Chitradurga: ಕಟೀಲ್ ರೀತಿ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಇಲ್ಲ: ಸಿದ್ದರಾಮಯ್ಯ

Published : Feb 22, 2023, 01:53 PM IST
Chitradurga: ಕಟೀಲ್ ರೀತಿ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಇಲ್ಲ: ಸಿದ್ದರಾಮಯ್ಯ

ಸಾರಾಂಶ

ಸಿದ್ದಾಂತ ಅಂದರೆ ಜನರ ಸಮಸ್ಯೆ ಪರಿಹಾರ ಮಾಡುವುದು. ಆದರೆ ಬಿಜೆಪಿಗೆ ಜನರ ಪ್ರಚೋದನೆ ಮಾಡಿ, ದ್ವೇಷದ ರಾಜಕಾರಣ ಮಾಡುವುದೇ ಸಿದ್ದಾಂತವಾಗಿದ್ದು, ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಜ್ಞಾನ ಗೊತ್ತಿಲ್ಲ ಎಂದಿದ್ದೆ ನಿಜ.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಫೆ.22): ಸಿದ್ದಾಂತ ಅಂದರೆ ಜನರ ಸಮಸ್ಯೆ ಪರಿಹಾರ ಮಾಡುವುದು. ಆದರೆ ಬಿಜೆಪಿಗೆ ಜನರ ಪ್ರಚೋದನೆ ಮಾಡಿ, ದ್ವೇಷದ ರಾಜಕಾರಣ ಮಾಡುವುದೇ ಸಿದ್ದಾಂತವಾಗಿದ್ದು, ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಜ್ಞಾನ ಗೊತ್ತಿಲ್ಲ ಎಂದಿದ್ದೆ ನಿಜ. ಇದೀಗ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡ್ಡಾ ಅವರ ಹೇಳಿಕೆಗೆ ಟಾಂಗ್ ಕೊಟ್ಟರು. 

ಚಿತ್ರದುರ್ಗ ಸಮೀಪದ ಕ್ಯಾದಿಗೆರೆ ಬಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸಿದ್ದಾಂತ ಇಲ್ಲ, ಸಿದ್ದರಾಮಯ್ಯ ಕಡು ಭ್ರಷ್ಟರು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಸಿದ್ದಾಂತ ಎನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಟಿಪ್ಪು ಸುಲ್ತಾನ್ ಚರ್ಚೆ ಸಿದ್ದಾಂತನಾ ?, ಸಾವರ್ಕರ್- ಗಾಂಧಿ ಚರ್ಚೆ ಸಿದ್ದಾಂತನಾ ?, ಸಿದ್ದರಾಮಯ್ಯ ಅವರನ್ನ ಮುಗಿಸಿ ಎಂಬುದು ಸಿದ್ದಾಂತನಾ? ಇದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮೋದಿ, ಅಮಿತ್ ಶಾ, ನಡ್ಡಾ  ಸೇರಿದಂತೆ ಬಿಜೆಪಿ ಯಾವುದೇ ನಾಯಕರು ಕರ್ನಾಟಕಕ್ಕೆ ನೂರು ಬಾರಿ ಬಂದರು ಸಹ ಗೆಲ್ಲೋದಿಲ್ಲ. 

ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ: ಸಿದ್ದು ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಬಿಜೆಪಿಯನ್ನು ಈ ಬಾರಿ ಜನ ಸೋಲಿಸುತ್ತಾರೆ. ಈಗಾಗಲೇ ತೀರ್ಮಾನ ಕೂಡ ಮಾಡಿದ್ದಾರೆ ಎಂದರು. ಮುಸ್ಲಿಂ ಓಲೈಕೆ ರಾಜಕೀಯ ಕಾಂಗ್ರೆಸ್ ಮಾಡುತ್ತೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮನುಷತ್ವದ ರಾಜಕೀಯ ಮಾಡುತ್ತದೆ‌. ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್, ದಲಿತರು ಎಲ್ಲರೂ ಕೂಡ ಮನುಷ್ಯರೇ. ಹಾಗಾಗಿ ಎಲ್ಲರನ್ನೂ ಮನುಷ್ಯರು ಎಂದು ನಾವು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ಕುಡಿಯುವ ನೀರಿನ ಘಟಕದಲ್ಲಿ ಬಾರಿ ಅವ್ಯವಹಾರ ಆಗಿದೆ. ಏನೂ ಆರೋಪ ಮಾಡಿದರೂ ದಾಖಲೆ ಕೊಡಿ ಎಂದು ಹೇಳುತ್ತಾರೆ. ನನ್ನ ಅವಧಿಯಲ್ಲಿ 8 ಬಾರಿ ಸಿಬಿಐ ತನಿಖೆಗೆ ಕೊಟ್ಟಿದ್ದೆ ಆದರೆ ಏನು ಕ್ರಮ ಕೈಗೊಂಡಿಲ್ಲ. ನನ್ನ ಅವಧಿಯಲ್ಲಿ ಆಗಿದ್ದರೂ ಕೂಡಾ ತನಿಖೆ ಮಾಡಿ. ನಿಮ್ಮ ಕೈ ಯಾರು ಹಿಡಿದುಕೊಂಡಿಲ್ಲ. 

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಲು ಮೋದಿ ಕಾರಣ: ಜೆ.ಪಿ.ನಡ್ಡಾ

ನನ್ನ ಕಾಲದ ಭ್ರಷ್ಟಾಚಾರದ ದಾಖಲೆ ಇದ್ದರೇ ತನಿಖೆ ಮಾಡಿ, 40% ಕಮಿಷನ್ ಕೂಡಾ ತನಿಖೆ ಮಾಡಿ ಯಾಕೆ ಹಿಂದೇಟು ಹೊಡೆಯುತ್ತೀರಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಸ್ಲೀಂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಅವರು ಹೆಣ್ಣು ಮಗಳು. ಜಾತಿ, ಧರ್ಮ ಅಂದರೆ  ಅವರಿಗೆ ಗೊತ್ತಿಲ್ಲ. ನಾವು ಎಲ್ಲಾ ಜಾತಿ, ಧರ್ಮಗಳ ಮೇಲೆ ಗೌರ ಇಟ್ಟುಕೊಂಡಿದ್ದೇವೆ. ಅನ್ನ ಭಾಗ್ಯ ಒಂದು ಜಾತಿ ಧರ್ಮಕ್ಕೆ ನಾವು ಕೊಟ್ಟಿಲ್ಲ. ಇಂದಿರಾ ಕ್ಯಾಂಟಿನ್ ಹಿಂದೂಗಳಿಗೆ ಮಾತ್ರ ಕೊಟ್ಟಿದ್ವಾ? ಹೇಳಿ. ಎಲ್ಲಾ ಜಾತಿ ಬಡವರಿಗೆ ಕಾರ್ಯಕ್ರಮ ನೀಡಿದ್ದರೆ ಅದು ನಮ್ಮ ಕಾಂಗ್ರೇಸ್ ನಮ್ಮ ಸರ್ಕಾರ ಎಂದು ಹೇಳಿದರು. ರಾಜ್ಯದಲ್ಲಿ ಮಹಿಳಾ ಐಎಎಸ್ - ಐಪಿಎಸ್ ಅಧಿಕಾರಿಗಳ ಜಗಳ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈಗಾಗಲೇ ಕ್ರಮ ವಹಿಸಿದೆ ಈ ಬಗ್ಗೆ ಮಾತಾಡಲ್ಲ. ಎಂದಷ್ಟೇ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್