ನಾವು ಅಧಿಕಾರಕ್ಕೆ ಬಂದರೆ ಏನು ಮಾಡ್ತೇವೆ ಎಂಬ ಭರವಸೆಗಳನ್ನು ಕೊಡುತ್ತಿದ್ದೇವೆ, ಇದು ಕೇವಲ ನೆಗೆಟಿವ್ ಕ್ಯಾಂಪೇನಿಂಗ್ ಅಲ್ಲ ಎಂದ ಸಿದ್ದರಾಮಯ್ಯ
ಬೀದರ್(ಫೆ.04): ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಚಾರ್ಜಶೀಟ್‌ನ್ನು ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಜನತೆಯ ಮುಂದೆ ಪಾಪದ ಪುರಾಣ ಎಂದು ಅವರ ಕರ್ಮ ಕಾಂಡಗಳನ್ನು ಬಿಚ್ಚಿಟ್ಟಿದ್ದು, ಜನರಿಂದ ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನುಡಿದರು.
ಅವರು ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆಯ ಉದ್ಘಾಟನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅಧಿಕಾರಕ್ಕೆ ಬಂದರೆ ಏನು ಮಾಡ್ತೇವೆ ಎಂಬ ಭರವಸೆಗಳನ್ನು ಕೊಡುತ್ತಿದ್ದೇವೆ, ಇದು ಕೇವಲ ನೆಗೆಟಿವ್ ಕ್ಯಾಂಪೇನಿಂಗ್ ಅಲ್ಲ ಎಂದರು.
ಬಿಜೆಪಿ ನಾಯಕರನ್ನ ನೆನೆದು ಆನಂದ ಭಾಷ್ಪ ಹೊರ ಹಾಕಿದ ಪದ್ಮಶ್ರೀ ಪುರಸ್ಕೃತ ಶಾ ಅಹ್ಮದ್ ಖಾದ್ರೆ
ಎಸ್‌ಸಿ-ಎಸ್‌ಟಿ ಜನಾಂಗದವರ ಏಳ್ಗೆಗೆ 10 ಅಂಶಗಳ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿ ಘೋಷಿಸಿದ್ದೇವೆ. ಅದರಂತೆ 2ಲಕ್ಷ ಕೋಟಿ ರು. ಗಳ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ, ಬಾಕಿಯುಳಿದ ಯೋಜನೆಗಳನ್ನು 5 ವರ್ಷದಲ್ಲಿ ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಏಳ್ಗೆಗೆ 5 ಸಾವಿರ ಕೋಟಿ ರು. ಗಳನ್ನು ನೀಡುವದರ ಜೊತೆಗೆ ಈ ಭಾಗದ 41ಕ್ಷೇತ್ರಗಳ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕೋಟಿ ರು. ಗಳನ್ನು ಪ್ರತಿ ವರ್ಷ ನೀಡಲು ನಿರ್ಧರಿಸಿದ್ದೇವೆ. ಈ ಹಿಂದೆ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಭರ್ತಿ ಮಾಡಿದ್ದೇವು. ಇವರು ಹೈದ್ರಾಬಾದ್ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.