ಮೈತ್ರಿ ಪಕ್ಷದ್ದು ಏನಾಯ್ತಂತೆ, ಯಾರಿಗಾಯ್ತಂತೆ.?. ಕಾಂಗ್ರೆಸ್ ನಿಂದ ನಾನೇ ಕ್ಯಾಂಡೇಟ್, ನಾನೇ ಭಿ ಫಾಮ್. ಸುರೇಶ್ ಸ್ಪರ್ಧೆಗೆ ಒತ್ತಡ ಹಾಕ್ತಿದ್ದಾರೆ ನೋಡೊಣ. ನಾನು ಯಾರದ್ದೋ ಮಾತುಗಳ ಕೇಳಿ ತೀರ್ಮಾನ ಮಾಡಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಅಭ್ಯರ್ಥಿ ಆಯ್ಕೆ ಆಗುತ್ತೆ. ನಮ್ಮ ಪಕ್ಷದ ಸಿದ್ಧತೆ ಏನು ಬೇಕೋ ಅದು ಆಗ್ತಿದೆ. ಕ್ಷೇತ್ರದ ಕಾರ್ಯಕರ್ತರು ಯಾವುದಕ್ಕೂ ತಲೆಕೆಡಿಸಿಕೊಳ್ಳೊದು ಬೇಡ. ಎಲ್ಲರೂ ಸಂಘಟನೆ ಬಗ್ಗೆ ಗಮನಹರಿಸಬೇಕು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಕನಕಪುರ(ಸೆ.01): ಪ್ರತಿ ತಿಂಗಳ ಎರಡನೇ ಮತ್ತು ಕೊನೆಯ ಶನಿವಾರ ಜನಸಂದರ್ಶನ ಸಭೆ ನಡೆಸಲು ನಿರ್ಧರಿಸಿದ್ದೇನೆ. ಅದರಂತೆ ನಿನ್ನೆ ಜನಸ್ಪಂದನಾ ಸಭೆ ಮಾಡಬೇಕಿತ್ತು. ಆದರೆ ರಾಜಭವನ ಚಲೋ ಇದ್ದಿದ್ದರಿಂದ ಇಂದು ಜನಸ್ಪಂದನಾ ಸಭೆ ಮಾಡ್ತಿದ್ದೇನೆ. ನಮ್ಮ ಜಿಲ್ಲೆಯ ಜನ ಬೆಂಗಳೂರಿಗೆ ಬಂದು ಕಾಯುವುದನ್ನ ತಪ್ಪಿಸಬೇಕು. ಹಾಗಾಗಿ ನಾನೇ ಇಲ್ಲಿಗೆ ಬಂದು ಇವರ ಸಮಸ್ಯೆ ಆಲಿಸುತ್ತಿದ್ದೇನೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತಿದ್ದೇನೆ. ಮನೆ, ನಿವೇಶನ, ರಸ್ತೆ, ನೀರು ಸೇರಿ ಮೂಲಭೂತ ಸಮಸ್ಯೆಗಳ ಬಗ್ಗೆ ದೂರು ಬಂದಿದೆ. ಎಲ್ಲವನ್ನೂ ಬಗೆಹರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕೆಲ ಗ್ರಾಮಗಳಲ್ಲಿ ಬಣಗಳ ಬಡುವೆ ಈಗೋ ಪ್ರಾಬ್ಲಂ ಹಾಗಾಗಿ ಸಮಸ್ಯೆ ಉಂಟಾಗ್ತಿದೆ. ಎಲ್ಲರನ್ನೂ ಕೂರಿಸಿ ಬಗೆಹರಿಸುವ ಕೆಲಸ ಮಾಡ್ತೇವೆ. ಜೊತೆಗೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ಸಾಕಷ್ಟು ನಾಶ ಮಾಡ್ತಿವೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಮಾತನಾಡಿದ್ದೇನೆ. ರೈಲ್ವೆ ಬ್ಯಾರಿಕೇಡ್ ಮೂಲಕ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬರದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.
