ನಡುಕ ಏನಿದ್ದರು ಡಿಕೆಶಿ ಮತ್ತವರ ಪಕ್ಷಕ್ಕೆ: ಅಶ್ವತ್ಥ ನಾರಾಯಣ

By Kannadaprabha News  |  First Published Sep 7, 2023, 12:30 AM IST

ಇಡೀ ವಿಶ್ವದಲ್ಲಿ ತಾಯಿ ಸ್ಥಾನದಲ್ಲಿರುವುದು ನಮ್ಮ ಸನಾತನ ಧರ್ಮ. ವೇದ ಉಪನಿಷತ್ತುಗಳಲ್ಲಿ ಸನಾತನ ಧರ್ಮ ಯಾವ ರೀತಿ ಹುಟ್ಟಿತು ಅನ್ನೋ ಇತಿಹಾಸ ಇದೆ. ಅವರ ಹೆಸರು ಪರಮೇಶ್ವರ್‌. ಅವರ ಹೆಸರು ಎಲ್ಲಿಂದ ಬಂತು ಎಂಬುದಕ್ಕೆ ಅವರನ್ನೇ ಕೇಳಬೇಕು ಎಂದ ಮಾಜಿ ಸಚಿವ ಅಶ್ವತ್ಥ ನಾರಾಯಣ 


ರಾಮನಗರ(ಸೆ.07):  ‘ನೀವೇ ನೋಡಿದ್ದೀರಾ, ನಡುಕ ಯಾರಿಗೆ ಆಗುತ್ತಿತ್ತು ಅಂತ. ಅವರೇ ತೂರಾಡಿಕೊಂಡು ನಡೆಯುತ್ತಿದ್ದರು. ನಡುಕ ಏನಿದ್ದರು ಅವರಿಗೆ ಮತ್ತು ಅವರ ಪಕ್ಕಕ್ಕೆ, ನಮಗಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಮಾಜಿ ಸಚಿವ ಅಶ್ವತ್ಥ ನಾರಾಯಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

ಇಂಡಿಯಾ ಕೂಟದಿಂದಾಗಿ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನೀವೇ ನೋಡಿದ್ದೀರಾ, ನಡುಕ ಯಾರಿಗೆ ಆಗುತ್ತಿತ್ತು ಅಂತ. ನೀವೇ ನೋಡಿದ್ದೀರಲ್ಲ, ತೂರಾಡಿಕೊಂಡು ನಡಿತಿದ್ದರು. ಎಲ್ಲರ ಮನೆ ಬಾಗಿಲಿಗೆ ಹೋಗಿ ನಮ್ಮ ಜೊತೆಗೆ ಬನ್ನಿ ಅನ್ನೋ ಹಾಗಿದೆ. ಅವರ ಹೇಳಿಕೆ ಕಾಮಿಡಿ ಆಗಿದೆ. ನಡುಕ ಎಲ್ಲಾ ಅವರಿಗೆ, ಅವರ ಪಕ್ಷಕ್ಕಿದೆ ನಮಗಲ್ಲ’ ಎಂದು ತಿರುಗೇಟು ನೀಡಿದರು. 

Tap to resize

Latest Videos

15 ಶಾಸಕರಿಗೆ ಮಾತ್ರ ನಿಗಮ ಅಧ್ಯಕ್ಷಗಿರಿ, 2.5 ವರ್ಷ ಮಾತ್ರ ಅಧಿಕಾ​ರಾವಧಿ: ಡಿಕೆಶಿ

ಡಿಕೆ ಸಹೋದರರು ಕಳ್ಳ ಮಾರ್ಗದಲ್ಲಿ ಕನಕಪುರಕ್ಕೆ ಮೆಡಿಕಲ್‌ ಕಾಲೇಜು ಸ್ಥಳಾಂತರ ಮಾಡಿದ್ದಾರೆ. ಕಾಲೇಜು ಸ್ಥಳಾಂತರ ವಿರೋಧಿಸಿ ಸೆ.8ರಂದು ನಡೆಯಲಿರುವ ರಾಮನಗರ ಬಂದ್‌ ಮಾತ್ರವಲ್ಲ, ಎಲ್ಲ ಹೋರಾಟಕ್ಕೂ ನಮ್ಮ ಬೆಂಬಲವಿದೆ ಎಂದು ಅವರು ಹೇಳಿದರು.

ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂಬ ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಇಡೀ ವಿಶ್ವದಲ್ಲಿ ತಾಯಿ ಸ್ಥಾನದಲ್ಲಿರುವುದು ನಮ್ಮ ಸನಾತನ ಧರ್ಮ. ವೇದ ಉಪನಿಷತ್ತುಗಳಲ್ಲಿ ಸನಾತನ ಧರ್ಮ ಯಾವ ರೀತಿ ಹುಟ್ಟಿತು ಅನ್ನೋ ಇತಿಹಾಸ ಇದೆ. ಅವರ ಹೆಸರು ಪರಮೇಶ್ವರ್‌. ಅವರ ಹೆಸರು ಎಲ್ಲಿಂದ ಬಂತು ಎಂಬುದಕ್ಕೆ ಅವರನ್ನೇ ಕೇಳಬೇಕು ಎಂದರು.

click me!