ಕಾಂಗ್ರೆಸ್‌ ಸರ್ಕಾರ ಕೆಡವಲು 90 ಶಾಸಕರು ಹೊರಗೆ ಬರಬೇಕು ಅದು ಸಾಧ್ಯನಾ?: ಬಿ.ಸಿ. ಪಾಟೀಲ್‌

Published : Sep 01, 2024, 05:35 PM IST
ಕಾಂಗ್ರೆಸ್‌ ಸರ್ಕಾರ ಕೆಡವಲು 90 ಶಾಸಕರು ಹೊರಗೆ ಬರಬೇಕು ಅದು ಸಾಧ್ಯನಾ?: ಬಿ.ಸಿ. ಪಾಟೀಲ್‌

ಸಾರಾಂಶ

ಗ್ಯಾರಂಟಿಗಳನ್ನು ಹೇಳಿಕೊಂಡು ಬಂದು ಅದನ್ನು ಕೂಡಾ ಸರಿಯಾಗಿ ಕೊಡುತ್ತಿಲ್ಲ. ಎಲ್ಲಾ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಏನು ಅಭಿವೃದ್ಧಿ ಮಾಡಿಲ್ಲ. ನಿಮ್ಮ ಹಗರಣಗಳನ್ನ ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಮುಡಾ ಹಗರಣ ಕೋರ್ಟ್ ನಲ್ಲಿ ನಾಳೆ ತೀರ್ಪು ಬರುತ್ತದೆ: ಮಾಜಿ ಸಚಿವ ಬಿ.ಸಿ. ಪಾಟೀಲ್  

ದಾವಣಗೆರೆ(ಸೆ.01): ಸರ್ಕಾರ ಬದಲಾವಣೆ ಆಗಿ ಒಂದು ವರ್ಷ ನಾಲ್ಕು ತಿಂಗಳಾದ ಮೇಲೆ ಈಗ ಬಿಜೆಪಿ ಹಗರಣದ ಬಗ್ಗೆ ಮಾತನಾಡುತ್ತಾರೆ. ಇಷ್ಟ ದಿನ ಏನ್ ಮಾಡ್ತಾ ಇದ್ರಿ ಎಂದು ಕಾಂಗ್ರೆಸ್‌ ನಾಯಕರಿಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್ ಅವರು, ನೀವು ಆ ಸಂದರ್ಭದಲ್ಲಿ ವಿರೋಧಪಕ್ಷದಲ್ಲಿದ್ದರು ಸುಮ್ಮನೆ ಯಾಕೇ ಇದ್ರಿ. ಹಗರಣದಲ್ಲಿ ನಿಮಗೆ ಕೂಡ ಏನಾದರೂ ಪಾಲು ಇದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ಆಗ ಸುಮ್ಮನೆ ಕೂತುಕೊಂಡು ಈಗ ಮಾತನಾಡುತ್ತಿರೀ ಎಂದರೆ ಹೇಗೆ?  ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 

ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಕೇವಲ ಬುದ್ಧಿವಂತಿಕೆ ಪ್ರದರ್ಶನ : ಕೋಡಿಹಳ್ಳಿ ಕಿಡಿ

