ಕೇವಲ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡುವ ಕಾಂಗ್ರೆಸ್‌ನವರಿಗೆ, ರಾಜ್ಯದ ಜನರ ಹಿತ ಕಾಯುವುದು ಮುಖ್ಯವಾಗಿಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ದೂರಿದ ಅವರು, ಸಂಕಷ್ಟದಲ್ಲಿರುವ ರೈತರ ಹಾಗೂ ಜನರ ನೆರವಿಗೆ ಧಾವಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ ಬಿ.ಸಿ. ಪಾಟೀಲ್
ಕಲಬುರಗಿ(ನ.07): ಬಿಜೆಪಿಯ ವಿರುದ್ಧ ಆಪರೇಷನ್ ಕಮಲ ಆರೋಪ ಮಾಡುವ ಕಾಂಗ್ರೆಸ್‌ನವರ ಸರ್ಕಾರ ಪತನವಾದರೆ ಅದು ಅವರ ಪಕ್ಷದವರಿಂದಲೇ ಆಗುತ್ತದೆ. ಅವರಲ್ಲಿನ ಗೊಂದಲಗಳಿಂದಲೆ ರಾಜ್ಯ ಸರ್ಕಾರ ಬೀಳಲಿದೆ. ಸ್ವಲ್ಪ ದಿನದ ನಂತರ ಕಾಂಗ್ರೆಸ್‌ನಲ್ಲಿನ ರಾಜಕೀಯ ಗೊಂದಲ ಹೊರಬೀಳಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್ ಅವರು, ಕೇವಲ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡುವ ಕಾಂಗ್ರೆಸ್‌ನವರಿಗೆ, ರಾಜ್ಯದ ಜನರ ಹಿತ ಕಾಯುವುದು ಮುಖ್ಯವಾಗಿಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ದೂರಿದ ಅವರು, ಸಂಕಷ್ಟದಲ್ಲಿರುವ ರೈತರ ಹಾಗೂ ಜನರ ನೆರವಿಗೆ ಧಾವಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಕೆಇಎ ಪರೀಕ್ಷಾ ಅಕ್ರಮ: ದಾಖಲೆ ಇದ್ದರೆ ಮಾತನಾಡಿ, ಗಾಳಿಯಲ್ಲಿ ಗುಂಡು ಹೊಡಿಬೇಡಿ, ತೇಲ್ಕೂರ್‌ಗೆ ಖರ್ಗೆ ತಿರುಗೇಟು
ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಾನು ಕೃಷಿ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಪ್ರಕೃತಿ ವಿಕೋಪವನ್ನು ನಾವು ಸಮರ್ಥವಾಗಿ ಎದುರಿಸಿದೆವು. ಎನ್‍ಡಿಆರ್‌ಎಫ್ ನಿಯಮದಂತೆಯೇ ನಾವು 12 ಸಾವಿರ ರು. ಪರಿಹಾರವನ್ನು 28 ಸಾವಿರಕ್ಕೆ ಹೆಚ್ಚಿಸಿದ್ದೆವು. ಆದಾಗ್ಯೂ, ರಾಜ್ಯ ಸರ್ಕಾರವು ಆ ಕುರಿತು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ದೂಷಿಸಿದರು. ಗ್ಯಾರಂಟಿ ಯೋಜನೆಗಳೂ ಸಹ ಸಮರ್ಪಕವಾಗಿ ಜಾರಿಗೆ ಆಗುತ್ತಿಲ್ಲ. ಇಡೀ ಆಡಳಿತ ಯಂತ್ರ ಕುಸಿದಿದೆ. ರಾಜ್ಯದ ಬೊಕ್ಕಸ ದಿವಾಳಿಯಾಗಿದೆ ಎಂದರು.
ಸಿದ್ದರಾಮಯ್ಯ ಸಿಎಂ ಆದಾಗೆಲ್ಲಾ ರೈತರ ಬವಣೆ ಮುಗಿಲು ಮುಟ್ಟುತ್ತದೆ, ಅವರ ಅವಧಿಯಲ್ಲೆ ರೈತರ ಆತ್ಮಹತ್ಯೆಗಳೂ ಹೆಚ್ಚುತ್ತಿವೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ 2013- 2018 ಹಾಗೂ ಈಗಿನ 6 ತಿಂಗಳು ಅವಧಿಯಲ್ಲಿ ರಾಜ್ಯದಲ್ಲಿ ರೈತರ 4, 257 ಆತ್ಮಹತ್ಯೆ ಪ್ರಕರಣ ವರದಿಯಾಗಿವೆ. ಈಗಲೂ ರೈತರ ಆತ್ಮಹತ್ಯೆ ಸಂಖ್ಯೆ ಏರಲಿದೆ ಎಂದು ಅವರು ಆತಂಕ ಹೊರಹಾಕಿದ್ದಾರೆ.
