ಬಿಟ್ಟು ಬಿಡದೇ ಕೆಲಸದಿಂದ ನನಗೆ ಪುರುಸೊತ್ತು ಸಿಗುತ್ತಿಲ್ಲ. ಈ ಕೋಲ್ಡ್ ವಾರ್ ಹಾಟ್ ವಾರ್ ನನಗೇನೂ ಗೊತ್ತಿಲ್ಲ. ಬೇಕಾದರೆ ನೀವು ಸತೀಶ್ ಜಾರಕಿಹೊಳಿ ಅವರನ್ನು ಒಮ್ಮೆ ಕೇಳಿ ಎಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ(ಸೆ.06): ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಮ್ಮ ನಡುವೆ ಯಾವುದೇ ವಾರ್ ಇಲ್ಲ. ಈ ಕೋಲ್ಡ್ ವಾರ್, ಹಾಟ್ ವಾರ್ ನನಗೇನೂ ಗೊತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚರ್ಚೆ ನೋಡಿ ನನಗೆ ವಿಚಿತ್ರ ಎನಿಸುತ್ತದೆ. ಕೋಲ್ಡ್ ವಾರ್, ಹಾಟ್ ವಾರ್ ಎಂದರೇನು? ಈ ಕೋಲ್ಡ್ ವಾರ್ ಬಗ್ಗೆ ನನಗೇನೂ ತಿಳಿಯುತ್ತಿಲ್ಲ. ನನಗೆ ಮೊದಲು ಬಿಡಿಸಿ ಹೇಳಿ ಎಂದರು.
ಬೆಳಗಾವಿ: ಉನ್ನತ ಅಧಿಕಾರಿ ಮಗಳಿಗೆ ಅಪ್ಪನ ಹೆಮ್ಮೆಯ ಸೆಲ್ಯೂಟ್..!
ನಾನು ಉಡುಪಿ ಜಿಲ್ಲಾ ಉಸ್ತುವಾರಿ, ರಾಜ್ಯದ ಸಚಿವೆ. ನನ್ನ ಮೇಲೆ ದೊಡ್ಡ ಜವಾದ್ಬಾರಿ ಇದೆ. 36 ಸಾವಿರ ಕೋಟಿ ಹಣ ಮಹಿಳೆಯರಿಗೆ ಕೊಡಬೇಕು. ಬಹಳಷ್ಟು ಅಳೆದು ತೂಗಿ ನಾನು ಸಚಿವೆ ಆಗಿ ಹೆಜ್ಜೆ ಇಡುತ್ತಿದ್ದೇನೆ. ಅಲ್ಲದೆ ಉಡುಪಿ ಜಿಲ್ಲೆ ಕೂಡ ರಾಜ್ಯದಲ್ಲಿ ಸದಾ ಹಾಟ್ ಇರುವ ಜಿಲ್ಲೆ. ಬಿಟ್ಟು ಬಿಡದೇ ಕೆಲಸದಿಂದ ನನಗೆ ಪುರುಸೊತ್ತು ಸಿಗುತ್ತಿಲ್ಲ. ಈ ಕೋಲ್ಡ್ ವಾರ್ ಹಾಟ್ ವಾರ್ ನನಗೇನೂ ಗೊತ್ತಿಲ್ಲ. ಬೇಕಾದರೆ ನೀವು ಸತೀಶ್ ಜಾರಕಿಹೊಳಿ ಅವರನ್ನು ಒಮ್ಮೆ ಕೇಳಿ ಎಂದರು.