ಕೋವೀಡ್ ಹಗರಣದ ವರದಿ ಕೈ ಸೇರಿದೆ ಎಂದು ಹೇಳುತ್ತೀರಿ ಅದನ್ನು ಬಿಚ್ಚಿ ಇಡ್ತಿರೋ ಹೊರಗೆ ಇಡ್ತಿರೋ ಒಟ್ಟು ತನಿಖೆ ಮಾಡಿ. ಕಾನೂ‌ನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲಾರೂ ಕಾನೂನಿನ ಅಧೀನರು. ಕಾನೂನಿನ ಮೂಲಕ ತನಿಖೆ ಮಾಡಿ ಕಾನೂನಿನ ಪ್ರಕಾರ ಶಿಕ್ಷೇ ಆಗಲಿ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಅವರಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾರೆ. ಈ ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ ಯಾವುದೇ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಗ್ಯಾರಂಟಿಗಳನ್ನು ಹೇಳಿಕೊಂಡು ಬಂದು ಅದನ್ನು ಕೂಡಾ ಸರಿಯಾಗಿ ಕೊಡುತ್ತಿಲ್ಲ. ಎಲ್ಲಾ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಏನು ಅಭಿವೃದ್ಧಿ ಮಾಡಿಲ್ಲ. ನಿಮ್ಮ ಹಗರಣಗಳನ್ನ ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಮುಡಾ ಹಗರಣ ಕೋರ್ಟ್ ನಲ್ಲಿ ನಾಳೆ ತೀರ್ಪು ಬರುತ್ತದೆ ಎಂದಿದ್ದಾರೆ. 

ಸ್ವಯಂಕೃತ ತಪ್ಪುಗಳಿಂದ ತಾನಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪತನ: ಎಂ.ಪಿ.ರೇಣುಕಾಚಾರ್ಯ ಭವಿಷ್ಯ

ಸರ್ಕಾರ ಕೆಡವಲು ಬಿಜೆಪಿ- ಜೆಡಿಎಸ್ ಹುನ್ನಾರ ಮಾಡುತ್ತಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಬಿ.ಸಿ.ಪಾಟೀಲ್‌ ಅವರು, ಇದು ಹುಚ್ಚರ ಸಂತೆ, ಮೂರ್ಖರ ಪರಮಾವಧಿ ಯಾರಾದರೂ 136 ಸೀಟ್ ಇರೋ ಸರ್ಕಾರ ಕೆಡವಲು ಸಾಧ್ಯ ಇದ್ಯಾ. ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೊಂಡು ಇರೋದು, ಅಂತಹ ಅವಶ್ಯಕತೆ ನಮಗೆ ಇಲ್ಲ. ಇನ್ನೂ ಮೂರು ವರ್ಷ ಕಾಯುತ್ತೇವೆ. ಇವರೇ ಸರ್ಕಾರ ಬೀಳಿಸಿಕೊಂಡಾಗ ಜನರ ಮುಂದೆ ಹೋಗಿ ಜನರಿಂದ ಆಯ್ಕೆಯಾಗಿ ಸರ್ಕಾರ ರಚನೆ ಮಾಡುತ್ತೇವೆ. ಅದನ್ನ ಬಿಟ್ಟು ಈ ಕಿಚಡಿ ಸರ್ಕಾರವನ್ನು ಮಾಡೋಕೆ ಹೋಗುವುದಿಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ. 

ತಮ್ಮ ಬೆಲೆಯನ್ನೇ ತಾವು ಬೆಲೆ ಕಟ್ಟಿಕೊಳ್ಳುವ ಕೆಲಸ ಕಾಂಗ್ರೆಸ್ ಶಾಸಕರು ಮಾಡುತ್ತಿದ್ದಾರೆ. ಆಗ ಹತ್ತು ಜನರು ಹೊರ ಬಂದಿದ್ದಕ್ಕೆ ಸರ್ಕಾರ ರಚನೆ ಆಯ್ತು. ಈಗ ಸರ್ಕಾರ ಮಾಡಬೇಕು ಎಂದರೆ 90 ಜನ ಶಾಸಕರು ಹೊರಗೆ ಬರಬೇಕು ಅದು ಸಾಧ್ಯನಾ?. ಈಗ ಸರ್ಕಾರ ವೈಫಲ್ಯವಾಗಿದ್ದರಿಂದ ಜನರು ಹೋದ ಕಡೆ ಕೇಳುತ್ತಿದ್ದಾರೆ. ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಜನರು ಕೇಳುತ್ತಿದ್ದಾರೆ. ಜನರ ಮೈಂಡ್ ಬೇರೆ ಕಡೆ ಸೆಳೆಯಲು ವಾರಕ್ಕೊಂದು ಕಾರಣ ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್