undefined
'ಪತ್ರಕರ್ತರು ಸರ್ಕಾರದ ಕಣ್ತೆರೆಸಬೇಕು, ಬದಲಾವಣೆಗೆ ಕಾರಣರಾಗಬೇಕು': ಡಿಕೆ ಶಿವಕುಮಾರ್
ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಗ್ಗೆ ಮಾಧ್ಯಮದಲ್ಲಿ ಗಮನಿಸಿದ್ದೇನೆ. ಸಂಬಂಧ ಪಟ್ಟ ಸಚಿವರು ಅದರ ಬಗ್ಗೆ ಕ್ರಮವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಮೈತ್ರಿ ಪಕ್ಷದ್ದು ಏನಾಯ್ತಂತೆ, ಯಾರಿಗಾಯ್ತಂತೆ.?. ಕಾಂಗ್ರೆಸ್ ನಿಂದ ನಾನೇ ಕ್ಯಾಂಡೇಟ್, ನಾನೇ ಭಿ ಫಾಮ್. ಸುರೇಶ್ ಸ್ಪರ್ಧೆಗೆ ಒತ್ತಡ ಹಾಕ್ತಿದ್ದಾರೆ ನೋಡೊಣ. ನಾನು ಯಾರದ್ದೋ ಮಾತುಗಳ ಕೇಳಿ ತೀರ್ಮಾನ ಮಾಡಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಅಭ್ಯರ್ಥಿ ಆಯ್ಕೆ ಆಗುತ್ತೆ. ನಮ್ಮ ಪಕ್ಷದ ಸಿದ್ಧತೆ ಏನು ಬೇಕೋ ಅದು ಆಗ್ತಿದೆ. ಕ್ಷೇತ್ರದ ಕಾರ್ಯಕರ್ತರು ಯಾವುದಕ್ಕೂ ತಲೆಕೆಡಿಸಿಕೊಳ್ಳೊದು ಬೇಡ. ಎಲ್ಲರೂ ಸಂಘಟನೆ ಬಗ್ಗೆ ಗಮನಹರಿಸಬೇಕು. ನಾವೆಲ್ಲಾ ಒಂದೊಂದು ಹೋಬಳಿ ಹಂಚಿಕೊಂಡು ಜನರ ಸೇವೆ ಮಾಡ್ತೀವಿ. ಯಾರೇ ಕ್ಯಾಂಡೇಟ್ ಆಗಲಿ, ನಾನೇ ಅಭ್ಯರ್ಥಿ. ನನ್ನ ಮುಖ ನೋಡಿ ಜನರು ಓಟ್ ಹಾಕಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಉದ್ಯೋಗ ಮೇಳ, ನಿವೇಶನ ಹಂಚಿಕೆ, ಮನೆ ಹಂಚಿಕೆ ಮಾಡ್ತಿವಿ. ಮುಂದಿನ ವಾರ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳಿಗೆ ಚಾಲನೆ ಕೊಡ್ತೀವಿ. ಹಿಂದೆ ಇದ್ದವರು ಈ ಕೆಲಸವನ್ನ ಯಾರೂ ಮಾಡಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಸಕ್ಸಸ್ ಆಗಿ ಲೋಕಸಭೆ ಗೆದ್ದಿದ್ದೇವೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಅವರು ದೊಡ್ಡವರು, ಮಾತನಾಡಲಿ. ಸದ್ಯ ಹೆಣ ಹೊರುವುದಕ್ಕೆ ನಾಲ್ಕು ಜನ ರೆಡಿ ಮಾಡಿದ್ದೇವೆ. ಅವರ ಕೆಲಸ ಅವರು ಮಾಡಲಿ. ಚುನಾವಣೆ ಬಗ್ಗೆ ಕುಮಾರಸ್ವಾಮಿಗೆ ಯಾವುದೇ ಟೆನ್ಷನ್ ಇಲ್ಲ. ಅವರ ಚುನಾವಣೆ ಆಗಿದ್ರೆ ಟೆನ್ಷನ್ ಇರ್ತಿತ್ತು. ಬೇರೆಯವರ ಚುನಾವಣೆಗೆ ಅವರೇಕೆ ಟೆನ್ಷನ್ ಮಾಡ್ಕೋತಾರೆ ಎಂದು ಹೇಳಿದ್ದಾರೆ.