Karnataka Politics: ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

By Kannadaprabha NewsFirst Published Jan 24, 2022, 4:08 AM IST
Highlights

*   ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ಬೆಳೆಸಲು ಈ ರೀತಿ ರಾಜ್ಯದಲ್ಲಿ ರಾಜಕಾರಣ ಮಾಡಲಾಗುತ್ತಿದೆ
*   ಬಿಜೆಪಿ ಸರ್ಕಾರ ಮೆಲ್ನೋಟಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದೆ
*   ಮೇಕೆದಾಟು ಯೋಜನೆಗೆ ವಿರೋಧ ಮಾಡಲು ತಮಿಳುನಾಡಿನವರಿಗೂ ಹಕ್ಕಿಲ್ಲ 

ಧಾರವಾಡ(ಜ.24): ಮೇಕೆದಾಜು ಯೋಜನೆ(Mekedatu Propject) ಜಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ. ರಾಜ್ಯ ಸರ್ಕಾರ ಕೇಳುತ್ತಿಲ್ಲ. ಆದರೆ, ಬಿಜೆ​ಪಿ​ಯ​ವರು ಡಬಲ್‌ ಇಂಜಿನ್‌ ಸರ್ಕಾರ ನಮ್ಮದು ಎನ್ನುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ(Tamil Nadu) ಬಿಜೆಪಿ ಸರ್ಕಾರ(BJP Government) ಬೆಳೆಸಲು ಈ ರೀತಿ ರಾಜ್ಯದಲ್ಲಿ ರಾಜಕಾರಣ(Politics) ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಮೆಲ್ನೋಟಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದೆ. ಮೇಕೆದಾಟು ಯೋಜನೆಗೆ ವಿರೋಧ ಮಾಡಲು ತಮಿಳುನಾಡಿನವರಿಗೂ ಹಕ್ಕಿಲ್ಲ. ಯೋಜನೆ ಜಾರಿಗೆ ಯಾವುದೇ ತೊಡಕಿಲ್ಲ. ಕಾಂಗ್ರೆಸ್‌ ಸರ್ಕಾರ(Congress Government) ಇದ್ದಾಗಲೇ ಡಿಪಿಆರ್‌(DPR) ಮಾಡಲಾಗಿದೆ. ಎಲ್ಲವೂ ಸರಿ ಇದ್ದಾಗ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು.

Karnataka Politics: ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಜೋಶಿ

ಸಿದ್ದರಾಮಯ್ಯ ಸಂವಿಧಾನ ಓದಿದ್ದಾನೆ. ಆದರೆ, ಕುಮಾರಸ್ವಾಮಿ ಓದಿದ್ದಾನಾ ಎಂದು ಪ್ರಶ್ನಿಸಿದ ಅವರು, ಜೆಡಿಎಸ್‌(JDS) ಪಕ್ಷವನ್ನು ದೇವೇಗೌಡರು(HD Devegowda) ಮತ್ತು ನಾನು ಕಟ್ಟಿದ್ದೇವೆ. 1999ರಲ್ಲಿ ಜೆಡಿಯು(JDU) ಜೆಡಿಎಸ್‌ ಆದಾಗ ನಾನು ರಾಜ್ಯಾಧ್ಯಕ್ಷ. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರು. ಆಗ 2004ರಲ್ಲಿ 59 ಸ್ಥಾನ ಗೆದ್ದಿದ್ದೇವು. ನಂತರ ಪಕ್ಷದಿಂದ ತೆಗೆದು ಹಾಕಿದಾಗ ಕಾಂಗ್ರೆಸ್ಸಿಗೆ ಹೋದೆ. ಕುಮಾರಸ್ವಾಮಿ 2008ರಲ್ಲಿ 28 ಸ್ಥಾನ ಗೆದ್ದರು. ನಾನು ಜೆಡಿಎಸ್‌ ಬಿಟ್ಟನಂತರ ಜೆಡಿಎಸ್‌ ಜಾತ್ಯಾತೀತ ಪಕ್ಷವಾಗಿ ಉಳಿಯಲಿಲ್ಲ. ನಾನು ಹೋದ ನಂತರ ಸತೀಶ್‌ ಜಾರಕಿಹೊಳಿ, ಇಬ್ರಾಹಿಂ, ಮಹಾದೇವಪ್ಪ, ವೆಂಕಟೇಶ್‌, ಬಿ.ಆರ್‌. ಪಾಟೀಲ ಹೀಗೆ ಪ್ರಮುಖರು ಬಿಟ್ಟು ಹೋದರು. ಸದ್ಯ ಜೆಡಿಎಸ್‌ ಫ್ಯಾಮಲಿ ಪಾರ್ಟಿಯಾಗಿ ಮಾತ್ರ ಉಳಿದಿದೆ ಎಂದು ಹಾಸ್ಯ ಮಾಡಿದರು.

