ಅನೇಕ ಭಾಗ್ಯಗಳನ್ನು ನೀಡಿದ್ದೆ, ಬಿಜೆಪಿ ಎಲ್ಲ ಕಸಿಯಿತು: ಸಿದ್ದರಾಮಯ್ಯ

By Kannadaprabha News  |  First Published Oct 21, 2021, 7:57 AM IST

*   ಕೋವಿಡ್‌ ಪರಿಹಾರಕ್ಕೆ ದುಡ್ಡಿಲ್ಲ, ಕುದುರೆ ವ್ಯಾಪಾರಕ್ಕೆ ಎಲ್ಲಿಂದ ಬಂತು?
*   ಸರ್ಕಾರ ರಚಿಸಿದ ಯಡಿಯೂರಪ್ಪರನ್ನೇ ಕಿತ್ತೆಸೆದರು
*   ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದ ಬಿಜೆಪಿ
 


ತಾಂಬಾ(ಅ.21): ಬಡಜನರಿಗೆ(Poor) ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಭಾಗ್ಯಗಳನ್ನು ನೀಡಿದ ಸರ್ಕಾರ(Government) ನಮ್ಮದಾಗಿತ್ತು. ಆದರೆ, ಆ ಎಲ್ಲಾ ಭಾಗ್ಯಗಳನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಟೀಕಿಸಿದ್ದಾರೆ. 

ವಿಜಯಪುರ(Vijayapura) ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಕಾಂಗ್ರೆಸ್‌(Congress) ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ... ಹೀಗೆ ನಮ್ಮ ಸರ್ಕಾರದ ಹಲವು ಯೋಜನೆಗಳು ಇಂದು ಸ್ಥಗಿತಗೊಂಡಿವೆ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಐದು ಕೆ.ಜಿ.ಗೆ ಇಳಿಸಲಾಗಿದೆ. ಕೋವಿಡ್‌(Covid19) ಅವಧಿಯಲ್ಲಿ ಜನರಿಗೆ ನೆರವು ನೀಡಲು ಇವರ ಬಳಿ ಹಣವಿರಲಿಲ್ಲ. ಆದರೆ, ಹಿಂಬಾಗಿಲಿನಿಂದ ಶಾಸಕರ ಕುದುರೆ ವ್ಯಾಪಾರ ಮಾಡಿ ಸರ್ಕಾರ ರಚನೆ ಮಾಡಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

Latest Videos

undefined

'ಮೋದಿ, ನಾವು ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡಿರುವ 1 ಉದಾಹರಣೆ ಇದ್ರೆ ಕೊಡಿ'

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬಡವರಿಗಾಗಿ ಪ್ರತಿ ಬಾರಿ ಮನೆಗಳ ಮಂಜೂರು ಮಾಡಿದ್ದೆವು. ಈಗ ಬಿಜೆಪಿ(BJP) ಸರ್ಕಾರ ಒಂದು ಮನೆಯನ್ನೂ ಮಂಜೂರು ಮಾಡುತ್ತಿಲ್ಲ. ಜನರಿಗೆ ಬರೀ ಸುಳ್ಳು ಹೇಳಿ ಕೋಟಿ ಕೋಟಿ ಹಣ ಲೂಟಿ ಹೊಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಯಡಿಯೂರಪ್ಪ(BS Yediyurappa) ಅವರನ್ನು ಮುಂದೆ ಬಿಟ್ಟು ಕೋಟ್ಯಂತರ ರುಪಾಯಿ ಖರ್ಚು ಮಾಡಿಸಿ, ಸರ್ಕಾರ ರಚನೆ ಮಾಡಿಸಿದರು. ಎರಡು ವರ್ಷ ಆಗುತ್ತಿದ್ದಂತೆ ಯಡಿಯೂರಪ್ಪ ಅವರನ್ನೇ ಕಿತ್ತುಬಿಸಾಕಿದರು ಎಂದು ಲೇವಡಿ ಮಾಡಿದರು.
 

click me!