Siddu VS HDK ಸಿದ್ದರಾಮಯ್ಯನವರನ್ನ ಸ್ವಯಂಘೋಷಿತ ಸಂವಿಧಾನ ಪಂಡಿತ ಎಂದು ಕರೆದ ಕುಮಾರಸ್ವಾಮಿ

By Suvarna News  |  First Published Jan 23, 2022, 5:12 PM IST

* ಮುಂದುವರೆದ ಮಾಜಿ ಮುಖ್ಯಮಂತ್ರಿಗಳ ವಾಕ್ ವಾರ್
* ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಉಮಾರಸ್ವಾಮಿ
* ಸಿದ್ದರಾಮಯ್ಯ ಮಾತಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ


ಬೆಂಗಳೂರು, (ಜ.23): ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ  ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswamy) ನಡುವಿನ ಟಾಕ್ ವಾರ್ ಮುಂದುವರೆದಿದೆ.

ತುಮಕೂರಿನಿಂದ ಜೆಡಿಎಸ್‌ನ ಓಡಿಸಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

Tap to resize

Latest Videos

Karnataka Politics ತುಮಕೂರು ಜಿಲ್ಲೆಯೇನು ನಿಮಪ್ಪನ ಜಹಗೀರಾ? ಸಿದ್ದುಗೆ ಎಚ್‌ಡಿಕೆ ಗುದ್ದು

ಇದೀಗ ಮತ್ತೆ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸ್ವಯಂಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ. ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಹೀಗಾಗಿ ನಾನು ಅವರಿಗೆ ಉತ್ತರವನ್ನು ನೀಡಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆ ಇರಬೇಕು. ಆ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ ಎಂದು ಗುಡುಗಿದ್ದಾರೆ.

ಸುಖಾಸುಮ್ಮನೆ ಅವರ ಬಗ್ಗೆ ಮಾತಾಡುವ ತೆವಲು ನಂಗಂತೂ ಇಲ್ಲ. ನಮ್ಮ ಪಕ್ಷದಿಂದ ಎಗರಿಸಿಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಳ್ತಾರೆ. ಅಂತಹವರು ನಮ್ಮ ಪಕ್ಷದ ಬಗ್ಗೆ ಏಕೆ ಮಾತನಾಡಬೇಕು ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ತುಮಕೂರಿನಿಂದ ಓಡಿಸಿ ಎಂದಿದ್ದು ಯಾವ ಸಂಸ್ಕೃತಿ? ಅಂತ ಸಿದ್ದರಾಮಯ್ಯಗೆ ಕೇಳಿದ್ದಾರೆ.

Karnataka Politics ಯಾಕ್ ನೀನ್ ಸೋತಿಲ್ವಾ, ನಿಮ್ಮಪ್ಪ ಸೋತಿಲ್ವಾ, ನಿನ್ ಮಗ ಸೋತಿಲ್ವಾ, ಎಚ್‌ಡಿಕೆಗೆ ಸಿದ್ದು ಗುದ್ದು

" ಸ್ವಯಂ ಘೋಷಿತ ಸಂವಿಧಾನ ಪಂಡಿತ " ಸಿದ್ದರಾಮಯ್ಯ ನಮ್ಮ ಪಕ್ಷ & ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ. 1/9

— H D Kumaraswamy (@hd_kumaraswamy)

ಜಿಲ್ಲೆಯಿಂದ ಪಕ್ಷವನ್ನು ಓಡಿಸಿ ಎನ್ನುವುದು ಎಂಥಾ ರಾಜಕೀಯ. ಲಂಗು ಲಗಾಮಿಲ್ಲದೆ ನಾಲಗೆ ಹರಿಬಿಡುವವರಿಂದ ನಾನು ಭಾಷೆ, ಸಂಸ್ಕೃತಿ ಬಗ್ಗೆ ಕಲಿಯಬೇಕಿಲ್ಲ ಅಂತ ಟ್ವೀಟ್ ಮೂಲಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸುಳ್ಳಿನ ಸಿದ್ದಪುರುಷ’ನಿಂದ ಭಾಷೆ-ಸಂಸ್ಕೃತಿ ಕುರಿತು ಪಾಠವೇ? ಅವರಿಂದ ನಾನು ಪಾಠ ಕಲಿಯಬೇಕಾ. ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಅಂತಾರೆ, ನನ್ನ ಜಪ ಮಾಡುತ್ತಾರೆ. ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ವಿಷ ಕಾರುವುದು ಸುಳ್ಳಾ? ಸಿದ್ದರಾಮಯ್ಯ ಹೇಳಿಕೆಗಳನ್ನು ಇಡೀ ರಾಜ್ಯವೇ ಕೇಳಿಸಿಕೊಂಡಿದೆ ಅಂತ ಕುಮಾರಸ್ವಾಮಿ ಹೇಳಿದರು.

