
ವಿಜಯವಾಡ: ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಓಬುಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಂಧಿಸಿದ್ದ ಹಾಗೂ ಸಿಬಿಐ ಜಂಟಿ ನಿರ್ದೇಶಕರಾಗಿದ್ದಾಗ ಅನೇಕ ಹೈಪ್ರೊಫೈಲ್ ಹಗರಣಗಳ ತನಿಖೆ ನಡೆಸಿದ್ದ ವಿ.ವಿ. ಲಕ್ಷ್ಮೀನಾರಾಯಣ ಅವರು ಆಂಧ್ರಪ್ರದೇಶದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಘೋಷಿಸಿದ್ದಾರೆ. ಅವರ ಹೊಸ ಪಕ್ಷಕ್ಕೆ ‘ಜೈ ಭಾರತ್ ನ್ಯಾಷನಲ್ ಪಾರ್ಟಿ (ಜೆಬಿಎನ್‌ಪಿ) ಎಂದು ಹೆಸರಿಡಲಾಗಿದೆ.
ಸಿಬಿಐ ಜಂಟಿ ನಿರ್ದೇಶಕ (ಜಿ.ಡಿ.) ಆಗಿದ್ದಕ್ಕೆ ಲಕ್ಷ್ಮೀನಾರಾಯಣ ಅವರು ‘ಜೆ.ಡಿ.’ ಲಕ್ಷ್ಮೀನಾರಾಯಣ ಎಂದೇ ಖ್ಯಾತರಾಗಿದ್ದರು. ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿಯಾದ ಅವರು ಆಂಧ್ರದಲ್ಲಿ ನಿಯೋಜನೆ ಮೇರೆಗೆ ಕೆಲಸ ಮಾಡಿದ್ದರು. 2018ರಲ್ಲಿ ಸ್ವಯಂ ನಿವೃತ್ತಿಪಡೆದು ರಾಜಕೀಯ ಸೇರಿದ್ದರು. 2019ರ ಲೋಕಸಬೆ ಚುನಾವಣೆಯಲ್ಲಿ ಅವರು ನಟ ಪವನ್ ಕಲ್ಯಾಣ್ ಅವರ ಜನಸೇನಾ ಟಿಕೆಟ್‌ನಿಂದ ವಿಶಾಖಪಟ್ಟಣದಲ್ಲಿ ಸ್ಪರ್ಧಿಸಿ ಸೋತಿದ್ದರು. ನಂತರ ಪವನ್ ಜತೆ ಭಿನ್ನಾಭಿಪ್ರಾಯದ ಕಾರಣ ಜನಸೇನಾ ಪಕ್ಷ ತೊರೆದಿದ್ದರು. ಈಗ ಹೊಸ ಪಕ್ಷ ಜೆಬಿಎನ್‌ಪಿ ಸ್ಥಾಪನೆ ಘೋಷಣೆ ಮಾಡಿದ್ದಾರೆ.
ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ; ಶಾಸಕ ಜನಾರ್ದನ ರೆಡ್ಡಿ ಭರವಸೆ
ಹೈಪ್ರೊಫೈಲ್ ಹಗರಣಗಳ ತನಿಖೆ:
ಹೈದರಾಬಾದ್‌ನಲ್ಲಿ ಅವರು ಸಿಬಿಐನ ಜಂಟಿ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ವೇಳೆ ಸತ್ಯಂ ಕಂಪ್ಯೂಟರ್ಸ್, ಓಬುಳಾಪುರಂ ಮೈನಿಂಗ್ ಕಾರ್ಪೊರೇಷನ್ (ಒಎಂಸಿ) ಹಗರಣ, ಎಮ್ಮಾರ್ ಹಗರಣದ ತನಿಖೆ ನಡೆಸಿದ್ದರು. ಈ ಗಣಿ ಹಗರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು 2011ರಲ್ಲಿ ಬಂಧಿಸಿದ್ದರು. ಇದೇ ವೇಳೆ, ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಾಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿದ್ದರು.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ತುಂಗಭದ್ರಾ ನದಿಯ ಗಂಗೆ: ಶಾಸಕ ಜನಾರ್ದನ ರೆಡ್ಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.