ಬೊಮ್ಮಾಯಿ ಸರ್ಕಾರದ ವಿರುದ್ಧವೇ ಛಾಟಿ ಬೀಸಿದ ಯತ್ನಾಳ್‌..!

By Girish Goudar  |  First Published Mar 26, 2022, 5:55 AM IST

*  ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಕ್ಕೆ ಇನ್ನೂ ಎಷ್ಟು ಶತಮಾನ ಬೇಕು
*  ವಿಜಯಪುರ ಜಿಲ್ಲೆಯ ಜನರಿಗೆ ಜಮೀನಿಗೆ ನೀಡುವ ಪರಿಹಾರದಲ್ಲೂ ಅನ್ಯಾಯ
*  ಬಾಕಿ ಬಿಲ್ಲುಗಳ ಮೊತ್ತವೇ 10 ಸಾವಿರ ಕೋಟಿ ರು. ಇದೆ


ಬೆಂಗಳೂರು(ಮಾ.26):  ಬಜೆಟ್‌ನಲ್ಲಿ ಕೆಲಸಕ್ಕೆ ಬಾರದ ಹಾಗೂ ಜನಪ್ರಿಯ ಯೋಜನೆಗಳಿಗೆ ಬೇಕಾಬಿಟ್ಟಿ ಹಣ ಮೀಸಲಿಡುವ ಬದಲು ಕೃಷ್ಣಾ ಮೇಲ್ದಂಡೆ ಯೋಜನೆಗೆ 15 ಸಾವಿರ ಕೋಟಿ ರು. ನೀಡಬೇಕು. ಕಾಂಗ್ರೆಸ್‌ನಂತೆ ನೀವೂ ಅನ್ಯಾಯ ಮಾಡಿದರೆ ನಮ್ಮನ್ನೂ ಜನರು ಕ್ಷಮಿಸುವುದಿಲ್ಲ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟಿಲ್‌ ಯತ್ನಾಳ್‌(Basanagaouda Patil Yatnal) ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.

ಶುಕ್ರವಾರ ಬಜೆಟ್‌(Karnataka Budget) ಬೇಡಿಕೆಗಳ ಬಗ್ಗೆ ಚರ್ಚಿಸಿದ ಅವರು, ಕಾಂಗ್ರೆಸ್‌ನವರು(Congress) ಪಾದಯಾತ್ರೆ ನಡೆಸಿ ಕೃಷ್ಣಾ ಮೇಲ್ದಂಡೆಗೆ ವರ್ಷಕ್ಕೆ 10 ಸಾವಿರ ಕೋಟಿ ರು. ನೀಡುವುದಾಗಿ ಹೇಳಿದ್ದರು. ಆದರೆ 5 ವರ್ಷದಲ್ಲಿ ಬರಿ 7,700 ಕೋಟಿ ರು. ಖರ್ಚು ಮಾಡಿದ್ದರು. ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ಚುನಾವಣೆಗೆ ಮೊದಲು ಪ್ರತಿ ವರ್ಷ 25 ಸಾವಿರ ಕೋಟಿ ರು. ನೀಡುವುದಾಗಿ ಹೇಳಿದ್ದರು, ಆದರೆ ನೀಡಿಲ್ಲ. ಈಗಲೂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೇವಲ 5 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಒದಗಿಸಿದ್ದಾರೆ. ಬಾಕಿ ಬಿಲ್ಲುಗಳ ಮೊತ್ತವೇ 10 ಸಾವಿರ ಕೋಟಿ ರು. ಇದೆ. ಹೀಗಾದರೆ ಎಷ್ಟು ಶತಮಾನಗಳಿಗೆ ಯೋಜನೆ ಪೂರ್ಣಗೊಳಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. 

Latest Videos

undefined

Basanagouda Patil Yatnal ಅವ್ರ ಕಾಲ್ ಹಿಡ್ಕೊಂಡು ರಾಜೀನಾಮೆ ಕೊಡ್ಬೇಡಿ ಅಂತಾ ಬೇಡ್ಕೋತಾರೆ!