ರಾಜ್ಯದಲ್ಲಿ(Karnataka) ಕೋವಿಡ್‌(Covid-19) ಹೆಚ್ಚಳವಾದ ಕಾರಣ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಂತಿದೆ. ಕೋವಿಡ್‌ ಕಡಿಮೆಯಾದ ನಂತರ ಮತ್ತೆ ಪಾದಯಾತ್ರೆ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕರ್ಫ್ಯೂ(Curgfew) ಜಾರಿ ಮಾಡಿದ್ದು ಈ ಪಾದಯಾತ್ರೆ ಮಾಡಬಾರದು ಎಂದು ಬಿಜೆಪಿ ನಡೆ ವಿರೋಧಿಸಿದರು.

ಅಲ್ಲದೇ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲ. ಹೀಗೆ ಎಷ್ಟು ದಿನ ಸರ್ಕಾರ ನಡೆಸುತ್ತಾರೆ? ಸಾಲ ಮಾಡಿ ಹೋಳಿಗೆ ತಿನ್ನಲು ಸಾಧ್ಯವಿಲ್ಲ. ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಈಗಾಗಲೇ ಬಿಜೆಪಿ ಸರ್ಕಾರ ಶೇ. 40 ಸರ್ಕಾರ ಎಂದು ಮೋದಿ ಅವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಇದಕ್ಕೆ ಮೋದಿ ಅವರು ಉತ್ತರ ಕೊಡಬೇಕಿದೆ. ನಾ ಕಾವುಂಗಾ, ಮೈ ಕಾನೆದುಂಗಾ ಎಂದು ಮೋದಿ ಹೇಳುತ್ತಾರೆ ಎಂದು ಪ್ರಧಾನಿ ಅವರನ್ನು ಸಿದ್ದರಾಮಯ್ಯ ಹಂಗಿಸಿದರು.

Mekedatu Politics: ಕೊರೋನಾ ಹೆಚ್ಚಳಕ್ಕೆ ಪ್ರಧಾನಿ ಮೋದಿ ಕಾರಣ: ಸಿದ್ದರಾಮಯ್ಯ

ಎಚ್‌ಡಿಕೆ ಭಾಷೆ ಅವರ ಸಂಸ್ಕೃತಿ ತೋರಿಸುತ್ತೆ: ಸಿದ್ದು ತಿರುಗೇಟು

ಬೆಂಗಳೂರು:  ತಮ್ಮ ಚುನಾವಣಾ ಸೋಲಿನ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಅವರಿಗೆ ತಿರುಗೇಟು ನೀಡಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ‘ಕುಮಾರಸ್ವಾಮಿ ಅವರ ಅಪ್ಪ ದೇವೇಗೌಡ, ಅಣ್ಣ ರೇವಣ್ಣ ಹಾಗೂ ಮಗ ಸೋತಿಲ್ಲವೇ? ಸೋಲು-ಗೆಲುವು ಜನರ ಅಭಿಪ್ರಾಯಕ್ಕೆ ಬಿಟ್ಟದ್ದು. ಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಕಿಡಿ ಕಾರಿದ್ದರು.

ಚಾಮುಂಡೇಶ್ವರಿಯಲ್ಲಿ ಸೋತಿರುವ ಸಿದ್ದರಾಮಯ್ಯ ಅವರನ್ನು ಬಾದಾಮಿಯಿಂದಲೂ ಜನ ಓಡಿಸುತ್ತಾರೆ ಎಂದು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ಹೇಳಿಕೆಗೆ ಇತ್ತೀಚೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಆದರೆ ಚುನಾವಣೆಯಲ್ಲಿ ಸೋಲು-ಗೆಲುವು ನಿರ್ಧಾರ ಮಾಡುವುದು ಮತದಾರ. ಮತದಾರ ಕೊಟ್ಟತೀರ್ಪನ್ನು ನಾವು ಸ್ವೀಕಾರ ಮಾಡಬೇಕು. ನಾನು ಸೋತಿದ್ದೇನೆ ನಿಜ. ಅವರ ಅಪ್ಪ ಸೋತಿಲ್ಲವೇ? ಮಗ ಸೋತಿಲ್ಲವೇ? ಅಣ್ಣ ಸೋತಿಲ್ಲವೇ? ಎಂದು ಪ್ರಶ್ನಿಸಿದರು.

ನಾನು ರಾಜ್ಯಾಧ್ಯಕ್ಷನಾದಾಗ ಎಚ್ಡಿಕೆ ಎಲ್ಲಿದ್ದರು?:

ನಾನು ಜೆಡಿಎಸ್‌ ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ದರು ಅಂತಾನೇ ಗೊತ್ತಿರಲಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈ ಕಟ್ಟಿನಿಲ್ಲಲಿ, ಕಣ್ಣೀರು ಹಾಕಲಿ. ಕಣ್ಣೀರು ಹಾಕುತ್ತಿರುವುದು ಯಾರು ಎಂಬುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಅದನ್ನು ನಾನು ಮತ್ತೆ ಹೇಳಬೇಕಿಲ್ಲ ಎಂದು ತಿರುಗೇಟು ನೀಡಿದರು.
 

click me!