ಈಗಂತೂ ಬರೀ ಗ್ಯಾರಂಟಿ ಯೋಜನೆ ಎಂದೆ ಕುಂತಿದ್ದಾರೆ, ಗ್ಯಾರಂಟಿಗೆ ಹಣ ಹರಿದು ಹೋಗುತ್ತಿದೆ. ರೈತರ ಬವಣೆಗೆ ಕೇಳೋರೇ ಇಲ್ಲದಂತಾಗಿದೆ. ಆಳುವವರ ಧೋರಣೆ ಹೀಗೆ ಮುಂದುವರಿದಲ್ಲಿ ಭೀಕರ ಬರಗಾಲದ ದವಡೆಗೆ ಸಿಲುಕಿರುವ ರೈತರು ಹಿಂದೆಂಗಿಂತಲೂ ಹೆಚ್ಚು ಪ್ರಾಣ ಕಳೆದುಕೊಳ್ಳುವ ಆತಂಕವಿದೆ ಎಂದರು.
ಸ್ವಪಕ್ಷೀಯರಿಂದಲೇ ಸರ್ಕಾರ ಪತನ:
ಕಾಂಗ್ರೆಸ್‌ನಲ್ಲಿನ ಧ್ವಂಧ್ವ ನಿಲುವುಗಳಿಂದಲೇ ರಾಜ್ಯ ಸರ್ಕಾರವು ಬಿದ್ದು ಹೋಗಲಿದೆ. ಅದಕ್ಕೆ ಬಿಜೆಪಿ ಕಾರಣವಾಗುವುದಿಲ್ಲ. ಯಾಕೆಂದರೆ ಈ ಸರ್ಕಾರ ನಿಯಂತ್ರಣ ತಪ್ಪಿ ಒಳಜಗಳ ಪ್ರಾರಂಭವಾಗಿದೆ. ಅವರಿಗೆ ರೈತರ ಏಳಿಗೆ ಮುಖ್ಯವಾಗಿಲ್ಲ.
ಪಂಚರಾಜ್ಯ ಚುನಾವಣೆ ವೇಳೆ ಇಡಿ ದಾಳಿ ಖಂಡನೀಯ: ಮಲ್ಲಿಕಾರ್ಜುನ ಖರ್ಗೆ
ರಾಜ್ಯದ ಜನರ ಕುರಿತು ಚಿಂತೆ ಇಲ್ಲ.
ಕಾಂಗ್ರೆಸ್‌ನವರಲ್ಲಿಯೇ ಯಾವುದೇ ರೀತಿಯಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಸಿದ್ದರಾಮಯ್ಯ ಅವರು ನಾನೇ ಐದು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಮತ್ತೊಮ್ಮೆ ಮಾಧ್ಯಮಗಳ ಮೇಲೆ ಆರೋಪ ಮಾಡುತ್ತಾರೆ. ಇಷ್ಟೊಂದು ಸುಳ್ಳುಗಳನ್ನು ಯಾಕೆ ಅವರು ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಇಂದು ಹೇಳಿದ್ದನ್ನು, ನಾಳೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಇಂತಹ ಸಂದರ್ಭದಲ್ಲಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹುಲಿ ಉಗುರು, ಪೆಂಡೆಂಟ್ ಇಲ್ಲದ ವಿವಾದವನ್ನು ಹುಟ್ಟುಹಾಕಿದೆ. ಹುಲಿ ಉಗುರು, ಪೆಂಡೆಂಟ್ ಧರಿಸಿರುವ ಅಧಿಕಾರಿಯೇ ನಾಪತ್ತೆಯಾಗಿದ್ದಾನೆ. ಆ ಕುರಿತು ಸರ್ಕಾರ ಮಾತನಾಡುತ್ತಿಲ್ಲ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ ಯಶವಂತರಾಯ್ ಅಷ್ಟಗಿ ಉಪಸ್ಥಿತರಿದ್ದರು.