ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನನ್ನು ಕೆಲ ಪಕ್ಷಗಳು ಮಾತ್ರ ಬಹಿಷ್ಕರಿಸಿದ್ದವು. ಆ ರೀತಿ ಆಗದೆ ಜೂ.23ರಂದು ನಡೆಯುವ ಪ್ರತಿಪಕ್ಷಗಳ ಸಭೆಯಲ್ಲಿ ಎಲ್ಲರೂ ಪಾಲ್ಗೊಂಡರೆ ಮಾತ್ರ ಬೇರೆಯದೇ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ: ಜಗದೀಶ್ ಶೆಟ್ಟರ್
ಮೈಸೂರು(ಜೂ.11): ಮುಂಬರುವ ಲೋಕಸಭಾ ಚುನಾವಣೆಗೆ ಈಗಿಂದಲೇ ಪ್ರತಿಪಕ್ಷಗಳು ಒಗ್ಗಟ್ಟಾದರೆ ಮಾತ್ರ ಫಲಿತಾಂಶ ಬದಲಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು. ಮೈಸೂರಿನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷ ಸಾಮೂಹಿಕ ನಾಯಕತ್ವ ಮತ್ತು ಸ್ಥಳೀಯ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕೇ ಹೊರತು ಒಬ್ಬರ ಹಿಡಿತದಲ್ಲಿ ಇರಬಾರದು. ಲೋಕಸಭಾ ಚುನಾವಣೆಯಲ್ಲಿ ಮತ ಹಂಚಿಕೆಯು, ವಿಧಾನಸಭಾ ಚುನಾವಣೆಗಿಂತ ವಿಭಿನ್ನವಾಗಿರುತ್ತದೆ. ಆದ್ದರಿಂದ ವಿಪಕ್ಷಗಳು ಒಂದುಗೂಡಬೇಕು ಎಂದರು.
ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನನ್ನು ಕೆಲ ಪಕ್ಷಗಳು ಮಾತ್ರ ಬಹಿಷ್ಕರಿಸಿದ್ದವು. ಆ ರೀತಿ ಆಗದೆ ಜೂ.23ರಂದು ನಡೆಯುವ ಪ್ರತಿಪಕ್ಷಗಳ ಸಭೆಯಲ್ಲಿ ಎಲ್ಲರೂ ಪಾಲ್ಗೊಂಡರೆ ಮಾತ್ರ ಬೇರೆಯದೇ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
undefined
ಐತಿಹಾಸಿಕ ಜಯ ನನ್ನದಲ್ಲ, ಈ ರಾಜ್ಯದ ಜನರದ್ದು: ಕೃತಜ್ಞತಾ ಸಮಾವೇಶದಲ್ಲಿ ಸಿದ್ದು ಭಾವುಕ ನುಡಿ
ಬಿಜೆಪಿಯಲ್ಲಿ ಈ ಬಾರಿ ಚುನಾವಣೆ ಸಂದರ್ಭದಲ್ಲಿ ಕೆಲವರ ಹಿಡಿತದಲ್ಲಿ ಪಕ್ಷ ಇತ್ತು. ಅಯೋಧ್ಯೆ, ರಾಮಮಂದಿರ ಚಳವಳಿಯನ್ನು ಮುಂದಿಟ್ಟುಕೊಂಡು ಚುನಾವಣೆ ನಡೆದಾಗ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮುಂತಾದ ಕಡೆ ಯಾವುದೇ ಪರಿಣಾಮ ಬೀರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳಲು ಸ್ಥಳೀಯ ನಾಯಕತ್ವ ಮತ್ತು ಸ್ಥಳೀಯ ಸಮಸ್ಯೆಗಳು ಕಾರಣವೇ ಹೊರತು, ಆಯೋಧ್ಯೆ, ರಾಮಮಂದಿರ ಅಲ್ಲ ಎಂದರು.