ಕೃಷ್ಣಾ ಮೇಲ್ದಂಡೆ ಯೋಜನೆ(Upper Krishna Project ) ಹೆಸರಿನಲ್ಲಿ ಸಾವಿರಾರು ಕೋಟಿ ರು. ಲೂಟಿ ಆಗುತ್ತಿದೆ. ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತಕ್ಕೆ ಟೆಂಡರ್‌ ವಹಿಸಿ ಭ್ರಷ್ಟಾಚಾರ(Corruption) ನಡೆಸಲಾಗುತ್ತಿದೆ. ಇನ್ನಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪ್ರತ್ಯೇಕ ಯೋಜನೆ ರೂಪಿಸಿ ಕೃಷ್ಣಾ ಮೇಲ್ದಂಡೆ 3ನೇ ಹಂತವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಜಯಪುರ(Vijayapura) ಜಿಲ್ಲೆಯ ಜನರಿಗೆ ಜಮೀನಿಗೆ ನೀಡುವ ಪರಿಹಾರದಲ್ಲೂ ಅನ್ಯಾಯ ಮಾಡಲಾಗುತ್ತಿದೆ. ನಮ್ಮ ಭಾಗದ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಸಚಿವರಾಗಿದ್ದರೂ ನಮಗೆ ಅನ್ಯಾಯವಾಗುತ್ತಿದೆ. ಸರ್ಕಾರ ಕೂಡಲೇ ಸ್ಪಂದಿಸಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯನ್ನು ವಿಶೇಷ ಪ್ಯಾಕೇಜ್‌ ಮಾಡಿ ಕನಿಷ್ಠ 15 ಸಾವಿರ ಕೋಟಿ ರು. ಮೀಸಲಿಡಬೇಕು. ಇಲ್ಲದಿದ್ದರೆ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಯಡಿಯೂರಪ್ಪಗೆ ವಯಸ್ಸಾಗಿದೆ ಎನ್ನುತ್ತಲೇ ಬೊಮ್ಮಾಯಿಗೂ ಟಾಂಗ್ ಕೊಟ್ಟ ಬಿಜೆಪಿ ಶಾಸಕ

ವಿಜಯಪುರ: ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪಗೆ ಶಾಸಕ ಬಸನಗೌಡ ಯತ್ನಾಳ್ ಟಾಂಗ್‌ ಕೊಟ್ಟಿದ್ದರು. 

ನಾನು ಸಿಎಂ ಆದರೆ 20 ವರ್ಷ ಕಾಂಗ್ರೆಸ್‌ ಗೆಲ್ಲಲ್ಲ ಎಂದ ಯತ್ನಾಳ್‌

ಮಾ.13 ರಂದು ವಿಜಯಪುರದ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯತ್ನಾಳ್, ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು. ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ. ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿಗೆ 100-104 ಸೀಟ್‌ ಬರುತ್ತಿತ್ತು. ಪಕ್ಷದಲ್ಲಿ ಸೆಕೆಂಡ್ ಲೈನ್ ಲೀಡರ್ ಶಿಪ್ ಬಂದಿದೆ. ನಾವೆಲ್ಲಾ ಸೇರಿ 130 ಸೀಟ್ ದಾಟಿಸುತ್ತೇವೆ ಎಂದು ಹೇಳಿದ್ದರು. 
ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ದೆಹಲಿಯ ಮಟ್ಟದಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸುಳಿವಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ತಾರೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಯತ್ನಾಳ್ ತಿಳಿಸಿದ್ದರು. 

ಸಿಎಂ ಬಸವರಾಜ ಬೊಮ್ಮಾಯಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಯತ್ನಾಳ್ ಪ್ರತಿಕ್ರಿಯಿಸಿದ್ದು, ಬಿಜೆಪಿಯಲ್ಲಿ ಒಬ್ಬರಿಗೆ ಎರಡು ಕ್ಷೇತ್ರಗಳಿಗೆ ಟಿಕೆಟ್ ಕೊಡಲ್ಲ. ಮೋದಿಗೆ ಒಮ್ಮೆ 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದರು. ಇದನ್ನು ಬಿಟ್ಟರೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಸಿಎಂ ಬೊಮ್ಮಾಯಿ ಸಹ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಒಂದೇ ಕುಟುಂಬದವರು ಸಂಸದ, ಶಾಸಕ, ಜಿ.ಪಂ ಅಧ್ಯಕ್ಷರಾದ್ರೆ ಇವರ ಮನೆ ಮುಂದೆ ಕಾರ್ಯಕರ್ತರು ಗಂಟೆ ಹೊಡೆಯಬೇಕಾ? ಎಂದು ಪ್ರಶ್ನಿಸಿದ್ದರು. 
 

click me!