿ- ಪ್ರೇಮದ ಜೊತೆಯಲ್ಲಿ ಬೆರೆತ ಪಕ್ಷವಾಗಿದೆ ಎಂದು ಮಾಜಿ ಸಚಿವೆ ಜಯಮಾಲಾ(Jayamala) ತಿಳಿಸಿದರು.
ಪಟ್ಟಣದ ಶಾದಿ ಮಹಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಡಿಜಿಟಲ್‌ ಸದಸ್ಯತ್ವ ಅಭಿಯಾನ(Congress Digital Membership Campaign) ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರನ್ನು(Women) ಪಕ್ಷದ ಸದಸ್ಯರನ್ನಾಗಿ ಮಾಡಿ ಅವರಿಗೆ ಸರ್ಕಾರ ರೂಪಿಸುವ ಎಲ್ಲ ಯೋಜನೆಗಳು ತಲುಪುವಂತೆ ಮಾಡಬೇಕಿದೆ. ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಹಾವೇರಿ(Haveri) ಜಿಲ್ಲೆಯಲ್ಲಿರುವ 6 ಕ್ಷೇತ್ರಗಳಲ್ಲಿಯೂ ಗೆಲುವನ್ನು ಸಾಧಿಸಲಿದೆ. ಕಾರ್ಯಕರ್ತರು ಸೋತಿದ್ದೇವೆ ಎಂಬ ಮನೋಭಾವನೆ ಬದಿಗಿಟ್ಟು ಕಾರ್ಯ ನಿರ್ವಹಿಸಿ. ಕಾಂಗ್ರೆಸ್‌ ಪಕ್ಷಕ್ಕೆ ಸೋಲಿಲ್ಲ, ಸೋಲಲು ಸಾಧ್ಯವಿಲ್ಲ. ಭಾರತದ ಆಯಸ್ಸು ಮತ್ತು ಪಕ್ಷದ ಆಯಸ್ಸು ಒಂದೇ ರೀತಿ ಇರುವಾಗ ಸೋಲಿನ ಮಾತಿಲ್ಲ. ಪ್ರತಿ ಮನೆಮನಗಳಿಗೆ ತೆರಳಿ ಬೂತ್‌ ಮಟ್ಟದಲ್ಲಿ ಸಂಘಟನೆಗಳನ್ನು ಬಲಪಡಿಸಿ, ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದಲ್ಲಿ ಸದಸ್ಯತ್ವ ಅಭಿಯಾನ ಬಲಗೊಳ್ಳಲಿದೆ.

Karnataka Politics: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಕುಮಾರಸ್ವಾಮಿ

ಶಿಗ್ಗಾಂವಿ ಮತಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಮಾ. 31ರ ಒಳಗಾಗಿ ಹೆಚ್ಚು ಸದಸ್ಯತ್ವಕ್ಕೆ ಕಾರ್ಯಕರ್ತರು ಮುಂದಾಗಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಅಋೂರ ಆದೇಶದ ಮೇರೆಗೆ ಈ ಕ್ಷೇತ್ರದಲ್ಲಿ 47.600 ಜನ ಸದಸ್ಯತ್ವದ ಗುರಿಯನ್ನು ಹೊಂದಲಾಗಿದೆ. ಆದ್ದರಿಂದ, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿ ಡಿಜಿಟಲ್‌ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಕರೆ ನೀಡಿದರು.

ಕೆಪಿಸಿಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ ಮಾತನಾಡಿ. ಕಾಂಗ್ರೆಸ್‌ ಪಕ್ಷ ಬಲವರ್ಧನೆಗೊಳ್ಳಲು ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ನೋಂದಣಿ ಮಾಡಿಸುವುದು ಅವಶ್ಯವಿದೆ. ಪ್ರತಿಯೊಂದು ಬೂತ್‌ಮಟ್ಟದಲ್ಲಿಯೂ ಕಾರ್ಯಕರ್ತರು ಉತ್ಸಾಹಿಗಳಾಗಿದ್ದಾರೆ. ಆದರೆ, ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ದ್ವಂದ್ವ ಎದುರಾಗಿದ್ದು ಜನರಿಗೆ ಓಟಿಪಿ ಕುರಿತು ಸರಿಯಾಗಿ ಮನವರಿಕೆ ಮಾಡಿಕೊಟ್ಟಲ್ಲಿ ಮಾತ್ರ ಹೆಚ್ಚು ಸದಸ್ಯತ್ವವನ್ನು ಮಾಡಬಹುದಾಗಿದೆ. ಪ್ರತಿ ಕಾರ್ಯಕರ್ತರು ಪ್ರತಿಯೊಂದು ಮನೆ- ಮನೆಗೆ ತೆರಳಿ ಡಿಜಿಟಲ್‌ ಸದಸ್ಯತ್ವವನ್ನು ಕೈಗೊಳ್ಳಿ. ಪಟ್ಟಣದ 29 ಬೂತ್‌ಗಳಲ್ಲಿ ಹೆಚ್ಚಿನ ಸದಸ್ಯತ್ವ ಪಡೆದುಕೊಳ್ಳಿ. ನಮ್ಮೊಂದಿಗೆ ಕೈ ಜೋಡಿಸಿದಲ್ಲಿ ಎರಡೇ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಡಿಜಿಟಲ್‌ ಸದಸ್ಯತ್ವವನ್ನು ಮಾಡಬಹುದಾಗಿದೆ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ಸೊಮಣ್ಣ ಬೇವಿನಮರದ ಮಾತನಾಡಿದರು. ಕೆಪಿಸಿಸಿ ವೀಕ್ಷಕ ಶ್ರೀನಿವಾಸ ಹಳ್ಳಳ್ಳಿ, ಶಿಗ್ಗಾಂವಿ ಉಸ್ತುವಾರಿ ವಸಂತ ಲದ್ವಾ, ಶಿಗ್ಗಾಂವಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಪುರಸಭೆ ಸದಸ್ಯರಾದ ಅದ್ದು ಫರಾಶ, ಅಜೀಂ ಮಿರ್ಜಾ, ಫಜಲ್‌ ಅಹ್ಮದ ಪಠಾಣ, ಸೋಪಿಯಾ ಚೂಡಿಗಾರ, ನನ್ನೆಮಿಯಾ ಚೋಪದಾರ, ವೀರಯ್ಯ ಕಲ್ಮಠ, ರವಿ ಲಮಾಣಿ ಹಾಗೂ ಇತರರು ಪಾಲ್ಗೊಂಡಿದ್ದರು.

Karnataka Politics: 2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್‌: ಸಿದ್ದು

ಚುನಾವಣೆಗೆ ಸ್ಪರ್ಧಿಸಲು ಸಿದ್ಧ:

ಬ್ಯಾಡಗಿ: ಪಕ್ಷ ಸೂಚಿ​ಸಿ​ದರೆ ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ(Karnataka Assembly Election) ರಾಜ್ಯ​ದ ಯಾವು​ದೇ ಕ್ಷೇತ್ರ​ದಿಂದ ಸ್ಪರ್ಧಿ​ಸಲು ಸಿದ್ಧ ಎಂದು ಮಾಜಿ ಸಚಿವೆ, ಚಿತ್ರನಟಿ ಜಯಮಾಲಾ ಹೇಳಿ​ದ್ದಾ​ರೆ. ಶುಕ್ರ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ನಾನೊಬ್ಬಳು ಕಲಾವಿದೆ. ರಾಜ್ಯದ(Karnataka) 224 ಕ್ಷೇತ್ರಗಳಲ್ಲಿಯೂ ಚಿರಪರಿಚಿತಳಾಗಿದ್ದೇನೆ. ಆದರೆ, ನನ್ನದೂ ಅಂತ ಯಾವುದೇ ವಿಧಾನಸಭಾ ಕ್ಷೇತ್ರವಿಲ್ಲ. ಒಂದು ವೇಳೆ ಪಕ್ಷ ಸೂಚಿಸಿದರೆ ರಾಜ್ಯದ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಲು ಸಿದ್ಧ ಎಂದರು.

ಪ್ರತಿ​ಪ​ಕ್ಷ​ಗ​ಳಿಗೆ ತಿರು​ಗೇ​ಟು​: 

ಕಾಂಗ್ರೆ​ಸ್‌​ನಲ್ಲಿನ ನಾಯ​ಕತ್ವ ವಿಚಾ​ರ​ವಾ​ಗಿ ಪ್ರತಿ​ಕ್ರಿ​ಯಿ​ಸಿದ ಅವರು, ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿಲ್ಲ. ಕೇವಲ ಕಾಂಗ್ರೆಸ್‌ಗೇಕೆ ಈ ಪ್ರಶ್ನೆ? ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಾರ‍ಯಯ ನಾಯಕತ್ವದ ಪ್ರಶ್ನೆಯೇ ಇಲ್ಲ, ನಾಲ್ಕನೇ ತಲೆಮಾರಿಗೂ ಪಕ್ಷ ನಡೆಸುವ ಸಮರ್ಥರಿದ್ದಾರೆ ಎಂಬುದೇ ಕಾಂಗ್ರೆಸ್‌ಗೆ ಹೆಮ್ಮೆಯ ವಿಚಾರ ಎಂದು ತಿರುಗೇಟು ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