ಈ ಸತ್ಯ ಆಚೆ ಬಿದ್ದರೆ ಆ ಸಿದ್ದಹಸ್ತರು ಮುಖವನ್ನು ಎಲ್ಲಿ ಇಟ್ಟುಕೊಳ್ಳುತ್ತಾರೆ? ದೇವರಾಜ ಅರಸು ಅವರ ನಂತರ ' ಐದು ವರ್ಷದ ಮುಖ್ಯಮಂತ್ರಿ ' ಎಂದು ಹೇಳಿಕೊಳ್ಳುವ ಅಪರ ಸಿದ್ದಪುರುಷರ ಪಾಡೇನು? ' ಐದು ವರ್ಷದ ಮುಖ್ಯಮಂತ್ರಿ ' ಎಂಬ ಪ್ರಭಾವಳಿಯ ಕಥೆ ಏನು? 9/9

— H D Kumaraswamy (@hd_kumaraswamy)

ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ ಅಂತ ಸಿದ್ದರಾಮಯ್ಯ ಹೇಳ್ತಾರೆ. ಇದು ಭ್ರಮೆಯ ಪರಮಾವಧಿ, ಹತಾಶೆ. ಮತ್ತೆ ಸಿಎಂ ಆಗಲ್ಲ ಎಂದು ಖಚಿತವಾದ ಮೇಲೆ ಹತಾಶೆ, ಅಸಹನೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ. ಇದು ವಿಪರೀತಕ್ಕೆ ಹೋಗಿದೆ ಎನ್ನುವುದಕ್ಕೆ ಅವರ ಹೇಳಿಕೆ ಸಾಕ್ಷಿ. ಚುನಾವಣೆಯಲ್ಲಿ ಸೋತಿದ್ದಕ್ಕೆ ನಾವು ಯಾರೂ ಕಣ್ಣೀರಾಕಿಲ್ಲ. ಆದರೆ ಸಿದ್ದಹಸ್ತರ ಕಣ್ಣೀರ ಕೋಡಿಯನ್ನ ದೇವೇಗೌಡರು ಕಂಡಿದ್ದರು. ಕಮಿಷನ್ ವ್ಯವಹಾರದಲ್ಲಿ ತಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ. ಆದರೆ ಅರ್ಕಾವತಿ ಆರ್ತನಾದಕ್ಕೆ ಕಾರಣ ಯಾರು? ಅಂತ ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಏಕಚನದಲ್ಲಿ ಬೈದಿದ್ದ ಕುಮಾರಸ್ವಾಮಿ
ತುಮಕೂರಿನಿಂದ ಜೆಡಿಎಸ್ ಓಡಿಸಿ ಎನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್ ನ ಪಿತ್ರಾರ್ಜಿತ ಆಸ್ತಿಯಾ? ಅಂತೆಲ್ಲಾ ಕುಮಾರಸ್ವಾಮಿ ಕಿಡಿಕಾರಿದ್ದರು. 

ಎಚ್‌ಡಿಕೆಗೆ ಟಾಂಗ್ ಕೊಟ್ಟಿದ್ದ ಸಿದ್ದು
ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿಸಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರ. ಜನರ ತೀರ್ಪನ್ನು ಸ್ವೀಕಾರ ಮಾಡಲೇಬೇಕು. ಚುನಾವಣೆ ನಾನು ಸೋತ್ತಿದ್ದೇನೆ. ಯಾಕೆ ಕುಮಾರಸ್ವಾಮಿ ಸೋತಿಲ್ವಾ, ಅವರಪ್ಪ ಸೋತಿಲ್ಲಾ, ಮಗ ಸೋತಿಲ್ವಾ ಎಂದು ತಿರುಗೇಟು ನೀಡಿದ್ದರು.

click me!