ಮಂಗಳಕರವಾದ ಕುಂಕುಮ ಬೇಡ ಅನ್ನುವವರು ಹಿಂದೂವಾ?; ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಕಿಡಿ

By Ravi JanekalFirst Published Feb 3, 2024, 11:14 AM IST
Highlights

ಹಿಂದೂಗಳು ಯಾರೂ ಕುಂಕುಮ ಬೇಡ, ವಿಭೂತಿ ಬೇಡ ಅನ್ನೊಲ್ಲ. ಕುಂಕುಮ ಬೇಡ ಅನ್ನುವವರು ಹಿಂದೂವಾ? ಎಂದು ಪ್ರಶ್ನಿಸುವ ಮೂಲಕ ಕುಂಕುಮ ಬೇಡ ಎಂದ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಿಟಿ ರವಿ ಕಿಡಿಕಾರಿದರು.

ಬೆಂಗಳೂರು (ಫೆ.3): ಹಿಂದೂಗಳು ಯಾರೂ ಕುಂಕುಮ ಬೇಡ, ವಿಭೂತಿ ಬೇಡ ಅನ್ನೊಲ್ಲ. ಕುಂಕುಮ ಬೇಡ ಅನ್ನುವವರು ಹಿಂದೂವಾ? ಎಂದು ಪ್ರಶ್ನಿಸುವ ಮೂಲಕ ಕುಂಕುಮ ಬೇಡ ಎಂದ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಿಟಿ ರವಿ ಕಿಡಿಕಾರಿದರು.

ಇಂದು ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಮಾಜಿ ಸಚಿವ ಸಿಟಿ ರವಿ,  ಕುಂಕುಮ ಮಂಗಳಕರವಾಗಿದೆ. ಹಾಗಿದ್ರೆ ಮಂಗಳಕರವಾಗಿರೋದು ಯಾವುದೂ ಇವರಿಗೆ‌ ಬೇಡ್ವಾ? ಅಮಂಗಳಕರವಾಗಿರೋದೇ‌ ಬೇಕಾ? ಎಂದು ಪ್ರಶ್ನಿಸಿದರು.

Latest Videos

ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ‌ ದೇವಾಲಯ ತೊಳೆದ್ರು ; ಜಾತಿ ವ್ಯವಸ್ಥೆ ಬಗ್ಗೆ ಈಶ್ವರಾನಂದಪುರಿಶ್ರೀ ಬೇಸರ

ಇನ್ನು ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸುಧೀರ್ಘ ಚರ್ಚೆ ಆಗಿದೆ. 7 ರಿಂದ 8 ಅಭ್ಯರ್ಥಿಗಳ ಹೆಸರು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಅಂತಿಮವಾಗಿ ಹೈಕಮಾಂಡ್ ನಾಯಕರ ಜೊತೆ ರಾಜ್ಯಾಧ್ಯಕ್ಷರು ಚರ್ಚೆ ಮಾಡಲಿ ಎಂದು ಕೋರ್ ಕಮಿಟಿಯಲ್ಲಿ ತೀರ್ಮಾನ ಆಗಿದೆ ಎಂದು ತಿಳಿಸಿದರು.

ರಾಜ್ಯಸಭೆ ಎರಡನೇ ಸೀಟು ಪಡೆಯಲು ಒಟ್ಟು 62 ಮತಗಳು ಬೇಕಾಗುತ್ತವೆ. ಬಿಜೆಪಿ - ಜೆಡಿಎಸ್ ಸೇರಿದ್ರೆ 85-86 ಮತಗಳು ಆಗುತ್ತವೆ. ಇನ್ನೂ ಆರು ಮತಗಳು ಕೊರತೆ ಬೀಳುತ್ತವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಜೊತೆ ಸಮಾಲೋಚನೆ ಮಾಡಿ. ಎರಡನೇ ಅಭ್ಯರ್ಥಿ ಹಾಕಬೇಕಾ ಬಿಡಬೇಕಾ? ಮೊದಲ ಅಭ್ಯರ್ಥಿ ಸಂಬಂಧಿಸಿದಂತೆ ಏನು ಮಾಡಬೇಕು, ಇದೆಲ್ಲದರ ಬಗ್ಗೆ ಚರ್ಚಿಸಿ ನಿರ್ಣಯ ಮಾಡುವ ಅಧಿಕಾರ ವನ್ನು ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ: ಗೆಲ್ಲುವ ಅಭ್ಯರ್ಥಿಗಳನ್ನ ಹುಡುಕುವುದು ಪಕ್ಷಕ್ಕೆ ದೊಡ್ಡ ಸವಾಲು -ಸತೀಶ್ ಜಾರಕಿಹೊಳಿ

ಇನ್ನು ಫೆಬ್ರವರಿ 7 ರಂದು ಕಾಂಗ್ರೆಸ್ ಹೋರಾಟ ಹಿನ್ನೆಲೆ ಅದೇ ದಿನವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಲಾಗಿದೆ. ವಿಧಾನಸೌಧಧ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲು ಮುಂದಾಗಿರುವ ಬಿಜೆಪಿ. ಅಂದು ಸದನದೊಳಗೆ ಹೋರಾಟ ನಡೆಸಲು ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

click me!