* ಸಿಂದಗಿ ಉಪಚುನಾವಣೆ ಹಿನ್ನೆಲೆ ಗೋಲಗೇರಿ ಗ್ರಾಮದಲ್ಲಿ ಬಿಎಸ್‌ವೈ ಪ್ರಚಾರ ಭಾಷಣ
* ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾದ ಮಾಜಿ ಸಿಎಂ ಯಡಿಯೂರಪ್ಪ
* ಮೋದಿ, ನಾವು ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡಿರುವ 1 ಉದಾಹರಣೆ ಇದ್ರೆ ಕೊಡಿ ಎಂದ ಬಿಎಸ್‌ವೈ
ವಿಜಯಪುರ, (ಅ.20): ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (By Election) ಕಣ ರಂಗೇರಿದ್ದು, ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ.
ಅದರಲ್ಲೂ ಆರ್‌ಎಸ್‌ಎಸ್ (RSS) ಹಾಗೂ ಮುಸ್ಲಿಂ (Muslim) ವಿಚಾರವಾಗಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಾಯಕರ ವಾಕ್ಸಮರ ವೈಯಕ್ತಿಕ ಮಟ್ಟಕ್ಕೆ ಹೋಗಿದೆ. ಅದರಲ್ಲೂ ಜೆಡಿಎಸ್ ಮತ್ತಿ ಕಾಂಗ್ರೆಸ್ ಮುಸ್ಲಿಂ ಮತಗಳನ್ನ ಸೆಳೆಯಲು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಸಹ ಮುಸ್ಲಿಂ ಮತಗಳನ್ನ ಸೆಳೆಯಲು ಪಯತ್ನಿಸಿದರು.
ಜೆಡಿಎಸ್, ಬಿಜೆಪಿ ಒಳ ಒಪ್ಪಂದ'': ಸುದ್ದಿಗೋಷ್ಠಿಯಲ್ಲಿ ಇದೆಂತಹಾ ಮಾತು!
ಹೌದು...ಇಂದು (ಅ.2)) ಸಿಂದಗಿ (Sindagi) ಉಪಚುನಾವಣೆ ಹಿನ್ನೆಲೆ ಗೋಲಗೇರಿ ಗ್ರಾಮದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ.
ಮುಸ್ಲಿಂಮರಿಗೆ ನಾನು ಯಾವತ್ತೂ ಬೇಧಭಾವ ಮಾಡಿಲ್ಲ.. ಮುಸ್ಲಿಂ ಬಾಂಧವರಿಗೆ ತಪ್ಪಿಸಿ, ಹಿಂದುಗಳಿಗೆ ಏನೂ ಹೆಚ್ಚು ಕೊಟ್ಟಿಲ್ಲ. ನೀವ್ಯಾಕೋ ನನ್ನಿಂದ ದೂರ ಹೋಗ್ತಿರೋ ಹಾಗೆ ಕಾಣ್ತಿದೆ. ನನ್ನ ಮೇಲೆ ನಂಬಿಕೆಯಿಡಿ, ನಮಗೆ ಬೆಂಬಲಿಸಿ ಅಂತಾ ಮುಸ್ಲಿಂ ಬಾಂಧವರಿಗೆ ಬಿಎಸ್‌ವೈ ಮನವಿ ಮಾಡಿದ್ದಾರೆ. ಅಲ್ಲದೇ ನನ್ನಿಂದ ಅಲ್ಪಸಂಖ್ಯಾತರಿಗೆ ಏನಾದ್ರೂ ಸಮಸ್ಯೆಯಾಗಿದೆಯಾ..? ಸಮಸ್ಯೆಯಾಗಿದೆ ಅಂತಾ ಒಂದೇ ಒಂದು ಉದಾಹರಣೆ ಕೊಡಿ ಎಂದರು.